ADVERTISEMENT

ವಾಹನ ಅಪಘಾತ ಪ್ರಕರಣ: ಚಾಲಕನಿಗೆ ದಂಡ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 13:38 IST
Last Updated 7 ಡಿಸೆಂಬರ್ 2022, 13:38 IST

ವಿಜಯಪುರ: ಬಸವನಬಾಗೇವಾಡಿ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ 2019ರ ಜನವರಿ 11ರಂದು ನಡೆದಿದ್ದ ವಾಹನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್‌ ಮತ್ತು ಜೆಎಂಎಫ್‌ಸಿ ಕೋರ್ಟ್‌ ವಾಹನದ ಚಾಲಕನಿಗೆ ದಂಡದೊಂದಿಗೆ ಸಾದಾ ಶಿಕ್ಷೆ ವಿಧಿಸಿದೆ.

ಸಿಂದಗಿ ತಾಲ್ಲೂಕಿನ ಇಂಗಳಗಿಯ ಚಾಲಕ ಸಂತೋಷ ನಿಂಗಣ್ಣ ಮಂಗಳೂರು ಎಂಬಾತ ಮಹೇಂದ್ರಾ ಗೂಡ್ಸ್‌ ವಾಹನವನ್ನು ಅಜಾಗರೂಕತೆಯಿಂದ ಚಲಾಯಿಸಿ, ಕೆಡವಿದ ಪರಿಣಾಮ ತಮದಡ್ಡಿಯ ನಿವಾಸಿಗಳಾದ ಸಾಹೇಬಗೌಡ ಕುಂಟರೆಡ್ಡಿ, ಕೊಡೆಪ್ಪ ಮಡಿವಾಳರ ಸಾವಿಗೆ ಕಾರಣವಾಗಿದ್ದಕ್ಕೆ ಬಸವನಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಅಂದಿನ ಸಿಪಿಐ ಮಹಾದೇವ ಶಿರಹಟ್ಟಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ವಿಚಾರಣೆ ನಡೆಸಿದ ಬಸವನಬಾಗೇವಾಡಿ ಸಿವಿಲ್‌ ಮತ್ತು ಜೆಎಂಎಫ್‌ಸಿ ಕೋರ್ಟ್‌ ನ್ಯಾಯಾಧೀಶರಾದ ತೇಜಸ್ವಿನಿ ಸೊಗಲದ ಅವರು ಆರೋಪಿ ಚಾಲಕನಿಗೆ ಸಾದಾ ಶಿಕ್ಷೆ ಮತ್ತು ಒಟ್ಟು ₹ 3 ಸಾವಿರ ದಂಡ ವಿಧಿಸಿದ್ದಾರೆ.

ADVERTISEMENT

ಸರಕು ಸಾಗಾಣಿಕೆ ವಾಹನದಲ್ಲಿ ಜನರನ್ನು ಹತ್ತಿಸಿಕೊಂಡು ಪರ್ಮಿಟ್‌ ಉಲ್ಲಂಘನೆ ಮಾಡಿದ್ದರಿಂದ ₹ 2 ಸಾವಿರ ದಂಡ ವಿಧಿಸಿ, ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾದ ಬಿ.ಎಸ್ ಬಳ್ಳೂಳ್ಳಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.