ADVERTISEMENT

ಬಾಗಲಕೋಟೆ ಗಲಭೆ ಪ್ರಕರಣ: ‘ಗೂಂಡಾಗಳನ್ನು ಬಂಧಿಸಿ ಗಡಿಪಾರು ಮಾಡಿ’

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:58 IST
Last Updated 27 ಫೆಬ್ರುವರಿ 2026, 7:58 IST
ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಮೆರವಣಿಗೆಯಲ್ಲಿ‌ ಕಲ್ಲೆಸೆದು ಗಲಭೆ ಸೃಷ್ಟಿಸಿದವರನ್ನು ಬಂಧಿಸಿ ಗಡಿಪಾರಿಗೆ ಆಗ್ರಹಿಸಿ ವಿಎಚ್‌ಪಿ ಭಜರಂಗದಳದಿಂದ ಬಸವನಬಾಗೇವಾಡಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು
ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಮೆರವಣಿಗೆಯಲ್ಲಿ‌ ಕಲ್ಲೆಸೆದು ಗಲಭೆ ಸೃಷ್ಟಿಸಿದವರನ್ನು ಬಂಧಿಸಿ ಗಡಿಪಾರಿಗೆ ಆಗ್ರಹಿಸಿ ವಿಎಚ್‌ಪಿ ಭಜರಂಗದಳದಿಂದ ಬಸವನಬಾಗೇವಾಡಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು   

ಬಸವನಬಾಗೇವಾಡಿ: ಬಾಗಲಕೋಟೆಯಲ್ಲಿ ಈಚೆಗೆ ಶಿವಾಜಿ ಜಯಂತಿ ಮೆರವಣಿಗೆಯ ಮೇಲೆ ಕಲ್ಲು ತೂರಿ, ಗಲಭೆ ಸೃಷ್ಟಿಸಿದವರನ್ನು ಬಂಧಿಸಿ, ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಿದ ಬೃಹತ್ ಪ್ರತಿಭಟನಾ ಮೆರವಣಿಗೆಯೂ ಪಟ್ಟಣದ ಅಂಬಾಭವಾನಿ ದೇವಸ್ಥಾದಿಂದ ಪ್ರಾರಂಭವಾಗಿ ಗೌರಿ ಗುಡಿ, ಬಸವ ಸ್ಮಾರಕ, ಅಗಸಿ ಮೂಲಕ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮುಖಂಡ ಅಶೋಕ‌ ಹಾರಿವಾಳ, ಮಹೇಶ ಸಾಲೋಡಗಿ ಮಾತನಾಡಿ, ಮೆರವಣಿಗೆ ವೇಳೆ ಮತಾಂಧರು ಗಲಭೆ ಮಾಡಿ, ಶಿವಾಜಿ ಮಹಾರಾಜರಿಗೆ ಹಾಗೂ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಹಿಂದೂ ದೇವತೆಗಳು, ಮಹಾನ್ ಪುರುಷರ ಶಾಂತ‌ ಮೆರವಣಿಗೆಗಳ‌ ವೇಳೆ ಈ ರೀತಿ ಮತಾಂಧ ಗೂಂಡಾಗಳು ಪದೇಪದೇ ಕಲ್ಲೆಸೆದು ಅವಮಾನಿಸುತ್ತಿರುವುದು ಅಸಹನೀಯ. ಹಿಂದೂ‌ ಸಮಾಜ ಸಹನೆ ಮೀರುವ ಮೊದಲು ಸರ್ಕಾರ ಕೂಡಲೇ ಎಚ್ಚೆತ್ತು ಕೃತ್ಯವೆಸಗಿದ ಗೂಂಡಾಗಳನ್ನು ಬಂಧಿಸಿ, ಕಠಿಣ ಕ್ರಮ ಕೈಗೊಂಡು‌ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಮುಖಂಡರಾದ ಶ್ರೀಶೈಲ‌ ಗಂಗೂರ, ಮುದಕಣ್ಣ ಹೊರ್ತಿ, ಸಂಗಮೇಶ ಓಲೇಕಾರ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಮುಖಂಡರಾದ ಅಶ್ವಿನಕುಮಾರ ಪಟ್ಟಣ, ದಯಾನಂದ ಸಾರವಾಡ, ಬಸವರಾಜ ಬಿಜಾಪುರ, ಸೀತಾರಾಮ ಭಜಂತ್ರಿ, ವಿನುತ್ ಕಲ್ಲೂರ, ಅನಿಲ ಮುಳವಾಡ, ಪ್ರವೀಣ ಪವಾರ, ಸಂತೋಷ ಪವಾರ, ಕಲ್ಲು ಸೊನ್ನದ, ಅಮರ ಗಾಯಕ್ವಾಡ, ಸ್ವರೂಪಾರಾಣಿ ಬಿಂಜಲಭಾವಿ, ರೂಪ ಜಾಧವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.