ADVERTISEMENT

ಮಳೆನಾಡಾದ ವಿಜಯಪುರ; ದಿನವಿಡೀ ತುಂತುರು ಮಳೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 16:21 IST
Last Updated 17 ಆಗಸ್ಟ್ 2021, 16:21 IST
ವಿಜಯಪುರ ನಗರದಲ್ಲಿ ಸುರಿಯುವ ಮಳೆಯ ನಡುವೆ ಬೈಕ್‌ ಮೇಲೆ ತೆರಳುತ್ತಿರುವಾಗ ಗಾಳಿಗೆ ತಿರುವಿಕೊಂಡು ಛತ್ರಿಯನ್ನು ಸರಿಪಡಿಸಿಕೊಳ್ಳುತ್ತಿರುವ ಮಹಿಳೆ –ಪ್ರಜಾವಾಣಿ ಚಿತ್ರ
ವಿಜಯಪುರ ನಗರದಲ್ಲಿ ಸುರಿಯುವ ಮಳೆಯ ನಡುವೆ ಬೈಕ್‌ ಮೇಲೆ ತೆರಳುತ್ತಿರುವಾಗ ಗಾಳಿಗೆ ತಿರುವಿಕೊಂಡು ಛತ್ರಿಯನ್ನು ಸರಿಪಡಿಸಿಕೊಳ್ಳುತ್ತಿರುವ ಮಹಿಳೆ –ಪ್ರಜಾವಾಣಿ ಚಿತ್ರ   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ದಿನ ಪೂರ್ತಿ ತುಂತುರು ಮಳೆಯಾಯಿತು. ಬಯಲು ಸೀಮೆ ಮಳೆನಾಡಿನಂತೆ ಕಂಡುಬಂದಿತು.

ಬೆಳಿಗ್ಗೆ ಆರಂಭವಾದ ತುಂತುರು ಮಳೆ ಮಧ್ಯಾಹ್ನ 3ರ ವರೆಗೆಗೂ ಒಂದು ಕ್ಷಣವೂ ಬಿಡದೇ ತುಂತುರು ಮಳೆ ನಡುವೆ ಒಮ್ಮೊಮ್ಮೆ ರಭಸದ ಮಳೆಯೂ ಸರಿಯಿತು.

ಜಿನುಗುವ ಮಳೆಯಿಂದಾಗಿ ಸಂತೆ, ಬೀದಿ ವ್ಯಾಪಾರಕ್ಕೆ ಅಡಚಣೆಯಾಯಿತು. ಮಳೆಯ ಪರಿಣಾಮ ದೈನಂದಿನ ಸಹಜ ಜನಜೀವನಕ್ಕೆ ಅಡಚಣೆಯಾಯಿತು.

ADVERTISEMENT

ಈ ಮೊದಲೇ ಗುಂಡಿಬಿದ್ದು ಹದಗೆಟ್ಟಿದ್ದ ನಗರ ರಸ್ತೆಗಳಲ್ಲಿ ನೀರು ನಿಂತು ಕೆಸರುಮಯವಾಗಿದ್ದರಿಂದ ಜನ, ವಾಹನ ಸಂಚಾರಕ್ಕೆ ಮಳೆಯಿಂದ ಕಿರಿಕಿರಿಯಾಯಿತು.

ಬಹಳ ದಿನಗಳಿಂದ ಮಳೆಯಿಲ್ಲದೇ ಬಾಡುವ ಭೀತಿ ಎದುರಿಸಿದ್ದಬೆಳೆಗಳಿಗೆ ಹದಮಳೆಯಿಂದ ಅನುಕೂಲವಾಗಿರುವುದರಿಂದ ರೈತರ ಮೊಗದಲ್ಲಿ ನಗು ಚಿಮ್ಮಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.