ADVERTISEMENT

ವಿಜಯಪುರ: ಐದು ದಿನ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಆಗ್ರಹ

ಬ್ಯಾಂಕ್ ನೌಕರರ ಸಂಘಟನೆಗಳ ಸಂಯುಕ್ತ ವೇದಿಕೆಯಿಂದ ಮುಷ್ಕರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:26 IST
Last Updated 28 ಜನವರಿ 2026, 7:26 IST
ವಿಜಯಪುರ ನಗರದ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಮಂಗಳವಾರ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದರು
ವಿಜಯಪುರ ನಗರದ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಮಂಗಳವಾರ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದರು   

ವಿಜಯಪುರ: ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಿ ಬ್ಯಾಂಕ್ ನೌಕರರು ಮಂಗಳವಾರ ಮುಷ್ಕರ ನಡೆಸಿದರು.

ರಾಷ್ಟ್ರೀಕೃತ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು ಹಾಗೂ ಸಹಕಾರಿ ಬ್ಯಾಂಕುಗಳ ನೂರಾರು ನೌಕರರು ನಗರದ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಅಖಿಲ ಭಾರತ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ವಿಜಯಪುರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಜಿ. ಗಾಂಧಿ ಮಾತನಾಡಿ, ‘2024ರ ಜನವರಿ 8ರಂದು ಐಬಿಎ ಮತ್ತು ಯುಎಫ್‌ಬಿಯು ನಡುವಿನ ಒಪ್ಪಂದದ ಪ್ರಕಾರ ವಾರಕ್ಕೆ ಐದು ದಿನಗಳ ಬ್ಯಾಂಕಿಂಗ್ ಸೇವೆ ಜಾರಿಗೊಳಿಸಿ, ಎಲ್ಲಾ ಶನಿವಾರಗಳನ್ನು ರಜೆಯಾಗಿ ಘೋಷಿಸಬೇಕಾಗಿತ್ತು. ಈ ಬಗ್ಗೆ ಐಬಿಎ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಇದುವರೆಗೂ ಕೇಂದ್ರ  ಹಣಕಾಸು ಸಚಿವಾಲಯದಿಂದ ಯಾವುದೇ ಅನುಮೋದನೆ ದೊರೆತಿಲ್ಲ’ ಎಂದು ಹೇಳಿದರು.

ADVERTISEMENT

ವಿಜಯಪುರ ಸಂಯುಕ್ತ ವೇದಿಕೆಯ ಸಂಚಾಲಕರಾದ ಅಶೋಕ್ ಕಟ್ಟಿಮನಿ, ಶ್ರೀಕಾಂತ್, ಸುಶೀಲ್ ಶಿಂಧೆ, ರಾಹುಲ್ ಪೊಳ್ಳು, ಸುನಿಲ್ ನಾಯಕ್, ಸಾಗರ ಲೋಣಿ, ಚಂದ್ರಶೇಖರ ಗಂಟೆಪ್ಪಗೋಳ, ಅಜಯ ಚಹ್ವಾಣ, ಮಹಾಂತೇಶ ಭೂತನಾಳ, ಜಹೀರ್, ಫಾರೂಕ್ ನದಾಫ್, ಕವಿತಾ ಜಾಧವ್, ಸೌಮ್ಯಾ, ರೇಣುಕಾ, ರಶ್ಮಿ, ಐಶ್ವರ್ಯ ರವಿಶಂಕರ್, ಸವಿತಾ ಕೋರಿ, ಮಂಗಳ ಪಾಟೀಲ, ನಿವೇದಿತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.