ADVERTISEMENT

ವಿಜಯಪುರ: ಲಂಚ ಪಡೆಯುತ್ತಿದ್ದ ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 13:02 IST
Last Updated 24 ಜುಲೈ 2024, 13:02 IST
<div class="paragraphs"><p>&nbsp;ಹನುಮಂತ ಪೂಜಾರಿ – ಜಟ್ಟೆಪ್ಪ‌ ಬಿರಾದಾರ</p></div>

 ಹನುಮಂತ ಪೂಜಾರಿ – ಜಟ್ಟೆಪ್ಪ‌ ಬಿರಾದಾರ

   

ವಿಜಯಪುರ: ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್‌ ಬೇಲ್‌ ನೀಡಲು ಆರೋಪಿಗಳಿಂದ ₹40 ಸಾವಿರ ಲಂಚ ತೆಗೆದುಕೊಳ್ಳುವಾಗ ವಿಜಯಪುರ ನಗರದ ಗೋಳಗುಮ್ಮಟ ಠಾಣೆಯ ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಪೊಲೀಸ್ ಕಾನ್‌ಸ್ಟೆಬಲ್‌ ಹನುಮಂತ ಪೂಜಾರಿ ಮತ್ತು ಜಟ್ಟೆಪ್ಪ‌ ಬಿರಾದಾರ ಎಂಬುವವರು ಆರೋಪಿಗಳಿಗೆ ಸ್ಟೇಷನ್ ಬೇಲ್ ನೀಡಲು ₹50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ವಿಷಯ ತಿಳಿದ ವಿಜಯಪುರ ಲೋಕಾಯುಕ್ತ ಎಸ್‌.ಪಿ ಟಿ.ಮಲ್ಲೇಶ, ಡಿವೈಎಸ್‌ಪಿ ಸುರೇಶ ರೆಡ್ಡಿ, ಇನ್‌ಸ್ಪೆಕ್ಟರ್‌ ಆನಂದ ಠಕ್ಕನವರ ಮತ್ತು ಎ.ಎ ಡೋಣಿ ದಾಳಿ ನಡೆಸಿ, ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ಬಂಧಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.