ADVERTISEMENT

ವಿಜಯಪುರ: ಚಾಂಪಿಯನ್‌ ರಾಸುಗಳಿಗೆ ಚಿನ್ನದ ಪದಕ

ಸಿದ್ಧೇಶ್ವರ ಜಾನುವಾರು ಜಾತ್ರೆ; ತರಹೇವಾರು ರಾಸುಗಳ ಉತ್ತಮ ವಹಿವಾಟು

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 4:57 IST
Last Updated 16 ಜನವರಿ 2026, 4:57 IST
ವಿಜಯಪುರ ನಗರದ ಸಿದ್ಧೇಶ್ವರ ಜಾನುವಾರು ಜಾತ್ರೆಯಲ್ಲಿ ಚಾಂಪಿಯನ್‌ ಆದ ಅತ್ಯುತ್ತಮ ರಾಸುಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಚಿನ್ನದ ಪದಕ, ನಗದು ವಿತರಿಸಿದರು
ವಿಜಯಪುರ ನಗರದ ಸಿದ್ಧೇಶ್ವರ ಜಾನುವಾರು ಜಾತ್ರೆಯಲ್ಲಿ ಚಾಂಪಿಯನ್‌ ಆದ ಅತ್ಯುತ್ತಮ ರಾಸುಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಚಿನ್ನದ ಪದಕ, ನಗದು ವಿತರಿಸಿದರು   

ವಿಜಯಪುರ: ಸಿದ್ಧೇಶ್ವರ ಜಾನುವಾರು ಜಾತ್ರೆಯಲ್ಲಿ ಈ ಬಾರಿ ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರದಿಂದ 8 ಸಾವಿರಕ್ಕೂ ಅಧಿಕ ರಾಸುಗಳು ಪಾಲ್ಗೊಂಡಿದ್ದವು. ಇದರಲ್ಲಿ 2,500ಕ್ಕೂ ಅಧಿಕ ಜಾನುವಾರುಗಳ ವ್ಯಾಪಾರ ನಡೆಯಿತು.

ವಿವಿಧ ವಿಭಾಗಗಳಲ್ಲಿ ಚಾಂಪಿಯನ್‌ ಆದ ರಾಸುಗಳಿಗೆ ಚಿನ್ನದ ಪದಕ, ನಗದು ಬಹುಮಾನ ನೀಡಲಾಯಿತು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿಜೇತ ರಾಸುಗಳ ಮಾಲೀಕರಿಗೆ ಪ್ರಶಸ್ತಿ, ಬಹುಮಾನ ವಿತರಿಸಿದರು.

ಜಾತ್ರಾ ಚಾಂಪಿಯನ್‌: ಬಬಲೇಶ್ವರ ತಾಲ್ಲೂಕಿನ ಸಾರವಾಡದ ಮುತ್ತಪ್ಪ ಉಗಾರ (ಖಿಲಾರಿ ಆಕಳು), ಅಥಣಿ ತಾಲ್ಲೂಕಿನ ಪಡತರವಾಡಿಯ ತಾಜಾಜಿ ಪಡತಾರೆ (ಆರು ಹಲ್ಲಿನ ಹೋರಿ), ಬೆಳಗಾವಿ ತಾಲ್ಲೂಕಿನ ಬಸವನ ಕುಡಚಿಯ ಗಜಾನನ ಊಳೂಚೆಗೆ (ನಾಲ್ಕು ಹಲ್ಲಿನ ಹೋರಿ) 10 ಗ್ರಾಂ ಚಿನ್ನದ ಪದಕದೊಂದಿಗೆ ‘ಶ್ರೀ ಸಿದ್ದೇಶ್ವರ ಜಾತ್ರಾ ಚಾಂಪಿಯನ್‌’ ಪಟ್ಟ ನೀಡಿ ಗೌರವಿಸಲಾಯಿತು.

ADVERTISEMENT

ಆಲಮೇಲ ತಾಲ್ಲೂಕಿನ ಗುಂದಗಿಯ ಶ್ರೀಶೈಲ ಗಡ್ಡಿ(ಎರಡು ಹಲ್ಲಿನ ಜೋರಿ)ಗೆ ₹55 ಸಾವಿರ, ವಿಜಯಪುರ ತಾಲ್ಲೂಕಿನ ಉತ್ನಾಳದ ಶಂಕರ ಹಿಪ್ಪರಗಿ(ಎತ್ತಿನ ಜೋಡಿ)ಗೆ ₹25 ಸಾವಿರ, ಜಮಖಂಡಿ ತಾಲ್ಲೂಕಿನ ಆಲಗೂರಿನ ನಿಂಗಪ್ಪ ತೋನಶ್ಯಾಳ(ಖಿಲಾರಿ ಆಕಳ ಮಣಕ)ಗೆ ₹15 ಸಾವಿರ+ ₹ 10 ಸಾವಿರ, ಜಮಖಂಡಿ ತಾಲ್ಲೂಕಿನ ಟಕ್ಕಳಕಿಯ ಧರೆಪ್ಪ ಪಾಟೀಲ್‌ (ಹಾಲು ಹಲ್ಲಿನ ಹೋರಿ) ₹15 ಸಾವಿರ+ ₹7,500, ಅಥಣಿ ತಾಲ್ಲೂಕಿನ ಕೋವಳ್ಳಿಯ ಶಿವನಗೌಡ ಪಾಟೀಲ(ಮಾಸು ಮಿಶ್ರಿತ ಹೋರಿ) ₹10 ಸಾವಿರ +₹5 ಸಾವಿರ ಚೆಕ್‌ನೊಂದಿಗೆ ‘ಶ್ರೀ ಸಿದ್ದೇಶ್ವರ ಜಾತ್ರಾ ಚಾಂಪಿಯನ್‌’ ಪಟ್ಟ ನೀಡಲಾಯಿತು.

ಜಾತ್ರೆಯಲ್ಲಿ ಪಾಲ್ಗೊಂಡ ಉತ್ತಮ ರಾಸುಗಳು; ಖಿಲಾರಿ ಹಾಲು ಹಲ್ಲಿನ ಹೋರಿ: ಜಮಖಂಡಿ ತಾಲ್ಲೂಕಿನ ಟಕ್ಕಳಕಿಯ ಧರೆಪ್ಪ ಪಾಟೀಲ್ (ಚಾಂಪಿಯನ್‌), ಅಥಣಿಯ ಅಕ್ಷಯ ಶಿಂಧೆ(‍ಪ್ರ), ಅಥಣಿ ತಾಲ್ಲೂಕಿನ ತೆಲಸಂಗದ ಸಾಬಣ್ಣ ಸನ್ನಗೊಂಡ(ದ್ವಿ), ಜಮಖಂಡಿ ತಾಲ್ಲೂಕಿನ ಆಲಗೂರದ ಚೇತನ ಪರಮಗೊಂಡ(ತೃ).

ಖಿಲಾರಿ ಎರಡು ಹಲ್ಲಿನ ಹೋರಿ: ಆಲಮೇಲ ತಾಲ್ಲೂಕಿನ ಗುಂದಗಿಯ ಶ್ರೀಶೈಲ ಗಡ್ಡಿ(ಚಾಂಪಿಯನ್‌), ಅಥಣಿ ತಾಲ್ಲೂಕಿನ ತೇಲಸಂಗದ ಅಣ್ಣಪ್ಪ ಸೂರ್ಯವಂಶಿ(ಪ್ರ), ಜುಮನಾಳದ ಗುರುಪಾದ ವಾಗ್ಮೋಡೆ (ದ್ವಿ), ಅಥಣಿ ತಾಲ್ಲೂಕಿನ ಕಮಲಾಪುರದ ಪ್ರಕಾಶ ಅಂಬಿ(ತೃ).

ಖಿಲಾರಿ ನಾಲ್ಕು ಹಲ್ಲಿನ ಹೋರಿ: ಬೆಳಗಾವಿ ತಾಲ್ಲೂಕಿನ ಬಸವನ ಕುಡಚಿಯ ಗಜಾನನ ಊಳೂಚೆ(ಚಾಂಪಿಯನ್‌), ಬೀಳಗಿಯ ಬಸವರಾಜ ನಾಗನಗೌಡರ(ಪ್ರ), ಅಥಣಿ ಪರಸಪ್ಪ ನರೋಡೆ(ದ್ವಿ), ಬಸವ ಬಾಗೇವಾಡಿ ಶ್ರೀಶೈಲ ಗುರುವೀನ(ತೃ).

ಖಿಲಾರಿ ಆಕಳ ಮಣಕ: ಜಮಖಂಡಿ ತಾಲ್ಲೂಕಿನ ಆಲಗೂರಿನ ನಿಂಗಪ್ಪ ತೋನಶ್ಯಾಳ(ಚಾಂಪಿಯನ್‌), ವಿಜಯಪುರ ತಾಲ್ಲೂಕಿನ ಆಹೇರಿಯ ಬಸಪ್ಪ ಡೋಣೂರ(ಪ್ರ), ಮುಧೋಳ ತಾಲ್ಲೂಕಿನ ಕುಳಲಿಯ ಅಣ್ಣಪ್ಪ ನ್ಯಾಮಗೌಡ(ದ್ವಿ), ದೇವರ ಹಿಪ್ಪರಗಿ ತಾಲ್ಲೂಕಿನ ಮಾರ್ಕಪ್ಪನಳ್ಳಿಯ ಮೈಬೂಬಸಾಬ ಬೀಳಗಿ(ತೃ).

ಖಿಲಾರಿ ಆಕಳು: ಬಬಲೇಶ್ವರ ತಾಲ್ಲೂಕಿನ ಸಾರವಾಡದ ಮುತ್ತಪ್ಪ ಉಗಾರ(ಚಾಂಪಿಯನ್‌)ತಿಕೋಟಾ ತಾಲ್ಲೂಕಿನ ಹೊನವಾಡದ ಸಂತೋಷ ಗಾಯಕವಾಡ(ಪ್ರ), ಅಥರ್ಗಾದ ಗಿರೀಶ ಚಾಂದಕವಠೆ(ದ್ವಿ), ಹುನಗುಂದ ತಾಲ್ಲೂಕಿನ ಬಸವನಾಳದ ಶರಣಪ್ಪ ಪೂಜಾರಿ(ತೃ).

ಮಾಸು ಮಿಶ್ರಿತ ಹೋರಿಗಳು

ಅರಣಿ ತಾಲ್ಲೂಕಿನ ಕೋವಳ್ಳಿಯ ಶಿವನಗೌಡ ಪಾಟೀಲ್‌(ಚಾಂಪಿಯನ್‌) ತಿಕೋಟಾ ತಾಲ್ಲೂಕಿನ ಬಾಬಾನಗರದ ಕೆಂಚರಾಯ ಸಾಬು ಹೊನವಾಡ(ಪ್ರ) ಅಥಣಿ ತಾಲ್ಲೂಕಿನ ಅರಟಾಳದ ಹಣಮಂತ ಢಂಗೆ(ದ್ವಿ) ತಿಕೋಟಾ ತಾಲ್ಲೂಕಿನ ತಾಜಪುರದ ಗಿರಿಮಲ್ಲಪ್ಪ ಚಿತ್ತರಗಿ(ತೃ). ಖಿಲಾರಿ ಜೋಡೆತ್ತು: ಉತ್ನಾಳದ ಶಂಕರ ಹಿಪ್ಪರಗಿ(ಚಾಂಪಿಯನ್‌) ರಾಯಭಾಗ ತಾಲ್ಲೂಕಿನ ಕೋಳಿಗುಡ್ಡದ ಶಂಕರಗೌಡ ಪಾಟೀಲ(ಪ್ರ) ಕೊಲ್ಹಾರ ತಾಲ್ಲೂಕಿನ ರೋಣಿಹಾಳದ ರಾವುತಪ್ಪ ಸೊನ್ನದ(ದ್ವಿ) ಬಾಗಲಕೋಟೆ ತಾಲ್ಲೂಕಿನ ಕೆರೂರಿನ ಹಣಮಂತ ಚೂರಿ(ತೃ). ಖಿಲಾರಿ ಆರು ಹಲ್ಲಿನ ಹೋರಿ: ಅಥಣಿ ತಾಲ್ಲೂಕಿನ ಪಡತರವಾಡಿಯ ತಾನಾಜಿ ಪಡತಾರೆ(ಚಾಂ‍ಪಿಯನ್‌) ಜಮಖಂಡಿ ತಾಲ್ಲೂಕಿನ ನಾಗನೂರಿನ ಮಹಾವೀರ ಯಲಗುದ್ರಿ(ಪ್ರ) ಅಥಣಿ ತಾಲ್ಲೂಕಿನ ತೇಲಸಂಗದ ಅಶೋಕ ಪಡತಾರೆ(ದ್ವಿ) ದ್ಯಾಬೇರಿಯ ಸಂದೀಪ ಧನವಾಡೆ(ತೃ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.