ADVERTISEMENT

ವಿಜಯಪುರ: ಕೋವಿಡ್‌ಗೆ ಮತ್ತಿಬ್ಬರು ಸಾವು‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 16:16 IST
Last Updated 30 ಜೂನ್ 2020, 16:16 IST

ವಿಜಯಪುರ: ಜಿಲ್ಲೆಯಲ್ಲಿ 85 ವರ್ಷ ವೃದ್ಧೆ(ಪಿ10,320) ಮತ್ತು 52 ವರ್ಷದ (ಪಿ14497) ವ್ಯಕ್ತಿ ಸೇರಿದಂತೆ ಇಬ್ಬರು ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ವಿಜಯಪುರ ನಗರದ ಹವೇಲಿ ಗಲ್ಲಿ ನಿವಾಸಿಯಾದ52 ವರ್ಷದ ಕೋವಿಡ್ ಪಾಸಿಟಿವ್ ವ್ಯಕ್ತಿಯು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಿಬ್ಬಂದಿಯಾಗಿದ್ದು, ಜೂನ್‌ 22ರಂದು ತೀವ್ರ ಉಸಿರಾಟ ತೊಂದರೆ, ಜ್ವರ ಮತ್ತು ನಿಶ್ಯಕ್ತಿ, ಸಕ್ಕರೆ ಕಾಯಿಲೆ, ತೀವ್ರ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್‌ 26ರಂದು ಚಿಕಿತ್ಸೆಗೆ ಸ್ಪಂದಿಸದೇ ಸಾವಿಗೀಡಾಗಿದ್ದರು.

ಈ ವ್ಯಕ್ತಿಯು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿಗದಿತ ವಿಭಾಗವನ್ನು ಶುಚಿಗೊಳಿಸಿ, ಸ್ಯಾನಿಟೈಜ್ ಮಾಡಲಾಗಿದೆ.200 ಸಿಬ್ಬಂದಿಯಗಂಟಲುದ್ರವ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೇ, ಅವರನ್ನು ಹೋಂ‌ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

ADVERTISEMENT

85 ವರ್ಷದ ವೃದ್ಧೆ ಸಾವು: ನೆಗೆಡಿ, ಕೆಮ್ಮು, ಜ್ವರ ಲಕ್ಷಣಗಳನ್ನು ಹೊಂದಿದ್ದ85 ವರ್ಷದ ವೃದ್ಧೆಯು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದರು.ನಂತರ ಅವರ ಕುಟುಂಬದ ಒತ್ತಾಯದ ಮೇರೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ರೋಗಿಯು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

39 ಕೋವಿಡ್‌ ಪಾಸಿಟಿವ್‌ ದೃಢ:ಜಿಲ್ಲೆಯಲ್ಲಿ ಮಂಗಳವಾರ 39 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 399ಕ್ಕೆ ಏರಿಕೆಯಾಗಿದೆ.

15 ಜನ ಗುಣಮುಖರಾಗಿದ್ದು, ಒಟ್ಟು ಇದುವರೆಗೆ 305 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ 85 ಸಕ್ರಿಯ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.