ADVERTISEMENT

ವಿಜಯಪುರ: ಅಕ್ರಮ ಗೃಹಬಳಕೆ ಸಿಲಿಂಡರ್ ವಶ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 4:59 IST
Last Updated 16 ಜನವರಿ 2026, 4:59 IST
ವಿಜಯಪುರದಲ್ಲಿ ಅಕ್ರಮ ಸಿಲಿಂಡರ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು
ವಿಜಯಪುರದಲ್ಲಿ ಅಕ್ರಮ ಸಿಲಿಂಡರ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು   

ವಿಜಯಪುರ: ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಪಾಳುಬಿದ್ದ ಮನೆಯಲ್ಲಿ ಗೃಹ ಬಳಕೆಯ ಸಿಲಿಂಡರ್ ಬಳಸಿ ಅಕ್ರಮವಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ ತುಂಬಿಸುತ್ತಿದ್ದ ಸ್ಥಳಕ್ಕೆ ಆಹಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು.

41 ಗೃಹ ಬಳಕೆ ಸಿಲಿಂಡರ್, 21 ವಾಣಿಜ್ಯ ಬಳಕೆ ಸಿಲಿಂಡರ್, ಮೋಟಾರ್ ಯಂತ್ರ ಮತ್ತು ತೂಕದ ಯಂತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಈ ಕುರಿತು ಗೋಳಗುಮ್ಮಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ, ಗೋಳಗುಮ್ಮಟ ಠಾಣೆ ಪಿಎಸ್‍ಐ ಎಂ.ಡಿ. ಘೋರಿ, ಎಎಸ್‍ಐ ಎ.ಎ. ಹಾದಿಮನಿ, ಪೊಲೀಸ್ ಸಿಬ್ಬಂದಿ ಗೋಪಾಲ ದಾಸರ, ಮಹಾದೇವ ಅಡಿಹುಡಿ, ಬಿ.ಬಿ. ಮಖನಾಪುರ, ಕುಶ ರಾಠೋಡ್, ಮಲ್ಲಿಕಾರ್ಜುನ ಚಾವರ್, ಮೌನೇಶ್ ನೆಲವಾಸಿ, ಅಪ್ಪು ಕೋಟ್ಯಾಳ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ಆಹಾರ ಇಲಾಖೆ ಉಪ ನಿರ್ದೇಶಕ ವಿನಯಕುಮಾರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.