ADVERTISEMENT

ವಿಜಯಪುರ | ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಸಿಎಂಗೆ ಮನವಿ, ರ‍್ಯಾಲಿ

ಹೋರಾಟ ಸಮಿತಿ ನಿರ್ಧಾರ; ಅಭೂತಪೂರ್ವ ಬೆಂಬಲ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 5:18 IST
Last Updated 4 ಸೆಪ್ಟೆಂಬರ್ 2025, 5:18 IST
ವಿಜಯಪುರ ನಗರದ ಬಿ.ಆರ್‌. ಅಂಬೇಡ್ಕರ್ ಭವನದಲ್ಲಿ ಬುಧವಾರ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿದರು –ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಬಿ.ಆರ್‌. ಅಂಬೇಡ್ಕರ್ ಭವನದಲ್ಲಿ ಬುಧವಾರ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿದರು –ಪ್ರಜಾವಾಣಿ ಚಿತ್ರ   

ವಿಜಯಪುರ: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಸಂಬಂಧ ಸೆಪ್ಟೆಂಬರ್‌ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ನಿರ್ಧರಿಸಿದೆ.

ನಗರದ ಬಿ.ಆರ್‌. ಅಂಬೇಡ್ಕರ್ ಭವನದಲ್ಲಿ ಬುಧವಾರ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಜಿಲ್ಲೆಯ ವಿವಿಧ ಸಂಘ, ಸಂಸ್ಥೆ ಹಾಗೂ ಸಾರ್ವಜನಿಕ ಸಭೆಯಲ್ಲಿ, ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಹೋರಾಟದ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ಸೆಪ್ಟೆಂಬರ್‌ 9ರಂದು ವಿಜಯಪುರ ನಗರದಲ್ಲಿ ಬೃಹತ್‌ ಜನಜಾಗೃತಿ ರ‍್ಯಾಲಿ ನಡೆಸಿ, ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ಬಿ.ಭಗವಾನ್ ರೆಡ್ಡಿ, ಹೋರಾಟ ಸಮಿತಿಯಿಂದ ಇಲ್ಲಿಯವರೆಗೂ ಯಾವ ಯಾವ ಚಟುವಟಿಕೆಗಳು ನಡೆದಿವೆ ಎಂಬುದರ ಕುರಿತು ವಿವರವಾಗಿ ತಿಳಿಸಿದರು. ಹೋರಾಟ ಸಮಿತಿಯ ಸಂಚಾಲಕ ಸಮಿತಿಯ ಸದಸ್ಯರಾದ ಅರವಿಂದ ಕುಲಕರ್ಣಿ, ಅನಿಲ ಹೊಸಮನಿ, ಅಕ್ರಂ ಮಾಶಾಳಕರ, ಲಲಿತಾ ಬಿಜ್ಜರಗಿ, ಮಲ್ಲಿಕಾರ್ಜುನ ಬಟಗಿ, ಅಣ್ಣರಾಯ ಈಳಗೇರ, ಲಕ್ಷ್ಮಣ ಹಂದ್ರಾಳ, ಜಿ. ಜಿ. ಗಾಂಧಿ, ಚಂದ್ರಶೇಖರ ಘಂಟೆಪ್ಪಗೋಳ, ಸುಭಾಷ ಯಾದವಾಡ, ಸಿದ್ದಲಿಂಗ ಬಾಗೇವಾಡಿ, ಶ್ರೀನಾಥ ಪೂಜಾರಿ, ಪ್ರಭುಗೌಡ ಪಾಟೀಲ, ದಸ್ತಗಿರ ಉಕ್ಕಲಿ, ಭರತಕುಮಾರ ಎಚ್.ಟಿ., ಗೀತಾ ಎಚ್., ಬಾಬುರಾವ್ ಬೀರಕಬ್ಬಿ, ಸಿದ್ರಾಮ ಹಿರೇಮಠ, ಶ್ರೀಕಾಂತ ಕೊಂಡಗೂಳಿ, ಶಿವಬಾಳಮ್ಮ ಕೊಂಡಗೂಳಿ, ಫಯಾಜ್ ಕಲಾದಗಿ, ಕಾವೇರಿ ರಜಪೂತ, ಮಹಾದೇವಿ ಧರ್ಮಶೆಟ್ಟಿ, ಫಾದರ್ ಕೆಫಿನ್, ಜಗದೇವ್ ಸೂರ್ಯವಂಶಿ, ಸೋಮನಾಥ ಕಳ್ಳಿಮನಿ, ಬೋಗೇಶ್ ಸೊಲಾಪುರ, ಶಿವಾನಂದ ಸುತ್ತಗುಂಡಿ, ವಿದ್ಯಾವತಿ ಅಂಕಲಗಿ, ಅನಸೂಯ ಕಾಂಬಳೆ ಮುಂತಾದವರು ಭಾಗವಹಿಸಿದ್ದರು.

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹೆಚ್ಚಿದ ಒತ್ತಡ ಶಾಸಕರು, ಸಚಿವರಿಗೆ ಮನವಿ ನೀಡಲು ನಿರ್ಧಾರ ಖಾಸಗಿ ಸಹಭಾಗಿತ್ವ ಕೈಬಿಡಲು ಆಗ್ರಹ

ಜಿಲ್ಲೆಯ ಎಲ್ಲಾ ಶಾಸಕರು ಸಂಸದರು ಪಿಪಿಪಿಯನ್ನು ವಿರೋಧಿಸಿ ಸರ್ಕಾರಿ ಕಾಲೇಜು ಸ್ಥಾಪನೆಗೆ ಬೆಂಬಲ ನೀಡಬೇಕು. ಶಾಸಕರು ವಿಧಾನಸಭೆಯಲ್ಲೇ ಬಂಡವಾಳ ಹೂಡಿಕೆ ಸಹಭಾಗಿ‌ಯಾಗುವೆ ಎಂದಿದ್ದು ನಾಚಿಕೆಗೇಡಿನ ಸಂಗತಿ.
ಎಚ್.ಟಿ.ಭರತಕುಮಾರ ಸದಸ್ಯ ಸರ್ಕಾರಿ ವೈದ್ಯಕೀಯ ಕಾಲೇಜು ಸಂಸ್ಥಾಪನೆ ಹೋರಾಟ ಸಮಿತಿ ವಿಜಯಪುರ
ವಿಜಯಪುರದಲ್ಲಿ ವೈದ್ಯಕೀಯ ಕಾಲೇಜನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸುವುದಾಗಿ ಸರ್ಕಾರ ಘೋಷಣೆ ಮಾಡಿರುವುದು ಸರಿಯಲ್ಲ. ಸರ್ಕಾರವೇ ಕಾಲೇಜು ಸ್ಥಾಪಿಸುವುದು ಸೂಕ್ತ
ಎಸ್.ಎಂ.ನೆರಬೆಂಚಿ ಅಧ್ಯಕ್ಷ ಹಾರ್ವರ್ಡ್ ಪಿಯು ಸೈನ್ಸ್‌ ಕಾಲೇಜು ಮುದ್ದೇಬಿಹಾಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.