ADVERTISEMENT

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹ:ಹೋರಾಟಕ್ಕೆ ಕೈಜೋಡಿಸಿದ ಐಎಂಎ, ಕರವೇ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 5:05 IST
Last Updated 14 ಅಕ್ಟೋಬರ್ 2025, 5:05 IST
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ) ಸದಸ್ಯರು ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು 
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ) ಸದಸ್ಯರು ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು    

ವಿಜಯಪುರ: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಆಗ್ರಹಿಸಿ ನಡೆಯುತ್ತಿರುವ ಹೋರಾಟ ಸೋಮವಾರ 26ನೇ ದಿನ ಪೂರೈಸಿತು.

ಭಾರತೀಯ ವೈದ್ಯಕೀಯ ಸಂಘಟನೆ ವಿಜಯಪುರ ಘಟಕ (ಐಎಂಎ) ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ) ಸದಸ್ಯರು ಪದಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

ಐ.ಎಂ.ಎ ಕಾರ್ಯದರ್ಶಿ ಎಂ. ಆರ್. ಗುಡದಿನ್ನಿ ಮಾತನಾಡಿ, ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 149 ಎಕರೆ ಜಮೀನು ಇದೆ, ಇಷ್ಟೊಂದು ಜಾಗವಿದ್ದರೂ ಕಾಲೇಜು ಸ್ಥಾಪನೆಗೆ ಮೀನಾಮೇಷ ಏಕೆ ಎಂದು ಪ್ರಶ್ನಿಸಿದರು.

ADVERTISEMENT

ಡಾ. ಕುಲ್ಲಳ್ಳಿ‌ ಮಾತನಾಡಿ, ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿಗಳು ಇಲ್ಲಿ ಸರ್ಕಾರಿ ಕಾಲೇಜು ಇಲ್ಲದ ಕಾರಣ ಬೇರೆ ಬೇರೆ ನಗರಗಳಿಗೆ ಹೋಗಿ ಕಲಿಯುತ್ತಿದ್ದಾರೆ. ನಮ್ಮ ಊರಿನಲ್ಲಿ ನಮ್ಮ ಮಕ್ಕಳು ಕಲಿಯುವಂತಾದರೆ ತುಂಬಾ ಸಹಾಯವಾಗುತ್ತದೆ. ಅದಕ್ಕಾಗಿ ಸರ್ಕಾರಿ ಕಾಲೇಜು ಅವಶ್ಯಕತೆ ಇದೆ.  ಹೋರಾಟಕ್ಕೆ ₹25 ಸಾವಿರ ಕೊಡುವುದಾಗಿ ಹೇಳಿದರು.

ಡಾ. ಸುರೇಶ್  ಕಾಗಲಕರ್ ರೆಡ್ಡಿ, ಡಾ.ಪಝಲ್ ಖಾದ್ರಿ, ಡಾ. ಗುಡದಿನ್ನಿ, ಜಿಲಾನಿ ಅವಟಿ ಹೋರಾಟದಲ್ಲಿ ಭಾಗವಹಿಸಿದ್ದರು.

ಕರವೇ ಪ್ರವೀಣ ಶೆಟ್ಟಿ ಬಣದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ ಮುಳಜಿ ಮಾತನಾಡಿ, ಬಡವರು ಕಡಿಮೆ ಖರ್ಚಿನಲ್ಲಿ ಓದಲು ಸರ್ಕಾರಿ ವೈದ್ಯಕೀಯ ಕಾಲೇಜು ನಮ್ಮ ಜಿಲ್ಲೆಗೆ ಅವಶ್ಯಕತೆ ಇದೆ. ಹೆಚ್ಚು ಶುಲ್ಕ ಕೊಟ್ಟು ಬಡವರ ಮಕ್ಕಳಿಗೆ ಓದಲು ಆಗುವುದಿಲ್ಲ ಎಂದರು.

ಕರವೇ ರಾಜ್ಯ ಉಪಾಧ್ಯಕ್ಷ ಬಸವರಾಜ ತಾಳಿಕೋಟಿ, ಶ್ರೀಕಾಂತ್ ರಾಥೋಡ್, ಅಶೋಕ‌ ನಾವಿ, ಸಿದ್ದನಗೌಡ ಕೊಳಗೇರಿ, ಮುರುಗೇಶ ಗಣಚಾರಿ, ಬಸನಗೌಡ ಪಾಟೀಲ, ಸದಾಶಿವ ಕುಂಬಾರ, ಉಮೇಶ ವಾಲೀಕರ ಹಾಗೂ ಹೋರಾಟ ಸಮಿತಿ‌ ಸದಸ್ಯರಾದ ಅರವಿಂದ ‌ಕುಲಕರ್ಣಿ, ಬಿ. ಭಗವಾನ್ ರೆಡ್ಡಿ, ಲಲಿತಾ ಬಿಜ್ಜರಗಿ, ವಿದ್ಯಾವತಿ ಅಂಕಲಗಿ, ಕೆ.ಎಫ್. ಅಂಕಲಗಿ, ಸುರೇಶ ಬಿಜಾಪುರ, ಲಕ್ಷ್ಮಣ ಹಂದ್ರಾಳ,‌ ಅಬ್ದುಲ್‌ ರಹಮಾನ್ ನಾಸಿರ್,‌ ಲಕ್ಷ್ಮಣ‌ ಕಂಬಾಗಿ, ಶಿವಬಾಳಮ್ಮ‌ ಕೊಂಡಗೂಳಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ‌ ಎಚ್. ಟಿ., ಮಲ್ಲಿಕಾರ್ಜುನ ಎಚ್. ಟಿ., ಸಿದ್ರಾಮ‌ ಹಳ್ಳೂರ, ಸಿ.ಬಿ. ಪಾಟೀಲ, ಪ್ರಭುಗೌಡ‌ ಪಾಟೀಲ, ಜಗದೇವ ಸೂರ್ಯವಂಶಿ ಇದ್ದರು

ವಿಜಯ‍ಪುರದಲ್ಲಿ ಈ ಹಿಂದೆಯೇ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗಬೇಕಿತ್ತು. ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭವಾದರೆ ಎಲ್ಲರಿಗೂ ಮುಂದೆ ಸಹಾಯವಾಗುತ್ತದೆ  
ಡಾ.ದಯಾನಂದ ಬಿರಾದಾರ ಅಧ್ಯಕ್ಷ ಐಎಂಎ ಜಿಲ್ಲಾ ಘಟಕ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.