ADVERTISEMENT

ವಿಜಯಪುರ: ಕೋವಿಡ್‌ ಪೀಡಿತರ ಸಂಖ್ಯೆ ಸಾವಿರದತ್ತ

ಮತ್ತೆ 80 ಜನಕ್ಕೆ ಕೋವಿಡ್‌ ಪಾಸಿಟಿವ್‌ ದೃಢ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 17:20 IST
Last Updated 15 ಜುಲೈ 2020, 17:20 IST

ವಿಜಯಪುರ: ಜಿಲ್ಲೆಯಲ್ಲಿ ಬುಧವಾರ 80 ಜನರಿಗೆ ಕೋವಿಡ್‌ ಪಾಸಿಟಿವ್‌ ದೃಢವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 976ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 654 ಜನ ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸದ್ಯ 303 ಸಕ್ರಿಯ ರೋಗಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ 19 ಜನ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ.

175 ಕಂಟೈನ್ಮೆಂಟ್‌ ಝೋನ್‌:

ADVERTISEMENT

ಜಿಲ್ಲೆಯಲ್ಲಿ ಸದ್ಯ 175 ಕಂಟೈನ್ಮೆಂಟ್‌ ಝೋನ್‌ ಚಾಲ್ತಿಯಲ್ಲಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದ್ದಾರೆ.

ವಿಜಯಪುರ ನಗರ ತಾಲ್ಲೂಕಿನಲ್ಲಿ 99, ವಿಜಯಪುರ ಗ್ರಾಮಾಂತರ 4, ಬಬಲೇಶ್ವರ 1, ತಿಕೋಟಾ 8, ಬಸವನಬಾಗೇವಾಡಿ 19, ನಿಡಗುಂದಿ 6, ಕೊಲ್ಹಾರ 4, ಇಂಡಿ 11, ಚಡಚಣ 4, ಮುದ್ದೇಬಿಹಾಳ 5, ತಾಳಿಕೋಟೆ 7, ಸಿಂದಗಿ 4 ಮತ್ತು ದೇವರ ಹಿಪ್ಪರಗಿ ತಾಲ್ಲೂಕಿನಲ್ಲಿ 3 ಕಂಟೈನ್ಮೆಂಟ್‌ ಝೋನ್‌ ಇವೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.