ADVERTISEMENT

ವಿಕಸಿತ ಭಾರತ ಯೋಜನೆ ಗ್ರಾಮೀಣ ಅಭಿವೃದ್ಧಿಗೆ ಪೂರಕ: ಸಂಸದ ರಮೇಶ ಜಿಗಜಿಣಗಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:42 IST
Last Updated 26 ಫೆಬ್ರುವರಿ 2026, 5:42 IST
ಇಂಡಿ ತಾಲ್ಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಬುಧವಾರ ವಿಕಸಿತ ಭಾರತ ಯೋಜನೆ ಕುರಿತು ರಮೇಶ ಜಿಗಜಿಣಗಿ ಮಾತನಾಡಿದರು  
ಇಂಡಿ ತಾಲ್ಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಬುಧವಾರ ವಿಕಸಿತ ಭಾರತ ಯೋಜನೆ ಕುರಿತು ರಮೇಶ ಜಿಗಜಿಣಗಿ ಮಾತನಾಡಿದರು     

ಇಂಡಿ: ‘ವಿಕಸಿತ ಭಾರತ ಯೋಜನೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಅವರು ಬುಧವಾರ ತಾಲ್ಲೂಕಿನ ಹಿರೇಬೆವನೂರ ಗ್ರಾಮದಲ್ಲಿ ನಡೆದ ವಿಕಸಿತ ಭಾರತ ಕುರಿತ ಪಾದಯಾತ್ರೆಯ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಯೋಜನೆ ಪಂಚಾಯತರಾಜ್‌ ಬಲವರ್ಧನೆಗೆ ಪೂರಕವಾಗಿದೆ. ಹೊಸ ಉದ್ಯೋಗ ಖಾತರಿ ಗ್ರಾಮೀಣ ಯೋಜನೆಯಾಗಿದೆ’ ಎಂದರು.

ADVERTISEMENT

ಜಿಲ್ಲಾ ರೈತ ಮೋರ್ಚಾ ಮಾಜಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ‘ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತಿವೆ. ಅಳವಡಿಸಿಕೊಂಡ ತಂತ್ರಜ್ಞಾನ, ಪರಿಶೀಲನೆ, ತಪಾಸಣೆ, ದೂರುಗಳ ನಿರ್ವಹಣೆ, ಅನುಷ್ಠಾನದಲ್ಲಿ ಸುಧಾರಣೆಯಿಂದಾಗಿ ಯೋಜನೆ ನರೇಗಾಕ್ಕಿಂತಲೂ ಹೆಚ್ಚು ಅನುಕೂಲವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಿದೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಬಿಜೆಪಿ ಮಂಡಳ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ, ಶಂಕರಗೌಡ ಪಾಟೀಲ ಡೊಮನಾಳ, ಎಸ್.ಟಿ. ಮೋರ್ಚಾ ಜಿಲ್ಲಾ ಅಧ್ಯಕ್ಷ ರವಿ ವಗ್ಗೆ , ಶೀಲವಂತ ಉಮರಾಣಿ, ಬಿ.ಎಸ್. ಪಾಟೀಲ ಹಿರೇಬೇವನೂರ, ದೇವೇಂದ್ರ ಕುಂಬಾರ, ಭೀಮರಾಯಗೌಡ ಬಿರಾದಾರ, ಮಹಾದೇವ ಗುಡ್ಡೊಡಗಿ ಮಾತನಾಡಿದರು.

ವೇದಿಕೆಯ ಮೇಲೆ ಮಲ್ಲಿಕಾರ್ಜುನ ಕಿವಡೆ, ರಾಘವೇಂದ್ರ ಕಾಪಸೆ, ವಿಜಯಲಕ್ಷ್ಮೀ ರೂಗಿಮಠ ಇದ್ದರು.
ಇದಕ್ಕೂ ಪೂರ್ವ ಗ್ರಾಮದ ಸಿದ್ಧಾರೂಢ ಮಠದಿಂದ ಮಲ್ಲಯ್ಯನ ಗುಡಿಯವರೆಗೆ ಪಾದಯಾತ್ರೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.