
ಇಂಡಿ: ‘ತಪ್ಪು ಮತದಾನ ಅಸಮರ್ಥ ನಾಯಕನ ಆಯ್ಕೆಗೆ ಕಾರಣವಾಗುತ್ತದೆ. ಹೀಗಾಗಿ ಮತ ಚಲಾಯಿಸುವಾಗ ಮತದಾರರು ಎಚ್ಚರವಹಿಸಬೇಕು’ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಕೋಟೆಪ್ಪ ಕಾಂಬಳೆ ಹೇಳಿದರು.
ನಗರದ ಆಡಳಿತಸೌಧದಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ ಮತದಾನ ಜಾಗೃತಿ ಕಾರ್ಯಕ್ರಮ ಮತ್ತು ಕಾನೂನು ಅರಿವು –ನೆರವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಮಾತನಾಡಿ, ‘ಅನೇಕ ಪ್ರಜ್ಞಾವಂತರು ಮತದಾನ ಮಾಡುತ್ತಿಲ್ಲ. ಮತದಾನ ದೇಶದ ಭವಿಷ್ಯ ರೂಪಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುತ್ತದೆ. ಹೀಗಾಗಿ ಮತದಾನ ಪ್ರಕ್ರಿಯೆಯಲ್ಲಿ ತಪ್ಪದೇ ಭಾಗಿಯಾಗಿ ಸಾಂವಿಧಾನಿಕ ಹಕ್ಕು ಚಲಾಯಿಸಬೇಕು’ ಎಂದರು.
ಇಒ ಭೀಮಾಶಂಕರ ಕನ್ನೂರ, ಬಸವರಾಜ ಗೊರನಾಳ ಮಾತನಾಡಿದರು. ಕಿರಿಯ ಶ್ರೇಣಿ ನ್ಯಾಯಾಧೀಶ ವಿಕಾಸ ದಳವಾಯಿ ಮತ್ತು ಕಿರಿಯ ದಿವಾನಿ ನ್ಯಾಯಾಧೀಶ ಸುನೀಲ ಕುಮಾರ ಇದ್ದರು.
ಮತದಾನ ಜಾಗೃತಿ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಿದ್ದು ಹಾವಳಗಿ, ಎಸ್.ಆರ್.ಮುಂಜಗೊಂಡ, ಆರ್.ಬಿ ಮೂಗಿ, ಎಚ್.ಎಚ್. ಗುನ್ನಾಪುರ, ಪಂಡಿತ ಕೊಡಹೊನ್ನ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.