
ತಾಂಬಾ: ಗ್ರಾಮದ ಗಲ್ಲಿಗಲ್ಲಿಗಳಲ್ಲಿ ಪ್ರತಿ ಮನೆ ಎದುರು ತೆರಳಿ ಕಸ ಸಂಗ್ರಹಿಸುತ್ತಿದ್ದ ವಾಹನ ಸದ್ಯ ಕೆಟ್ಟು ನಿಂತಿದೆ. ಹೀಗಾಗಿ ಮನೆಮನೆ ಕಸ ಸಂಗ್ರಹವೂ ಸ್ಥಗಿತವಾಗಿದೆ.
ಕಸ ಸಂಗ್ರಹ ವಾಹನವು ಗ್ರಾಮ ಪಂಚಾಯಿತಿ ಕಾರ್ಯಾಲಯದ ಅವರಣದಲ್ಲಿ ನಿಂತಿದೆ. ಗ್ರಾಮ ಪಂಚಾಯಿತಿ ಅಧಿಕಾರದಲ್ಲಿ ಬದಲಾವಣೆ ಆಗಿರುವ ಕಾರಣ ಈ ವಾಹನ ಮೂಲೆ ಸೇರಿದೆ ಎನ್ನಲಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ 9 ವಾರ್ಡ್‌ಗಳ ಮನೆಗಳಿಗೆ ನಿತ್ಯ ಬೆಳಿಗ್ಗೆ ಈ ವಾಹನ ತೆರಳಿ ಒಣ ಕಸ–ಹಸಿ ಕಸ ಸಂಗ್ರಹಿಸುತ್ತಿತ್ತು. ವಾಹನ ಕೆಟ್ಟು ನಿಂತ ಕಾರಣ ಈಗ ತ್ಯಾಜ್ಯ ನಿರ್ವಹಣೆ ಸಮಸ್ಯೆ ಉಂಟಾಗಿದೆ. ವಾಹನ ಹೀಗೇ ಬಿಟ್ಟರೆ ತುಕ್ಕು ಹಿಡಿಯುವುದು ಗ್ಯಾರಂಟಿ ಎಂದು ಗ್ರಾಮ ಪಂಚಾಯತಿ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.
‘ಪ್ರತಿ ದಿನ ಮುಂಜಾನೆ ಕಸ ಒಯ್ಯಾಕ ಗಾಡಿ ಬರ್ತಿತ್ತು. ಕೆಲವು ದಿನಗಳಿಂದ ಕಸ ಒಯ್ಯಾಕ ಗಾಡಿ ಬರುತ್ತಿಲ್ಲ. ಕಸ ಮನ್ಯಾಗ ಇಟ್ಕೊಂಡು ಕೂಡಾಕ ಆಗೋದಿಲ್ಲರಿ. ಹಿಂಗಾಗಿ ರೋಡದಾಗ ಚಲ್ಲೋ ಪರಸ್ಥಿತಿ ಉಂಟಾಗೇತಿ. ಮೊದಲಿನ ಹಾಗೆ ಕಸ ಒಯ್ಯಾಕ ಗಾಡಿ ಮನೆ ಹತ್ತಿರ ಬರಬೇಕ್ರಿ. ಗಾಡಿ ಬಂದರೆ ಮಾತ್ರ ಸ್ವಚ್ಛ ಇಟ್ಟುಕೊಳ್ಳಲು ಸಾಧ್ಯ’ ಎಂದು ಶಿವಮ್ಮ ನಾಗರಹಳ್ಳಿ ಹೇಳಿದರು.
Cut-off box - ಬೇಗನೇ ವಾಹನ ದುರಸ್ತಿ: ಪಿಡಿಒ ತ್ಯಾಜ್ಯ ಸಂಗ್ರಹ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಾಂಬಾ ಗ್ರಾಮದಲ್ಲಿ 9 ವಾರ್ಡ್‌ಗಳು ಬರುತ್ತವೆ. ಒಂದೇ ವಾಹನ ಇದ್ದು ಅದೂ ಈಗ ಕೆಟ್ಟಿರುವುದರಿಂದ ಕಸ ಸಂಗ್ರಹ ಸಾಧ್ಯವಾಗುತ್ತಿಲ್ಲ. ಬೇಗನೆ ವಾಹನ ದುರಸ್ತಿ ಮಾಡಿಸುತ್ತೇನೆ. ಆಡಳಿತ ಅಧಿಕಾರಿ ಬಂದ ತಕ್ಷಣ ಮತ್ತೊಂದು ಹೊಸ ವಾಹನ ಖರೀದಿಗೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಿಡಿಒ ಶ್ರೀಕಾಂತ ಹಡಲಸಂಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.