ಹೊರ್ತಿ: ಈ ಭಾಗದಲ್ಲಿ ಈ ಸಲ ಮುಂಗಾರು ಮತ್ತು ಹಿಂಗಾರು ಮಳೆಯು ಸಮರ್ಪಕವಾಗಿ ಆಗಿಲ್ಲ. ಕೆರೆಯಲ್ಲಿ ಹನಿ ನೀರು ಕೂಡಾ ಇಲ್ಲದ ಕಾರಣ ಕೆರೆಯಲ್ಲಿನ ಬಾವಿಗೆ ನೀರಿನ ಕೊರತೆಯಾಗಿದೆ. ಸಮೀಪದ ಇಂಚಗೇರಿ ಬಸ್ ನಿಲ್ದಾಣದ ತಂಗುದಾಣದ ಮುಂದೆ ಗ್ರಾಮ ಪಂಚಾಯಿತಿ ವತಿಯಿಂದ ₹5ಗೆ 20 ಲೀಟರ್ ಶುದ್ಧ ನೀರು ಪೂರೈಸುವ ಇದು ಬಡ ಹಾಗೂ ಜನ ಸಾಮಾನ್ಯರಿಗೆ ಮತ್ತು ಹೊಟೇಲ್‌ಗಳಿಗೆ ಈ ಘಟಕ ತುಂಬಾ ಅನುಕೂಲವಾಗಿದೆ.
ಈ ಶುದ್ಧ ಕುಡಿಯುವ ನೀರಿನ ಘಟಕವು ನೀರಿನ ಕೊರತೆಯಿಂದ ಬೀಗ ಹಾಕಿ ಬಂದ್ ಮಾಡಿದ್ದು, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಕೊರತೆಯಾಗಿದೆ ಎಂದು ಬಡ ಜನ ಹಾಗೂ ಸಾಮಾನ್ಯ ಜನರು ಮತ್ತು ಗ್ರಾಮಸ್ಥರು ದೂರಿದ್ದಾರೆ.
‘ಇಲ್ಲಿ ಇರುವ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ₹10ಕ್ಕೆ 20ಲೀಟರ್ ಶುದ್ಧ ನೀರು ಪೂರೈಸುತ್ತಿವೆ. ಇದರಿಂದ ಬಡ ಹಾಗೂ ಜನ ಸಾಮಾನ್ಯರಿಗೆ ಇದು ದುಬಾರಿಯಾಗುತ್ತಿದೆ. ಆದ ಕಾರಣ ನೀರಿನ ಕೊರತೆಯಿಂದ ಎರಡ್ಮೂರು ಹೊಟೇಲ್ ಅಂಗಡಿಗಳು ಬಂದ್ ಮಾಡಿದ್ದೇವೆ’ ಎನ್ನುತ್ತಾರೆ ಸಣ್ಣ ವ್ಯಾಪಾರಸ್ಥರು.
‘ಈ ಕೂಡಲೇ ನೀರಿನ ಕೊರತೆಯಿಂದ ಎರಡ್ಮೂರು ಗ್ರಾಮ ಪಂಚಾಯಿತಿಯವರು ಟ್ಯಾಂಕರ್ ನೀರು ಘಟಕಕ್ಕೆ ಪೂರೈಸಿ ಘಟಕವನ್ನು ನಿರಂತರ ಚಾಲು ಇಟ್ಟು ಶುದ್ಧ ನೀರು ಪೂರೈಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಇದರಿಂದ ಅಂತರ್ಜಲ ಕುಸಿದಿದ್ದು ನೀರಿನ ಕೊರತೆಯಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರು ಪೂರೈಸಿ ಆರಂಭಿಸಲಾಗುವುದುವಿಶ್ವನಾಥ ರಾಠೋಡ, ಪಿಡಿಒ, ಇಂಚಗೇರಿ
'ಈ ಸಲ ಮುಂಗಾರು ಮತ್ತು ಹಿಂಗಾರು ಮಳೆಯು ಸಮರ್ಪಕವಾಗಿ ಆಗಿಲ್ಲ, ಕೆರೆಯಲ್ಲಿ ಹನಿ ನೀರು ಕೂಡಾ ಇಲ್ಲದ ಕಾರಣ ಕೆರೆಯಲ್ಲಿನ ಬಾವಿಯಲ್ಲಿ ನೀರಿನ ಕೊರತೆಯಾಗಿದೆ. ಹೀಗಾಗಿ ಶುದ್ಧ ಕುಡಿಯುವ ಘಟಕಕ್ಕೆ ನೀರು ಸಾಲುವಷ್ಟು ನೀರು ಪೂರೈಕೆ ಆಗದ ಕಾರಣ ಘಟಕ ನಿರ್ವಹಣೆಯಷ್ಟು ನೀರು ಸಾಕಾಗುತ್ತಿಲ್ಲ. ಟ್ಯಾಂಕರ್ ನೀರು ಪೂರೈಸಿದರೆ ಚಾಲು ಇಡಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಶುದ್ಧ ಕುಡಿಯುವ ನೀರಿನ ಘಟಕದ ಇಂಚಗೇರಿ ಗ್ರಾಮ ಪಂಚಾಯಿತಿಯ ನೀರಿನ ಘಟಕ ವ್ಯವಸ್ಥಾಪಕ ಮತ್ತು ಸಿಪಾಯಿ ಸಂತೋಷ ಬೆಳ್ಳೆನವರ.
‘ಈ ಇಂಚಗೇರಿ ಗ್ರಾಮದಲ್ಲಿ ನೀರಿನ ಕೊರತೆ ಕಾರಣ ಸರ್ಕಾರಿ ಮಾದರಿ ಶಾಲೆಯ ಕೊಳವೆಬಾವಿ ನೀರನ್ನು ಶಾಲಾ ಟ್ಯಾಂಕ್‌ಗೆ ತುಂಬಿ ಅದರಲ್ಲಿ ಉಳಿದ ನೀರನ್ನು ಈ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಹಾಕಿ, ಸಾಧ್ಯವಾದಷ್ಟು ಶುದ್ಧ ನೀರು ಪೂರೈಸಲು ಕ್ರಮ ಕೈಗೊಳ್ಳಲು ಪಂಚಾಯಿತಿ ಸಿಬ್ಬಂದಿಗೆ ತಿಳಿಸಿದ್ದೇನೆ’ ಎನ್ನುತ್ತಾರೆ ಇಂಚಗೇರಿ ಪಿಡಿಒ ವಿಶ್ವನಾಥ ರಾಠೋಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.