ಕೊಲ್ಹಾರ: ಭಾರತದ ಕೃಷಿ ಕ್ಷೇತ್ರದಲ್ಲಿ ಮೊದಲಿನಿಂದಲೂ ಮಹಿಳೆ ಪ್ರಧಾನ ಪಾತ್ರ ವಹಿಸುತ್ತಾಳೆ ಎಂದು ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಹೇಳಿದರು.
ಪಟ್ಟಣದ ಶ್ರೀ ಪಟ್ಟದೇವರು ಹಿರೇಮಠ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ಮಾತೃ ಸಮಾವೇಶದಲ್ಲಿ ಅವರು ಮಾತನಾಡಿದರು.
ಮಹಿಳೆ ಕೃಷಿ ಪ್ರಧಾನಳು, ಕೃಷಿ ಕ್ಷೇತ್ರದಲ್ಲಿ ಮಹಿಳೆ ಬೆಳಿಗ್ಗೆಯಿಂದ ರಾತ್ರಿವರೆಗೂ ಕೆಲಸ ಮಾಡಿ, ತನ್ನ ಕುಟುಂಬವನ್ನು ಸಲಹುತ್ತಿದ್ದಾಳೆ ಎಂದರು.
ಕೃಷಿ ಕಾಯಕದ ಜೊತೆ ನಮ್ಮ ದೇಶದ ಸಂಸ್ಕೃತಿ ಬೆಳೆಸಿ, ಉತ್ತಮ ಕೃಷಿಕ ಸಮಾಜದ ನಿರ್ಮಾಣಕ್ಕೆ ಪ್ರಯತ್ನ ಮಾಡೋಣ, ಸುಸಂಸ್ಕೃತ ಭಾರತ ನಿರ್ಮಾಣ ನಮ್ಮ ಕೈಯಲ್ಲಿ ಇದೆ ಎಂದು ಹೇಳಿದರು.
ಮಾತೃ ಸಮಾವೇಶದಲ್ಲಿ 11001 ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಸಂಗೀತ ಸಂಜೆ, ಜಾನಪದ ಜಾದೂ ರಸಮಂಜರಿ ನಡೆಯಿತು.
ಮಾತೃ ಸಮಾವೇಶವನ್ನು ಭಾಗ್ಯಶ್ರೀ ಶಿವಾನಂದ ಪಾಟೀಲ ಉದ್ಘಾಟಿಸಿದರು ಚನ್ನಬಸವ ಸ್ವಾಮೀಜಿ, ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಸಿದ್ದರಾಮ ಸ್ವಾಮೀಜಿ, ಕಾವ್ಯ ಕಲ್ಲಪ್ಪ ದೇಸಾಯಿ, ಶಾಂತಾಬಾಯಿ ನಾಗರಾಳ, ಡಾ.ಜೀವನ್ ಸಾಬ್ ವಾಲಿಕಾರ, ಮಹಾಂತೇಶ ಹಡಪದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.