ADVERTISEMENT

World Environment Day: ಸಿಂದಗಿಯಲ್ಲೊಂದು ಸಾಲುಮರದ ತಿಮ್ಮಕ್ಕ ವೃಕ್ಷೊದ್ಯಾನ

ಶಾಂತೂ ಹಿರೇಮಠ
Published 5 ಜೂನ್ 2025, 6:20 IST
Last Updated 5 ಜೂನ್ 2025, 6:20 IST
ಸಿಂದಗಿ ಪಟ್ಟಣದ ವಿಜಯಪುರ ರಸ್ತೆಯ ಹೊನ್ನಪ್ಪಗೌಡ ಬಡಾವಣೆ ಯಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ನಿರ್ಮಾಣಗೊಂಡ ಸಾಲು ಮರದ ತಿಮ್ಮಕ್ಕನವರ ವೃಕ್ಷೊದ್ಯಾನದ ಮುಖ್ಯದ್ವಾರ
ಸಿಂದಗಿ ಪಟ್ಟಣದ ವಿಜಯಪುರ ರಸ್ತೆಯ ಹೊನ್ನಪ್ಪಗೌಡ ಬಡಾವಣೆ ಯಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ನಿರ್ಮಾಣಗೊಂಡ ಸಾಲು ಮರದ ತಿಮ್ಮಕ್ಕನವರ ವೃಕ್ಷೊದ್ಯಾನದ ಮುಖ್ಯದ್ವಾರ   

ಸಿಂದಗಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿನ ಹೊನ್ನಪ್ಪಗೌಡ ಬಡಾವಣೆಯಲ್ಲಿ 2 ಎಕರೆ 36 ಗುಂಟೆ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಟ್ರೀ ಕಾರ್ಕ್ ಯೋಜನೆಯಡಿ ₹ 1 ಕೋಟಿ ಅನುದಾನದಡಿ ಸಾಲು ಮರದ ತಿಮ್ಮಕ್ಕನವರ ವೃಕ್ಷೊದ್ಯಾನ ನಿರ್ಮಾಣಕ್ಕೆ ಶಾಸಕ ಅಶೋಕ ಮನಗೂಳಿ ಮುಂದಾಗಿದ್ದಾರೆ. ಈಗಾಗಲೇ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.

ಈ ಉದ್ಯಾನದಲ್ಲಿ ವಾಯು ವಿಹಾರ ಮಾಡುವ ವ್ಯವಸ್ಥೆ ಇದೆ. ಯೋಗ ವೇದಿಕೆ ಇದೆ. ಮಕ್ಕಳಿಗೆ ಆಟವಾಡಲು ಆಟಿಕೆಗಳನ್ನು ಅಳವಡಿಸಲಾಗಿದೆ. ವಿಶ್ರಾಂತಿ ಪಡೆಯಲು ಆಸನಗಳಿವೆ. ಜಿಮ್ ವ್ಯವಸ್ಥೆಯೂ ಇದೆ. ಪರಗೋಲಗಳಿವೆ.

ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ. ಕುಡಿಯುವ ನೀರಿನ ಆರ್ ಒ ಪ್ಲಾಂಟ್ ಇದೆ. ಶೌಚಾಲಯ ವ್ಯವಸ್ಥೆಯೂ ಮಾಡಲಾಗಿದೆ. ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ಉದ್ಯಾನ ತೆರೆದಿರುತ್ತದೆ ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಜೀವ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸಿಂದಗಿಯಲ್ಲೊಂದು ಸುಸಜ್ಜಿತ ಉದ್ಯಾನ ನಿರ್ಮಾಣಗೊಂಡಿರುವುದು ಸಂತಸ ತರಿಸಿದೆ. ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ವೃಕ್ಷೊದ್ಯಾನದಲ್ಲಿ ಹಸಿರು ಪರಿಸರ
ಶಾಸಕ ಮನಗೂಳಿಯವರು ಪ್ರಾದೇಶಿಕ ಅರಣ್ಯ ಇಲಾಖೆಯ ಟ್ರೀ ಪಾರ್ಕ್ ಯೋಜನೆಯಡಿ ₹ 1 ಕೋಟಿ ಅನುದಾನ ಮಂಜೂರುಗೊಳಿಸಿದ್ದು ಸುಂದರವಾದ ವೃಕ್ಷೊದ್ಯಾನ ನಿರ್ಮಾಣಗೊಳ್ಳಲು ಸಾಧ್ಯವಾಗಿದೆ.
– ರಾಜೀವ್‌ ಬಿರಾದಾರ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸಿಂದಗಿ
ಮಕ್ಕಳ ಆಟಿಕೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.