
ಚಡಚಣ: ಯೋಗ ಮತ್ತು ನೈತಿಕ ಶಿಕ್ಷಣವು ದೈಹಿಕ ಆರೋಗ್ಯ ಮತ್ತು ಮಾನಸಿಕ ನೈತಿಕ ಮೌಲ್ಯಗಳ ಸಂಯೋಜನೆಯಾಗಿದ್ದು ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ ಎಂದು ಭಾರತ ಸೇವಾದಳ ವಲಯ ಸಂಘಟಕ ನಾಗೇಶ ಡೋಣೂರ ಹೇಳಿದರು.
ಸಮೀಪದ ಮರಗೂರ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾರತ ಸೇವಾದಳ ಅಮೃತ ಮಹೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ ಭಾರತ ಸೇವಾದಳ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗವು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನ ಸಾಧನೆಯಾಗಿದ್ದರೆ, ನೈತಿಕ ಶಿಕ್ಷಣವು ಸಮಾಜದಲ್ಲಿ ಉತ್ತಮ ನಡವಳಿಕೆ, ಮೌಲ್ಯಗಳು ಮತ್ತು ಸದ್ಗುಣಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯಾಗಿದೆ ಎಂದರು.
ಉಪಪ್ರಾಂಶುಪಾಲ ಎಸ್. ಎಂ. ಗುಬ್ಯಾಡ್ ಮಾತನಾಡಿದರು. ವಸತಿ ಶಾಲೆಯ ಶಿಕ್ಷಕರಾದ ಎಸ್ ಎಮ್ ಬನ್ನೆ, ಶರಣಬಸಪ್ಪ ವಗ್ಗಾಲೆ, ನಿಲಯ ಪಾಲಕ ಮಂಜುನಾಥ ತಳವಾರ ಹಾಗೂ ಸೇವಾದಳದ ತಾಲೂಕು ಸಂಘಟಕ ಆರ್ ಎಸ್ ಗೋಡಿಕಾರ, ಸಂಪನ್ಮೂಲ ಶಿಕ್ಷಕರಾದ ಎಮ್,ಜಿ,ಪರೀಟ್, ಸೈಪಾನ ಶೇಖ್ ಮತ್ತು ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.