ADVERTISEMENT

ಅಂಗನವಾಡಿ ಕಟ್ಟಡ: ಶಾಲಾ ಮಕ್ಕಳಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 9:30 IST
Last Updated 13 ಜನವರಿ 2012, 9:30 IST

ಶಹಾಪುರ:  ಪಟ್ಟಣದ ಫಿಲ್ಟರ್‌ಬೆಡ್ (ವಾರ್ಡ್‌ನ.0) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದ ಮುಂದುಗಡೆ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಕಟ್ಟಡ ನಿರ್ಮಾಣದಿಂದ ಮಕ್ಕಳಿಗೆ ಆಟಕ್ಕೆ ಹಾಗೂ ಪ್ರಾರ್ಥನೆ ಮಾಡಲು ತೊಂದರೆಯ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆರೋಪಿಸಿ ರೈತ ಮುಖಂಡ ಹೈಯ್ಯಾಳಪ್ಪ ಹೈಯ್ಯಾಳಕರ್ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು 1ರಿಂದ 8ತರಗತಿಯವರೆಗೆ ಇದೆ. ಸುಮಾರು 250ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ ಐದು ಕೋಣೆಗಳು ಇವೆ. ಶಾಲಾ ಮುಂದುಗಡೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಟದ ಮೈದಾನವಿದೆ.

ವಿಚಿತ್ರವೆಂದರೆ ಭೂಸೇನಾ ನಿಗಮದವರು ಏಕಾಏಕಿ ಆಗಮಿಸಿ ಮೈದಾನದ ಮಧ್ಯ ಭಾಗದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಬುನಾದಿ ಹಾಕುವ ಕಾರ್ಯ ಭರದಿಂದ ಸಾಗಿದೆ. ಇದರ ಬಗ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು ಲಕ್ಷ ತೋರಿಸುತ್ತಿದ್ದಾರೆ ಎಂದು ಯಲ್ಲಪ್ಪ ಅರಳಕಟ್ಟಿ ದೂರಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ನಮ್ಮದೇನು ತಕರಾರು ಇಲ್ಲ. ಮೈದಾನದ ಯಾವುದೇ ಒಂದು ಮೂಲೆಯ ಪ್ರದೇಶದಲ್ಲಿ ನಿರ್ಮಾಣ ಮಾಡಿದರೆ ಸೂಕ್ತ. ಆಟದ ಮೈದಾನವು ಉಳಿಸಿದಂತೆ ಆಗುತ್ತದೆ ಹಾಗೂ ಕಟ್ಟಡವು ನಿರ್ಮಾಣ ಆಗುತ್ತದೆ.

ಆದರೆ ಪುರಸಭೆ ಮುಖ್ಯಾಧಿಕಾರಿ ಇಲ್ಲದ ಸ್ವಪ್ರತಿಷ್ಠೆಗೆ ಬಿದ್ದು ಮಕ್ಕಳು ಹಟ ಸಾಧಿಸುವಂತೆ ಆಟದ ಮೈದಾನದಲ್ಲಿಯೇ ಕಟ್ಟಡ ನಿರ್ಮಾಣ ಮಾಡಲಾಗುವುದೆಂದು ಹೇಳುತ್ತಾ ಇಲ್ಲದ ಗೊಂದಲ ನಿರ್ಮಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಆಟದ ಮೈದಾನದಲ್ಲಿ ಅಂಗನವಾಡಿ ಕಟ್ಟಡವನ್ನು ನಿರ್ಮಿಸುವುದು ಸ್ಥಗಿತಗೊಳಿಬೇಕು. ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT