ADVERTISEMENT

ಅಂಚೆ ಕಚೇರಿಗೆ ದಾರಿ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 7:35 IST
Last Updated 11 ಫೆಬ್ರುವರಿ 2011, 7:35 IST

ಯಾದಗಿರಿ: ನಗರದಲ್ಲಿರುವ ಪ್ರಧಾನ ಅಂಚೆ ಕಚೇರಿಯು ಕೇಂದ್ರ ಸರ್ಕಾರದ ಪ್ರೊಜೆಕ್ಟ್ ಎರೋ ಅಡಿಯಲ್ಲಿ ಆಯ್ಕೆಯಾಗಿದ್ದು, ವಿಶೇಷ ಬಣ್ಣ, ಸುಸಜ್ಜಿತ ಸೌಲಭ್ಯಗಳಿಂದಾಗಿ ಕಂಗೊಳಿಸುವಂತಾಗಿದೆ. ಆದರೆ ಈ ಅಂಚೆ ಕಚೇರಿಗೆ ಹೋಗಲು ದಾರಿ ಮಾತ್ರ ಇಲ್ಲದಿರುವುದು ನಾಗರಿಕರಲ್ಲಿ ಬೇಸರ ಮೂಡಿಸಿದೆ.

ಇಲ್ಲಿಯ ಅಂಬೇಡ್ಕರ್ ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿಯು ಸುಮಾರು ರೂ.13 ಲಕ್ಷ ವೆಚ್ಚದಲ್ಲಿ ವಿಶೇಷವಾದ ಸೌಕರ್ಯಗಳನ್ನು ಒದಗಿ ಸುವುದರ ಜೊತೆಗೆ ಅಂಚೆ ಕಚೇರಿಯನ್ನು ದೂರದಿಂದಲೇ ಗುರುತಿಸುವಂತಾಗಲು ಬಿಳಿ ಹಾಗೂ ಕೆಂಪು ಬಣ್ಣಗಳಿಂದ ಅಲಂಕಾರ ಮಾಡ ಲಾಗುತ್ತಿದೆ. ಸಂಪೂರ್ಣವಾಗಿ ಗಣಕೀಕೃತವಾದ ಈ ಅಂಚೆ ಕಚೇರಿಯಲ್ಲಿ ಕೌಂಟ ರ್‌ಗಳ ಸೌಲಭ್ಯ ಒದಗಿಸಲಾ ಗಿದ್ದು, ಬ್ಯಾಂಕಿನ ಮಾದರಿಯಲ್ಲಿಯೇ ಕೌಂಟರ್‌ಗಳನ್ನು ನಿರ್ಮಾಣ ಮಾಡ ಲಾಗುತ್ತಿದೆ.

ಅಂಚೆ ಕಚೇರಿಯ ಒಳ ಮತ್ತು ಹೊರ ಭಾಗದಲ್ಲಿ ಬಣ್ಣ ಮಾಡಲಾ ಗಿದ್ದು, ಅಂಚೆ ಕಚೇರಿಯ ನಾಮಫಲಕ ಗಳು ನಳನಳಿಸುವಂತಾಗಿದೆ. ಇನ್ನು 15 ದಿನದಲ್ಲಿ ಹೊಸ ಮಾದರಿಯ ಅಂಚೆ ಕಚೇರಿಯೊಂದು ನಗರದಲ್ಲಿ ಗ್ರಾಹಕರ ಸೇವೆಗೆ ಸಿದ್ಧವಾಗಲಿದೆ ಎಂದು ಅಂಚೆ ಕಚೇರಿಯ ಮೂಲಗಳು ತಿಳಿಸಿವೆ.

ದಾರಿಯೇ ಇಲ್ಲ: ನಗರದ ಪ್ರಧಾನ ಅಂಚೆ ಕಚೇರಿಯಾಗಿದ್ದರೂ, ಇಲ್ಲಿಗೆ ಹೋಗಲು ದಾರಿಯೇ ಇಲ್ಲದಂತಾ ಗಿದೆ. ವಾಹನಗಳನ್ನು ದೂರದಲ್ಲಿಯೇ ನಿಲ್ಲಿಸಿ, ಅಂಚೆ ಕಚೇರಿಗೆ ಹೋಗು ವಂತಾಗಿದೆ ಎಂಬ ನೋವು ಗ್ರಾಹಕ ರದ್ದು. ಇದೀಗ ಹೊಸ ಮಾದರಿ ಅಂಚೆ ಕಚೇರಿ ನಿರ್ಮಾಣವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಹೊಂದಿದೆ. ಆದರೆ ಈ ಅಂಚೆ ಕಚೇರಿ ಯವರೆಗೆ ತಲುಪುವುದೇ ಕಷ್ಟಕರ ವಾಗಿದೆ ಎನ್ನುವುದು ಸಿದ್ಧಲಿಂಗಯ್ಯ ಅವರ ನೋವು.

ಪಕ್ಕದಲ್ಲಿಯೇ ಬಿಎಸ್‌ಎನ್‌ಎಲ್ ಕಚೇರಿ ಇದೆ. ಅಲ್ಲಿಗೆ ಸುಲಭವಾಗಿ ಹೋಗಿ ಬರಬಹುದಾಗಿದ್ದು, ಅದರ ಬದಿಯಲ್ಲಿಯೇ ಇರುವ ಅಂಚೆ ಕಚೇರಿಗೆ ರಸ್ತೆ ಕಾಣುತ್ತಿಲ್ಲ. ತೆಗ್ಗು ಬಿದ್ದಿರುವ, ಚರಂಡಿ ನೀರು ನಿಂತಿರುವ ರಸ್ತೆಯಲ್ಲಿಯೇ ಗ್ರಾಹಕರು ದಾಟಿ ಕೊಂಡು ಹೋಗುವಂತಾಗಿದೆ ಎಂದು ಸಾಕಷ್ಟು ಗ್ರಾಹಕರು ದೂರುತ್ತಾರೆ.

ಈ ಬಗ್ಗೆ ನಗರಸಭೆಗೆ, ಜಿಲ್ಲಾಡ ಳಿತಕ್ಕೆ ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ. ಇದುವರೆಗೆ ಹಳೆಯ ಕಚೇರಿ ಇತ್ತು. ಈಗ ಹೊಸ ಕಚೇರಿಯ ನಿರ್ಮಾಣವೂ ಮುಗಿಯುವ ಹಂತದಲ್ಲಿದೆ. ಈಗಲಾದರೂ ಅಂಚೆ ಕಚೇರಿಯ ಸುತ್ತಲಿನ ವಾತಾ ವರಣವನ್ನೂ ಸ್ವಚ್ಛ ಮಾಡಿದಲ್ಲಿ ಗ್ರಾಹಕರಿಗೂ ಅನುಕೂಲ ಆಗಲಿದೆ ಎನ್ನುತ್ತಾರೆ ಹೆಸರು ಬಹಿರಂಗ ಮಾಡಲು ಇಚ್ಛಿಸದ ಅಂಚೆ ಕಚೇರಿಯ ನೌಕರರು.

ನಗರದಲ್ಲಿರುವ ಅಂಚೆ ಕಚೇರಿಗೆ ಹೋಗಲು ಉತ್ತಮವಾದ ರಸ್ತೆ ನಿರ್ಮಾಣ ಮಾಡಬೇಕು. ಜೊತೆಗೆ ಸುತ್ತಲಿರುವ ಕೊಳಚೆಯನ್ನು ನಿವಾ ರಿಸಿ, ಶುದ್ಧವಾದ ವಾತಾವರಣ ಸಿಗು ವಂತೆ ಮಾಡಬೇಕು ಎನ್ನುವುದು ನಾಗರಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.