ADVERTISEMENT

ಅಂತರ್ಜಲ ಹೆಚ್ಚಳಕ್ಕೆ ಕೆರೆ ಹೂಳೆತ್ತುವುದು ಅವಶ್ಯ

ವಂಕಸಂಬರ ಗ್ರಾಮದ ಕೆರೆ ಹೂಳೆತ್ತುವ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 14:41 IST
Last Updated 28 ಏಪ್ರಿಲ್ 2019, 14:41 IST
ಸೈದಾಪುರ ಸಮೀಪದ ವಂಕಸಂಬರ ಗ್ರಾಮದ ಕೆರೆ ಹೂಳೆತ್ತುವ ಕಾರ್ಯಕ್ಕೆ ಬಿಜೆಎಸ್ ಗುರುಮಠಕಲ್ ತಾಲ್ಲೂಕು ಅಧ್ಯಕ್ಷ ಶರಣೀಕ ಕುಮಾರ ದೋಖಾ ಬುಧವಾರ ಚಾಲನೆ ನೀಡಿದರು
ಸೈದಾಪುರ ಸಮೀಪದ ವಂಕಸಂಬರ ಗ್ರಾಮದ ಕೆರೆ ಹೂಳೆತ್ತುವ ಕಾರ್ಯಕ್ಕೆ ಬಿಜೆಎಸ್ ಗುರುಮಠಕಲ್ ತಾಲ್ಲೂಕು ಅಧ್ಯಕ್ಷ ಶರಣೀಕ ಕುಮಾರ ದೋಖಾ ಬುಧವಾರ ಚಾಲನೆ ನೀಡಿದರು   

ಸೈದಾಪುರ: ಭೂಮಿಯ ಅಂತರ್ಜಲ ಹೆಚ್ಚಿಸಲು ಕೆರೆ ಹೂಳೆತ್ತುವುದು ಅತ್ಯವಶ್ಯವಾಗಿದೆ ಎಂದು ಭಾರತೀಯ ಜೈನ ಸಂಘದ ಗುರುಮಠಕಲ್ ತಾಲೂಕು ಅಧ್ಯಕ್ಷ ಶರಣೀಕ ಕುಮಾರ ದೋಖಾ ತಿಳಿಸಿದರು.

ಸಮೀಪದ ವಂಕಸಂಬರ ಗ್ರಾಮದ ಕೆರೆಯಲ್ಲಿ ಶನಿವಾರ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ರತೀಯ ಜೈನ ಸಂಘವು ಕೆರೆ ಹೂಳೆತ್ತುವ ಕಾಮಗಾರಿಗೆ ಸಂಬಂಧಿಸಿದಂತೆ ಆಯಾ ರಾಜ್ಯ ಸರಕಾಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಕರ್ನಾಟಕ ರಾಜ್ಯದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಸೇರಿದಂತೆ ದೇಶದ 130 ಜಿಲ್ಲೆಗಳಲ್ಲಿ ಕಾರ್ಯ ಪ್ರಗತಿಯಲ್ಲಿದೆ ಎಂದರು.

ADVERTISEMENT

ಕೆರೆ ಹೂಳೆತ್ತುವ ಯೋಜನೆಯು ಅತ್ಯಂತ ಪಾರದರ್ಶಕವಾಗಿದ್ದು ಭಾರತೀಯ ಜೈನ ಸಂಘ ಹಿಟಾಚಿಯ ಬಾಡಿಗೆ ನೀಡಿದರೆ ರಾಜ್ಯ ಸರಕಾರ ಅದಕ್ಕೆ ಬೇಕಾಗುವ ತೈಲ(ಡಿಸೇಲ್) ಪೂರೈಕೆಯನ್ನು ಮಾಡುತ್ತದೆ ರೈತರು ಕೆರೆಯ ಹೂಳನ್ನು ತಮ್ಮ ಹೊಲಗದ್ದೆಗಳಿಗೆ ಸಾಗಿಸಿಕೊಳ್ಳಬೇಕಾಗುತ್ತದೆ. ಕೆರೆ ಹೂಳೆತ್ತುವ ಕಾರ್ಯಕ್ಕೆ ರೈತರ ಸಹಕಾರ ಅತ್ಯವಶ್ಯಕವಾಗಿದೆ. ಹೂಳನ್ನು ರೈತರು ತಮ್ಮ ಹೊಲಗದ್ದೆಗಳಿಗೆ ಹಾಕಿಸಿಕೊಂಡು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ, ಚಂದ್ರಶೇಖರ ವಾರದ, ಮಹಿಪಾಲರೆಡ್ಡಿ ದುಪ್ಪಲ್ಲಿ, ರಾಘವೇಂದ್ರ ಸಂಬ್ರ ಇದ್ದರು.

*ಗುರುಮಠಕಲ್ತಾಲ್ಲೂಕುನಾದ್ಯಂತಕೆರೆ ಹೂಳೆತ್ತುವ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ರೈತರು ಹೂಳನ್ನು ತಮ್ಮ ಜಮೀನುಗಳಿಗೆ ಸಾಗಿಸಿಕೊಳ್ಳುತ್ತಿದ್ದಾರೆ. ತಮ್ಮೂರಿನ ಕೆರೆಗಳ ಹೂಳನ್ನು ಸಹ ತೆಗೆಸುವಂತೆ ಇನ್ನು ಗ್ರಾಮಗಳ ರೈತರು ಒತ್ತಾಯ ಮಾಡುತ್ತಿದ್ದಾರೆ ಸಕಾಲಕ್ಕೆ ಮಳೆಯಾಗಿ ಕೆರೆಗಳು ತುಂಬಿಕೊಂಡಲ್ಲಿ ಅಂತರ್ಜಲ ಮಟ್ಟ ಸುಧಾರಣಗೊಳ್ಳಲಿದೆ.
-ಶರಣಿಕ ಕುಮಾರ ದೋಖಾ ಅಧ್ಯಕ್ಷರು.
ಬಿಜೆಎಸ್ ಗುರುಮಠಕಲ್ ತಾಲ್ಲೂಕು ಘಟಕ

*ಜೈನ ಸಂಘದವರು ಹಾಕಿಕೊಂಡಿರುವ ಕೆರೆ ಹೂಳೆತ್ತು ಕಾರ್ಯ ಶ್ಲಾಘನೀಯ. ಕೆರೆಯಲ್ಲಿ ನೀರಿನ ಸಂಗ್ರಹ ಪ್ರಮಾಣ ಹೆಚ್ಚುವ ಜತೆಗೆ ಅಂತರ್ಜಲ ಮಟ್ಟ ಸುಧಾರಣೆಯಾಗಲಿದೆ. ಕೆರೆಯ ಹೂಳನ್ನು ಹೊಲಗದ್ದೆಗಳಿಗೆ ಹಾಕಿಕೊಳ್ಳುವದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.

–ನಿಂಗಪ್ಪ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.