ADVERTISEMENT

ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 7:20 IST
Last Updated 2 ಫೆಬ್ರುವರಿ 2011, 7:20 IST

ಯಾದಗಿರಿ: ಜಿಲ್ಲಾ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆಯ ವತಿಯಿಂದ ಕೈಗೊಳ್ಳುತ್ತಿರುವ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿಯನ್ನು ಫೆಬ್ರವರಿ ಅಂತ್ಯದವರೆಗೆ ಪೂರ್ಣಗೊಳಿ ಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಜರುಗಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರೊ. ಮುಮ್ತಾಜ್ ಅಲಿಖಾನ್, ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗುಂಡಿಗಳನ್ನು ಫೆಬ್ರವರಿ ಅಂತ್ಯದೊ ಳಗೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು,ಯಾದಗಿರಿ ತಾಲ್ಲೂಕಿನಲ್ಲಿ ಇಲಾಖೆ ವತಿಯಿಂದ ರೂ. 56 ಲಕ್ಷ ವೆಚ್ಚದಲ್ಲಿ 15 ಕಾಮ ಗಾರಿಗಳನ್ನು ಆರಂಭಿಸಲಾಗಿದೆ. ಶೇ. 50 ರಷ್ಟು ಕಾಮಗಾರಿಗಳು ಪ್ರಗತಿ ಯಲ್ಲಿವೆ. ಶಹಾಪುರ ತಾಲ್ಲೂಕಿನಲ್ಲಿ ರೂ.85 ಲಕ್ಷ ವೆಚ್ಚದಲ್ಲಿ 22 ಕಾಮ ಗಾರಿಗಳನ್ನು ಹಮ್ಮಿಕೊಳ್ಳಲಾ ಗಿದ್ದು, ಶೇ. 40 ರಷ್ಟು ಕಾಮಗಾರಿಗಳು ಪ್ರಗತಿ ಯಲ್ಲಿವೆ. ಸುರಪುರ ತಾಲ್ಲೂಕಿನಲ್ಲಿ ರೂ. 46 ಲಕ್ಷ ವೆಚ್ಚದಲ್ಲಿ 8 ಕಾಮಗಾರಿ ಗಳನ್ನು ಆರಂಭಿಸಲಾಗಿದ್ದು, 2 ಕಾಮ ಗಾರಿಗಳು ಪೂರ್ಣಗೊಂಡಿವೆ ಎಂದು ವಿವರಿಸಿದರು.

ವಿವಿಧ ಯೋಜನೆಗಳ ಅಡಿಯಲ್ಲಿ ರೂ.190.52 ಲಕ್ಷ ವೆಚ್ಚದಲ್ಲಿ 304 ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಈ ಪೈಕಿ 112 ಕಾಮಗಾರಿಗಳು ಮುಕ್ತಾಯ ಗೊಂಡಿದ್ದು, 112 ಕಾಮಗಾರಿಗಳು ವಿವಿಧ ಹಂತದಲ್ಲಿವೆ. 192 ಕಾಮ ಗಾರಿಗಳನ್ನು ಇನ್ನೂ ಪ್ರಾರಂಭಿಸಬೇಕಾ ಗಿದೆ. ಈವರೆಗೆ ರೂ.48.72 ಕೋಟಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಲೋಕೋಪಯೋಗಿ ಉಪವಿಭಾಗ:
ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸುಮಾರು 400 ಕೋಟಿಗಳ ವಿಶೇಷ ಅನುದಾನವನ್ನು ಮುಖ್ಯಮಂತ್ರಿ ಗಳು ಘೋಷಿಸಿದ್ದು, ಇದನ್ನು ಕಾಲಮಿತಿ ಯೊಳಗೆ ಬಳಸಿಕೊಳ್ಳಲು ಅನಕೂಲ ವಾಗುವಂತೆ ಯಾದಗಿರಿಯಲ್ಲಿ ಲೋಕೋಪಯೋಗಿ ಇಲಾಖೆಯ ಉಪವಿಭಾಗವನ್ನು ಆರಂಭಿಸಲಾಗು ತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರೊ. ಮುಮ್ತಾಜ್ ಅಲಿಖಾನ್ ತಿಳಿಸಿದರು.

ಸಹಾಯಕ ಕಾರ್ಯಪಾಲಕ ಎಂಜಿ ನಿಯರ್, ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರುಗಳ ತಲಾ ಎರಡು ಹುದ್ದೆಗಳು, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ,ಪ್ರೋಗ್ರಾಮರ್, ಅಥವಾ ಬೆರಳಚ್ಚುಗಾರ, ಗ್ರುಪ್ ಡಿ ಮತ್ತು ರಾತ್ರಿ ಕಾವಲುಗಾರರ ತಲಾ 2 ಹುದ್ದೆಗಳು, ವಾಹನ ಚಾಲಕ ಸೇರಿದಂತೆ ಒಟ್ಟು 13 ಸಿಬ್ಬಂದಿಯನ್ನು ಒಳ ಗೊಂಡ ಉಪವಿಭಾಗವನ್ನು ಎರಡು ವರ್ಷಗಳ ಕಾಲಾವಧಿಗೆ ಪ್ರಾರಂಭಿಸ ಲಾಗುತ್ತಿದೆ ಎಂದು ಹೇಳಿದರು.

ವಕ್ಪ ಸಲಹಾ ಸಮಿತಿ ಕಟ್ಟಡ: ನಗರದಲ್ಲಿ ಸುಮಾರು ರೂ.25 ಲಕ್ಷ ವೆಚ್ಚದಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಟ್ಟಡವನ್ನು ನಿರ್ಮಿಸಲಾಗುವುದು. ಇದಕ್ಕಾಗಿ ನಿವೇಶನವನ್ನು ನೀಡಲು ಜಿಲ್ಲಾಡಳಿತ ಸಿದ್ಧವಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರೊ. ಮುಮ್ತಾಜ್ ಅಲಿಖಾನ್ ತಿಳಿಸಿದರು.ಉರ್ದು ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ ಇರುವುದು ಕಂಡು ಬಂದಿದೆ. ಉರ್ದು ಜೊತೆಗೆ ಕನ್ನಡ ಬರುವ ಶಿಕ್ಷಕರನ್ನು ಆದ್ಯತೆಯ ಮೇಲೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 102 ಉರ್ದು ಶಾಲೆಗಳಿದ್ದು, ಅವುಗಳಿಗೆ ಈಗಾಗಲೇ ಕಲಿಕಾ ಸಾಮಗ್ರಿಗಳನ್ನು ನೀಡಲಾಗು ತ್ತಿದೆ. ಇನ್ನೂ ಹೆಚ್ಚಿನ ಕಲಿಕಾ ಸಾಮಗ್ರಿಗಳನ್ನು ನೀಡಲು ವಿಧಾನ ಪರಿಷತ್ ಸದಸ್ಯ ಅನುದಾನದಲ್ಲಿ ರೂ.20 ಲಕ್ಷ ಲಭ್ಯವಿದೆ. ಈ ಅನು ದಾನದಲ್ಲಿ ಪ್ರತಿ ಶಾಲೆಗೆ ರೂ.10 ಸಾವಿರ ನೀಡಲಾಗುವುದು. ಉರ್ದು ಶಾಲೆಗಳ ಅಭಿವೃದ್ಧಿಗೆ ಇದೇ ಅನು ದಾನದಲ್ಲಿ ರೂ.25 ಲಕ್ಷ ಲಭ್ಯವಿದ್ದು, ಜಿಲ್ಲೆ ಮೂರು ತಾಲ್ಲೂಕುಗಳಿಗೆ ತಲಾ ರೂ.5 ಲಕ್ಷಗಳನ್ನು ಶಾಲೆಗಳ ದುರಸ್ತಿ ಅಥವಾ ಪೀಠೋಪಕರಣಗಳ ಖರೀದಿಗೆ ಪ್ರಸ್ತಾಪ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಸಹಾಯಕ ಆಯುಕ್ತರಾದ ಕವಿತಾ ಮನ್ನಿಕೇರಿ, ಸಚಿವರ ಆಪ್ತ ಕಾರ್ಯ ದರ್ಶಿ ಅಕ್ರಮ್ ಪಾಷಾ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಎಸ್.ಐ. ಚೌಗಲಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆ ಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.