ADVERTISEMENT

ಆಕರ್ಷಕ ರಣಗಂಬಾರೋಹಣ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2011, 9:35 IST
Last Updated 26 ಆಗಸ್ಟ್ 2011, 9:35 IST
ಆಕರ್ಷಕ ರಣಗಂಬಾರೋಹಣ
ಆಕರ್ಷಕ ರಣಗಂಬಾರೋಹಣ   

ಸುರಪುರ: ಇಲ್ಲಿನ ಸುಪ್ರಸಿದ್ಧ ಹಾಲೋಕುಳಿ ಜಾತ್ರೆಯ ಅಂಗವಾಗಿ ಶುಕ್ರವಾರ ಇಲ್ಲಿನ ರಮಣಪ್ಪನಾಯಕನ ಕಟ್ಟೆಯ ಹತ್ತಿರ ಎರಡು ರಣಗಂಬಗಳ ಆರೋಹಣ ಆಕರ್ಷಕವಾಗಿತ್ತು. ಸಾವಿರಾರು ಜನ ಈ ದೃಶ್ಯವನ್ನು ಕಣ್ತುಂಬಿಕೊಂಡರು. ನಿರ್ದಿಷ್ಟ ಜನರು ಕಂಬ ಹತ್ತುವಾಗ ಜಾರಿ ಜಾರಿ ಕೆಳಗೆ ಬೀಳುತ್ತಿದ್ದರು. ಕೊನೆಗೂ ಕಂಬ ಹತ್ತಿದ ವ್ಯಕ್ತಗಳನ್ನು ರಾಜ ವಂಶಸ್ಥರು ಗೌರವಿಸಿದರು.

ಸಂಜೆ ಮೇನೆಯಲ್ಲಿ ರಾಜಗುರು ವಿಜಯರಾಘವನ್ ಬುಕ್ಕಪಟ್ಟಣಂ ಮೆರವಣಿಗೆಯಲ್ಲಿ ಆಗಮಿಸಿ ರಣಗಂಬಾರೋಹಣಕ್ಕೆ ಚಾಲನೆ ನೀಡಿದರು.

ರಾಜವಂಶಸ್ಥರು ಅರಮನೆಯಿಂದ ಬಾಜಾ ಭಜಂತ್ರಿಯೊಂದಿಗೆ ಆಗಮಿಸಿ ರಮಣಪ್ಪನಾಯಕನ ಕಟ್ಟೆಯ ಮೇಲೆ ಕುಳಿತು ಸ್ತಂಬಾರೋಹಣ ವೀಕ್ಷಿಸಿದರು. ದೊರೆಯ ದರ್ಶನದಿಂದ ಸಾರ್ವಜನಿಕರು ಪುಳಕಗೊಂಡರು.

ರಾಜ ವಂಶಸ್ಥ ರಾಜಾ ವೆಂಕಟಪ್ಪನಾಯಕ ತಾತಾ, ಯುವರಾಜರಾದ ರಾಜಾ ಕೃಷ್ಟಪ್ಪನಾಯಕ, ರಾಜಾ ಲಕ್ಷ್ಮೀನಾರಾಯಣನಾಯಕ್, ರಾಜಾ ಎಸ್. ಗೋಪಾಲನಾಯಕ್, ರಾಜಾ ರಂಗಪ್ಪನಾಯಕ ಸುಂಡಿ, ವತನದಾರರಾದ ಶರಣಬಸಪ್ಪ ನಿಷ್ಠಿ, ದೊಡ್ಡಪ್ಪ ನಿಷ್ಠಿ, ಮುದ್ದಣ್ಣ ಸರಪಟ್ಟಣಶೆಟ್ಟಿ, ಉಸ್ತಾದ ವಜಾಹತ್ ಹುಸೇನ್, ಗಣೇಶ ಜಾಗೀರದಾರ್, ರಾಜಾ ರಂಗಪ್ಪರಾಜ್, ರಾಜಾ ಅಮಲಪ್ಪನಾಯಕ ಸುಂಡಿ, ರಾಜಾ ಬಾಳಾಸಾಹೇಬ, ವೇಣುಮಾಧವನಾಯಕ್, ರಾಜಾ ಪಿಡ್ಡನಾಯಕ್ ಪ್ಯಾಪ್ಲಿ, ವೆಂಕೋಬರಾವ ಮುಜುಮದಾರ್, ದಿನೇಶ ಮಂತ್ರಿ, ವಾಸುದೇವನಾಯಕ್ ಸರಹವಾಲ್ದಾರ್, ಶ್ರೀನಿವಾಸನಾಯಕ ಹವಾಲ್ದಾರ್, ರಾಜಾ ವೇಣುಗೋಪಾಲನಾಯಕ ಐಕೋಡಿ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.