ADVERTISEMENT

ಕೋಟಿ ಒಡೆಯ; ₹ 1.20 ಲಕ್ಷ ಬೆಳೆ ಸಾಲಗಾರ

ಬಿಜೆಪಿ ಅಭ್ಯರ್ಥಿ ಗುರು ಪಾಟೀಲ ಶಿರವಾಳ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 12:20 IST
Last Updated 21 ಏಪ್ರಿಲ್ 2018, 12:20 IST
ಗುರು ಪಾಟೀಲ ಶಿರವಾಳ
ಗುರು ಪಾಟೀಲ ಶಿರವಾಳ   

ಶಹಾಪುರ: ಗುರು ಪಾಟೀಲ ಶಿರವಾಳ ಅವರು ಬಿಜೆಪಿ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಆಸ್ತಿ ಘೋಷಣೆಯಲ್ಲಿ ಕೋಟಿ ಒಡೆಯನಾಗಿದ್ದರು ಸಹ ₹1.20 ಲಕ್ಷ ಬೆಳೆ ಸಾಲಗಾರನಾಗಿದ್ದಾರೆ.

ಗುರು ಪಾಟೀಲ ಶಿರವಾಳ ಅವರ ಚರಾಸ್ತಿ ಮೌಲ್ಯ ₹ 1.15 ಕೋಟಿ ಹಾಗೂ ಸ್ಥಿರಾಸ್ತಿ ಮೌಲ್ಯ ₹ 73 ಸಾವಿರ ಇದೆ. ಪತ್ನಿ ಸುರೇಖಾ ಪಾಟೀಲ ಅವರ ಹೆಸರಿನಲ್ಲಿ ಚರಾಸ್ತಿ ₹ 13.82 ಲಕ್ಷ ಮತ್ತು ಗುರು ಪಾಟೀಲ ಅವರ ತಾಯಿ ಅವರ ಹೆಸರಿನಲ್ಲಿ ಚರಾಸ್ತಿ ₹ 29.76ಲಕ್ಷ ಹಾಗೂ ದಿ.ಶಿವಶೇಖರಪ್ಪಗೌಡ ಶಿರವಾಳ ಅವರ ಹೆಸರಿನಲ್ಲಿ ಸ್ಥಿರಾಸ್ತಿ ₹13 ಲಕ್ಷ ಇದೆ.

ಅಲ್ಲದೆ ಕೆನರಾ ಬ್ಯಾಂಕಿನಲ್ಲಿ ₹16.63 ಲಕ್ಷ. ಸಣ್ಣ ನೀರಾವರಿ ಬೆಳೆ ಸಾಲ ₹1.20ಲಕ್ಷ ಹಾಗೂ ವಾಹನದ ಸಾಲ ₹8.31ಲಕ್ಷ ಸಾಲ ಪಡೆದುಕೊಂಡ ಬಗ್ಗೆ ಆಸ್ತಿ ವಿವರ ಘೋಷಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಗುರು ಪಾಟೀಲ ಶಿರವಾಳ ಅವರ ಬಳಿ ನಗದು ₹ 75 ಸಾವಿರ ಇದೆ. ಶಹಾಪುರದ ಕೆನರಾ ಬ್ಯಾಂಕಿನಲ್ಲಿ ₹6.93 ಲಕ್ಷ, ಬೆಂಗಳೂರಿನ ಎಸ್‌ಬಿಐ ಬ್ಯಾಂಕಿನಲ್ಲಿ ₹38.67 ಲಕ್ಷ ನಗದು ಇದೆ. ಕೆನರಾ ಬ್ಯಾಂಕಿನಲ್ಲಿ 500 ಷೇರುಗಳು (ಈಗಿನ ಮಾರುಕಟ್ಟೆ ಬೆಲೆ ₹1.39ಲಕ್ಷ) ಶಿರವಾಳ ಹೈಡಲ್ ಪವರ್‌ನಲ್ಲಿ ₹ 3 ಲಕ್ಷ ಹೂಡಿಕೆ, ಎಲ್ಐಸಿಯಲ್ಲಿ ₹ 42ಸಾವಿರ, ಕೊಟೆಕ್ ಮಹೇಂದ್ರ ಲೈಫ್ ಇನ್ಸೂರೆನ್ಸ್ ನಲ್ಲಿ ₹49 ಸಾವಿರ, ಎಸ್‌ಬಿಐ ಲೈಫ್ ಇನ್ಸೂರೆನ್ಸ್ ₹1.11 ಲಕ್ಷ ಹೂಡಿಕೆ ಮಾಡಿದ್ದಾರೆ.

ಪತ್ನಿ ಸುರೇಖಾ ಪಾಟೀಲ ಅವರ ಬಳಿ ನಗದು ₹ 25 ಸಾವಿರ ಇದೆ. ಎಸ್‌ಬಿಐ ನೀಲಗಂಗಾ ₹2.23 ಲಕ್ಷ ಗುರು ಪಾಟೀಲ್ ಅವರ ತಾಯಿ ಬಳಿ ನಗದು ₹5ಸಾವಿರ, ಕೆನರಾ ಬ್ಯಾಂಕ್ ಶಹಾಪುರದಲ್ಲಿ ₹ 20.46ಲಕ್ಷ ನಗದು ಹಣವಿದೆ.

ಗುರು ಪಾಟೀಲ ಶಿರವಾಳ ಅವರ ಹೆಸರಿನಲ್ಲಿ ಶಿರವಾಳ ಗ್ರಾಮದಲ್ಲಿ 51 ಎಕರೆ 6 ಗುಂಟೆ ಜಮೀನು ಇದೆ. ತಾಯಿ ಹೆಸರಿನಲ್ಲಿ 52 ಎಕರೆ 32 ಗುಂಟೆ ಜಮೀನು ಇದೆ. (ದಿ.ಶಿವಶೇಖರಪ್ಪಗೌಡ ಶಿರವಾಳ ಅವರ ಹೆಸರಿನಲ್ಲಿ 46 ಎಕರೆ 1ಗುಂಟೆ ಜಮೀನು ಇದೆ).

ಗುರು ಪಾಟೀಲ ಶಿರವಾಳ ಅವರ ತಂದೆ ದಿ.ಶಿವಶೇಖರಪ್ಪಗೌಡ ಶಿರವಾಳ ಅವರ ಹೆಸರಿನಲ್ಲಿ ಒಂದು ಸೈಟ್ ಹಾಗೂ ಒಂದು ಅಪಾರ್ಟ್ ಮೆಂಟ್ ಅದರ ಮೌಲ್ಯ ₹ 76 ಲಕ್ಷ ಇದೆ. ಅಲ್ಲದೆ ಗುರು ಪಾಟೀಲ್ ಅವರ ಹೆಸರಿನಲ್ಲಿ 810 ಗ್ರಾಂ ಚಿನ್ನ (ಅದರ ಮೌಲ್ಯ 21.66ಲಕ್ಷ) ಬೆಳ್ಳಿ 10ಸಾವಿರ ಗ್ರಾಂ (ಮೌಲ್ಯ 4ಲಕ್ಷ), ಪತ್ನಿ ಸುರೇಖಾ ಪಾಟೀಲ್ ಅವರ ಹೆಸರಿನಲ್ಲಿ 450 ಗ್ರಾಂ ಚಿನ್ನಾಭರಣ (ಮೌಲ್ಯ ₹13.10ಲಕ್ಷ) ಬೆಳ್ಳಿ 600 ಗ್ರಾಂ, ತಾಯಿ ಹೆಸರಿನಲ್ಲಿ 300 ಗ್ರಾಂ ಚಿನ್ನ (ಮೌಲ್ಯ 9ಲಕ್ಷ) ಬೆಳ್ಳಿ 500 ಗ್ರಾಂ (ಮೌಲ್ಯ ₹ 25 ಸಾವಿರ)ಇದೆ. ಗುರು ಪಾಟೀಲ್ ಶಿರವಾಳ ಅವರು ಇನೋವಾ ಕಾರ್ ಹೊಂದಿದ್ದು ಅದರ ಬೆಲೆ ಬೆಲೆ ₹ 6ಲಕ್ಷ ಹಾಗೂ ತಂದೆ ಹೆಸರಿನಲ್ಲಿ ಅಂಬಾಸಿಡರ್ ಕಾರ್ ಹೊಂದಿದ್ದಾರೆ ಅದರ ಮೌಲ್ಯ 30 ಸಾವಿರ ಇದೆ ಎಂದು ಆಸ್ತಿ ಘೋಷಣೆಯಲ್ಲಿ ನಮೂದಿಸಿದ್ದಾರೆ.

ನಾಮಪತ್ರ ಸಲ್ಲಿಕೆ: ಶಹಾಪುರ ವಿಧಾನಸಭೆಯ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರು ಪಾಟೀಲ ಶಿರವಾಳ ಶುಕ್ರವಾರ ಪಕ್ಷದ ’ಬಿ’ ಫಾರಂ ಸಮೇತ ಉಮೇದುವಾರಿಕೆಯನ್ನು ಸಲ್ಲಿಸಿದರು.

ಶುಭ ಗಳಿಗೆಗಾಗಿ ಕಾಯುತ್ತಲೇ ಮಧ್ಯಾಹ್ನ 2.30 ಗಂಟೆಗೆ ತಹಶೀಲ್ದಾರ್‌ ಕಚೇರಿಗೆ ಆಗಮಿಸಿ ಚುನಾವಣೆ ಅಧಿ ಕಾರಿ ನವೀನ್ ಜೋಸೆಫ್ ಅವರಿಗೆ ಸಲ್ಲಿಸಿದರು.

ಬಿಜೆಪಿ ಪಕ್ಷದ ಮುಖಂಡರಾದ ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ, ರಾಮಚಂದ್ರಪ್ಪ ಕಾಶಿರಾಜ, ಭೀಮಯ್ಯಗೌಡ,ಲಾಲ್ ಅಹ್ಮದ ಖುರೇಶಿ, ರಾಜಶೇಖರ ಗೂಗಲ್ ಜೊತೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.