ADVERTISEMENT

`ಧಾರ್ಮಿಕ ಕಾರ್ಯಕ್ರಮದಿಂದ ಸೌಹಾರ್ದ'

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 7:13 IST
Last Updated 9 ಏಪ್ರಿಲ್ 2013, 7:13 IST
`ಧಾರ್ಮಿಕ ಕಾರ್ಯಕ್ರಮದಿಂದ ಸೌಹಾರ್ದ'
`ಧಾರ್ಮಿಕ ಕಾರ್ಯಕ್ರಮದಿಂದ ಸೌಹಾರ್ದ'   

ಯಾದಗಿರಿ: ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದ, ಶಾಂತಿ, ಐಕ್ಯತೆಗೆ ಕಾರಣವಾಗಿವೆ ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಅರಕೇರಾ ಕೆ. ಗ್ರಾಮದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಇತ್ತೀಚೆಗೆ ಜರುಗಿದ 11 ನೇ ಶರಣ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಒತ್ತಡದ ಬದುಕಿನ ಮಧ್ಯೆ ಸಮಾಜದಲ್ಲಿ ಶಾಂತಿಯ ವಾತಾವರಣ ನಿರ್ಮಾಣ ಮಾಡಲು ಹಾಗೂ ನೆಮ್ಮದಿಯ ಜೀವನ ಸಿಗಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.

ಜಗದೀಶ್ವರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರಡ್ಡಿ ಪಾಟೀಲ ತುನ್ನೂರ ಜ್ಯೋತಿ ಬೆಳಗಿದರು. ಲಿಂಗನಗೌಡ ಮಲ್ಹಾರ, ರಥ ನಿರ್ಮಾಣಕ್ಕೆ ಚಾಲನೆ ನೀಡಿದರು. ಇಳಕಲ್ ಸಿದ್ಧ ಬಸವ ಚೆನ್ನವೀರ ಸ್ವಾಮೀಜಿ, ಸಿದ್ಧಾರೂಢ, ಸಿದ್ಧಿವಿನಾಯಕ ಹಾಗೂ ದ್ವಾದಶ ಜ್ಯೋತಿರ್ಲಿಂಗಗಳಿಗೆ ನಿತ್ಯಾಭಿಷೇಕ ಉದ್ಘಾಟಿಸಿದರು. ಸಿದ್ಧಾನಂದ ಸ್ವಾಮೀಜಿ ಹಾಜರಿದ್ದರು.

ನವಗ್ರಹ ಸ್ಥಾಪನೆ ನಡೆಯಿತು. ಕುಂಭ ಕಳಸೋತ್ಸವದೊಂದಿಗೆ ಪಲ್ಲಕ್ಕಿಉತ್ಸವ ಜರುಗಿತು. ನಿತ್ಯ ಪ್ರವಚನ, ಭಜನೆ, ಮುಂತಾದ ಕಾರ್ಯಕ್ರಮಗಳು ಜರುಗಿದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಆರೂಢ ಶ್ರೀರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿದ್ಧಬಸವಾರೂಢ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಜರುಗಿತು.

ಯೋಗಿರಾಜ ಸದಾಶಿವ ಗುರೂಜಿ, ಹಜರತ್ ಸೈಯ್ಯದ್ ಅಬುತುರಾಜ್ ಷಾ ಖಾದ್ರಿ, ಶಿವಾನಂದ ಸ್ವಾಮೀಜಿ, ಚಿದಾನಂದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನಾಗನಗೌಡ ಕಂದಕೂರ, ಡಾ. ಮಹಾದೇವಿ ಮಾಲಕರಡ್ಡಿ, ಯಲ್ಲಾರಡ್ಡಿ, ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶರಣೀಕ್‌ಕುಮಾರ ದೋಖಾ, ಪ್ರಕಾಶರಡ್ಡಿ, ಲಕ್ಷ್ಮಣ, ಚೆನ್ನಾರಡ್ಡಿ ಗಡ್ಡೆಸುಗೂರು, ಆಗಮಿಸಿದ್ದರು.

ಭೂದಾನಿ ಸೂಗಪ್ಪ ಬಿರಾದಾರ ಸಹೋದರರು, ಶ್ರೀರಾಮುಲು, ಮಲ್ಲು ಬಾಡದ, ಕಾಶೀನಾಥ ಬೋರಬಂಡ್, ಬಸವರಾಜಪ್ಪ, ಡಾ. ಹನುಮಂತಪ್ಪ ಮಿನಾಸಪೂರ, ಮುಂತಾದವರು ಸನ್ಮಾನಿಸಲಾಯಿತು.

ದೇವಿಂದ್ರಮ್ಮ ಹಾಗೂ ಶಿವಾನಂದ ಗವಾಯಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸೂಗಪ್ಪ ಬಿರೇದಾರ ಸ್ವಾಗತಿಸಿದರು. ಡಿ.ಆರ್. ಬಾಡದೋರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.