ADVERTISEMENT

`ಮಗುವಿಗೊಂದು ಮರ ನೆಡಿ'

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2013, 9:39 IST
Last Updated 6 ಆಗಸ್ಟ್ 2013, 9:39 IST
ಹುಣಸಗಿ ಸಮೀಪದ ಅರಕೇರಾ ಜೆ.ಗ್ರಾಮದ ಶಾಲೆಯಲ್ಲಿ ಸೋಮವಾರ ನಡೆದ ವವನಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಫಲಕಗಳೊಂದಿಗೆ ಪಾಲ್ಗೊಂಡ ಮಕ್ಕಳು
ಹುಣಸಗಿ ಸಮೀಪದ ಅರಕೇರಾ ಜೆ.ಗ್ರಾಮದ ಶಾಲೆಯಲ್ಲಿ ಸೋಮವಾರ ನಡೆದ ವವನಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಫಲಕಗಳೊಂದಿಗೆ ಪಾಲ್ಗೊಂಡ ಮಕ್ಕಳು   

ಹುಣಸಗಿ: ಸಮೀಪದ ಅರಕೇರಾ ಜೆ. ಗ್ರಾಮದ ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವನಮಹೋತ್ಸವ ಆಚರಿಸಲಾಯಿತು.

ಡಾ. ಎಸ್.ಎಸ್. ದೇಸಾಯಿ ಮಾತನಾಡಿ, ಒಂದು ಮರ ಮಾನವನ ಜೀವನಕ್ಕೆ ಬೇಕಾದ ಆಮ್ಲಜನಕವನ್ನು ನೀಡುತ್ತದೆ. ಅರಣ್ಯ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಕಾರಣವಾಗಬೇಕು. ಮಗುವಿಗೊಂದು ಮರ ನೆಡಬೇಕು ಎಂದರು.
ನಾವು ಹೆಚ್ಚು ಸಸಿಗಳನ್ನು ನೆಡುವ ಮೂಲಕ ರಾಷ್ಟ್ರದ ವನ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಶಿಕ್ಷಕ ಬಸವರಾಜ ಸಜ್ಜನರ, ಇತ್ತೀಚಿಗೆ ಭಾರತ ಜನಸಂಖ್ಯೆ ಹೆಚ್ಚಿದಂತೆ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಇದರಿಂದ ವನ ಸಂಪತ್ತು ಕಡಿಮೆಯಾಗುತ್ತಿದೆ. ಗುಜರಾತ್‌ನಲ್ಲಿ 38 ಸಾವಿರ ಎಕರೆಯಲ್ಲಿ ನಿರ್ಮಾಣವಾಗುತ್ತಿರುವ `ದೊಲೆವಾ'ನಗರ ನಿರ್ಮಾಣವೇ ಉದಾಹರಣೆ ಎಂದರು.

ಮುಖ್ಯಗುರು ಬಸವರಾಜ ಪಲಗಲದಿನ್ನಿ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷೆ ಮಹಾದೇವಿ ಮಾತನಾಡಿದರು. ಪರಿಮಳಾ ಸ್ವಾಗತಿಸಿದರು. ಪುಷ್ಪಾ ವಂದಿಸಿದರು. ಪದ್ಮಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.