ADVERTISEMENT

‘ಮಹಾವೀರರ ತತ್ವಗಳು ಬದುಕಿಗೆ ದಾರಿ ದೀಪ’

ಭಗವಾನ್ ಮಹಾವೀರ ಜಯಂತಿ; ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 6:23 IST
Last Updated 30 ಮಾರ್ಚ್ 2018, 6:23 IST
ಯಾದಗಿರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತ್ಯುತ್ಸವವನ್ನು ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಉದ್ಘಾಟಿಸಿದರು
ಯಾದಗಿರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತ್ಯುತ್ಸವವನ್ನು ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಉದ್ಘಾಟಿಸಿದರು   

ಯಾದಗಿರಿ: ‘ಭಗವಾನ್ ಮಹಾವೀರರು ಸಮ್ಯಕ್ ದರ್ಶನ್, ಸಮ್ಯಕ್‌ಜ್ಞಾನ ಹಾಗೂ ಸಮ್ಯಕ್ ಚಾರಿತ್ರ್ಯ ಎಂಬ ಮೂರು ತತ್ವಗಳನ್ನು ನೀಡಿದ್ದು, ಅವು ನಮ್ಮೆಲ್ಲರ ಬದುಕಿಗೆ ದಾರಿ-ದೀಪವಾಗಿವೆ’ ಎಂದು ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಅಭಿಪ್ರಾಯಪಟ್ಟರು.

ನಗರದ ಮಹಾವೀರ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಭಗವಾನ್ ಮಹಾವೀರ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಭಾರತದಲ್ಲಿ ಬೌದ್ಧ, ಜೈನ, ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ ಎಂಬ ಆರು ನಾಸ್ತಿಕ ಧರ್ಮಗಳಿದ್ದು, ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯರ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಹಾಗೂ ಶಕ್ತಿ ವಿಶಿಷ್ಟದ್ವೈತಗಳ ಆಸ್ತಿಕ ಧರ್ಮಗಳೂ ಇವೆ. ಆದರೆ, ಅವುಗಳಲ್ಲಿ ಜೈನ ಧರ್ಮ ಅಹಿಂಸೆಯನ್ನು ಎತ್ತಿ ಹಿಡಿಯುತ್ತದೆ’ ಎಂದರು.

ADVERTISEMENT

ಬೆಂಗಳೂರಿನ ಶಾಂತಿಲಾಲ್ ಜೀ ಡೊಂಗೆರವಾಲ ಜೈನ್ ಅವರು ಭಗವಾನ್ ಮಹಾವೀರ ಕುರಿತು ಉಪನ್ಯಾಸ ನೀಡಿದರು.

ಬಾಬು ದೋಖಾ, ಬೆಂಗಳೂರಿನ ಅಶೋಕ್ ಜಿ. ಜೈನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಭಗವಂತ ಅನವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.