ADVERTISEMENT

ಮುಸ್ಲಿಂ ಯುವಕರಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 6:36 IST
Last Updated 11 ಸೆಪ್ಟೆಂಬರ್ 2013, 6:36 IST
ಭೀಮರಾಯನಗುಡಿಯ  ದರ್ಶನಾಪುರ ವೃತ್ತದ ಬಳಿ ಸೋಮವಾರ  ಮುಸ್ಲಿಂ ಯುವಕರು ಗಣೇಶ  ಮೂರ್ತಿ ಪ್ರತಿಷ್ಠಾಪಿಸಿರುವುದು
ಭೀಮರಾಯನಗುಡಿಯ ದರ್ಶನಾಪುರ ವೃತ್ತದ ಬಳಿ ಸೋಮವಾರ ಮುಸ್ಲಿಂ ಯುವಕರು ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವುದು   

ಶಹಾಪುರ:  ಭೀಮರಾಯನಗುಡಿ ಮುಸ್ಲಿಂ ಸಮುದಾಯದ ಯುವಕರು ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.

ನಾವು ಕಳೆದ ಆರು ವರ್ಷದಿಂದ ಗಣೇಶನ ಹಬ್ಬವನ್ನು ಆಚರಿಸುತ್ತಾ ಬರುತ್ತಿದ್ದೇವೆ. ಯಾವ ದೇವರು ಆದರು ಒಂದೆ ನಾವು ಯಾಕೆ ತಾರತಮ್ಯ ಮಾಡಬೇಕು. ಹಿಂದು –ಮುಸ್ಲಿಂ ಅಣ್ಣ  ತಮ್ಮಂದಿರಂತೆ  ಇರುವಾಗ ಅನಾವಶ್ಯಕವಾಗಿ ಕೋಮು ಭಾವನೆ ವಿಷ ಬೀಜವನ್ನು ಬಿತ್ತುವುದು ಸರಿಯಲ್ಲ. ಹಿಂದು ಸಮುದಾಯದವರು ಗ್ರಾಮೀಣ ಪ್ರದೇಶದಲ್ಲಿ  ಮೊರಹಂ ಹಬ್ಬವನ್ನು ಅತಿ ಸಂತೋಷದಿಂದ ಆಚರಿಸುವಾಗ ನಾವು ಯಾಕೆ  ಗಣೇಶ ಹಬ್ಬವನ್ನು ಆಚರಿಸಬಾರದು ಎಂದು ಪ್ರಶ್ನಿಸುವುತ್ತಾರೆ ಚಾಂದಪಾಶ ಖುರೇಶಿ ಹಾಗೂ ಮಕಬೂಲ.

ಇಷ್ಟು ಅಲ್ಲದೆ ನಾವು ಶಾ್ರಾವಣ ಮಾಸದಲ್ಲಿಯೂ ಉಪವಾಸ ವ್ರತ ಆಚರಣೆ ಹಾಗೂ ಮಾಂಸದೂಟವನ್ನು ಮಾಡುವುದಿಲ್ಲ. ಜಾತಿ ,ಧರ್ಮದ ಹೆಸರಿನಲ್ಲಿ ಕೋಮು ಭಾವನೆಯಗಳನ್ನು ಕೆಣಕಬಾರದು ಎಂಬ ಸಲಹೆಯನ್ನು ಚಾಂದಪಾಶ ನೀಡುತ್ತಾರೆ.
ಕಳೆದ ಆರು ವರ್ಷಗಳಿಂದ ಸಡಗರದಿಂದ ಗಣೇಶ ಹಬ್ಬವನ್ನು ಆಚರಿಸುತ್ತಿದ್ದಾರೆ.

ನಾವೆಲ್ಲರೂ ಉತ್ಸಾಹದಿಂದ ಭಾಗವಹಿಸುತ್ತೇವೆ ಎನ್ನುತ್ತಾರೆ ಕನ್ನಡ ಸಾಂಸ್ಕೃತಿಕ ಶಕ್ತಿ ಕೇಂದ್ರದ ಸಂಚಾಲಕ ತಿಪ್ಪಣ್ಣ ಕ್ಯಾತನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.