ADVERTISEMENT

ವಸತಿ ಯೋಜನೆ: ಅಧಿಕಾರಿಗಳಿಗೆ ಸಿಇಒ ತರಾಟೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 6:20 IST
Last Updated 4 ಡಿಸೆಂಬರ್ 2012, 6:20 IST

ಅಫಜಲಪುರ: ವಿವಧ ವಸತಿ ಯೋಜನೆಗಳಲ್ಲಿ ತಾಲ್ಲೂಕಿಗೆ ಮನೆಗಳು ಮಂಜೂರಾಗಿ ವರ್ಷ ಕಳೆದರು ಇನ್ನೂ ತಳಪಾಯ ಹಾಕದೆ ಇರುವದರಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕೃತಿ ಅವರು ಅಭಿವೃದ್ಧಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಮನೆ ಕಟ್ಟದೆ ಇರುವ ಫಲಾನುಭವಿಗಳಿಗೆ ತಕ್ಷಣ ನೋಟಿಸ್ ನೀಡಲು ಆದೇಶ ಮಾಡಿದರು.

ಅವರು ಇಲ್ಲಿನ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಗ್ರಾಮ ಪಂಚಾಯಿತಿಯಲ್ಲಿನ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಬಸವ ಇಂದಿರಾ ವಸತಿ ಯೋಜನೆ ಅಡಿಯಲ್ಲಿ ಇನ್ನೂ 475 ಮನೆಗಳು ಇನ್ನೂ ಆರಂಭ ಮಾಡಿಲ್ಲ ತಾಲ್ಲೂಕು ಎಷ್ಟು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ ಯಾರು ಕೆಲಸ ಮಾಡುತ್ತಿಲ್ಲ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳು, ವಸತಿ ಯೋಜನೆ ನೋಡಿಕೊಳ್ಳುವ ನೊಡಲ್ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಯಾವ ಯೋಜನೆಗಳು ಪ್ರಗತಿಯಿಲ್ಲ ಎಂದು ಎಲ್ಲರನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

475 ಫಲಾನುಭವಿಗಳು: ವರ್ಷ ಕಳೆದರು ತಾಲ್ಲೂಕಿನಲ್ಲಿ 475 ಬಸವ ಇಂದಿರಾ ವಸತಿ ಯೋಜನೆ ಅಡಿಯಲ್ಲಿ ಮನೆಗಳು ಇನ್ನೂ ಕಟ್ಟಲ್ಲ ಅಂತಹವರಿಗೆ ತಕ್ಷಣ ಕಾರಣ ಕೇಳಿ ನೋಟಿಸ್ ಕೊಡಿ ಅವರಿಂದ ವಿವರಣೆ ಬರೆದು ಕೊಳ್ಳಿ, ಅವರು ಮನೆಯಲ್ಲಿ ಇಲ್ಲದಿದ್ದರೆ ಮನೆ ಬಾಗಿಲಗೆ ನೋಟಿಸ್ ಹಚ್ಚಿಬನ್ನಿ ಅದರ ಒಂದು ಪ್ರತಿಯನ್ನು ತಾ.ಪಂ ಅಧಿಕಾರಿಗಳಿಗೆ ಕೊಡಿ ಒಂದು ವಾರದಲ್ಲಿ ಅವರಿಂದ ಮಾಹಿತಿ ಪಡೆದು ಮನೆ ಕಟ್ಟದಿದ್ದರೆ ಫಲಾನುಭವಿಗಳನ್ನು ರದ್ದು ಮಾಡಿ ಎಂದು ಅವರು ಪಿಡಿಒಗಳಿಗೆ ತಾಕೀತು ಮಾಡಿದರು.

ಕರಜಗಿ ಗ್ರಾಮವೊಂದರಲ್ಲಿಯೆ 273 ಮನೆಗಳು ವರ್ಷ ಕಳೆದರು ಮನೆ ನಿರ್ಮಾಣವಾಗಿಲ್ಲ ಕಾರಣ ಏನಿದೆ ಹೇಳಿ ಎಂದು ಪಿಡಿಒ ಪ್ರಮೋದ ಕುಲಕರ್ಣಿಯವರನ್ನು ಕೇಳಿದಾಗ ಯಾವುದೇ ಸಮರ್ಪಕ ಉತ್ತರ ನೀಡಲಿಲ್ಲ ಹೀಗಾಗಿ ಅವರಿಗೆ ನಾವು ಮತ್ತೆ ಡಿಸೆಂಬರ್ ಕೊನೆ ವಾರದಲ್ಲಿ ಸಭೆ ಕರೆಯುತ್ತೇನೆ ಅಲ್ಲಿಯವರೆಗೆ ನನಗೆ ಮನೆ ಆರಂಭವಾಗಿರುವ ಬಗ್ಗೆ ಮಾಹಿತಿ ಬೇಕು ಇಲ್ಲದಿದರೆ ನಾನು ಏನು ಮಾಡುತ್ತೇನೆ ಅದನ್ನು ಮಾಡೇ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಎಂ.ಎಸ್.ಐ ಮಾಡಿ: ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಯೋಜನೆ ಮಾಡಿರುವ ಬಗ್ಗೆ ಗಣಕ ಯಂತ್ರದಲ್ಲಿ ಎಂ.ಎಸ್.ಐ ಮಾಡಲೆಬೇಕು. ಮಾಡದಿದ್ದರೆ ಸರ್ಕಾರಕ್ಕೆ ನೀವು ಏನು ಮಾಡಿದ್ದೀರಿ ಗೊತ್ತಾಗುವದಿಲ್ಲ ಆ ಕೆಲಸ ನಾಳೆಯಿಂದಲೇ ಆರಂಭಿಸಿ. ಗಣಕ ಯಂತ್ರ ಆಪರೇಟರಗಳು ಕೆಲಸ ಮಾಡದಿದ್ದರೆ ಗ್ರಾಮ ಪಂಚಾಯಿತಿಯಲ್ಲಿ ಕಾನೂನು ಫಾಸು ಮಾಡಿ ಅವರನ್ನು ತೆಗೆದು ಹಾಕಿ ಕೆಲಸ ಮಾಡುವವರನ್ನು ತೆಗೆದುಕೊಳ್ಳಿ ಎಂದು ಅವರು ತಿಳಿಸಿದರು.

22 ಗ್ರಾಮ ಪಂಚಾಯತಿಗಳು ಡಿಸೆಂಬರ್ ತಿಂಗಳೊಳಗಾಗಿ ಶೇ.10 ಕರ ವಸೂಲಿ ಮಾಡಬೇಕು. ಮಾರ್ಚ 2013ರ ಒಳಗಾಗಿ ಶೇ.80 ಕರ ವಸೂಲಿ ಮಾಡಬೇಕು ಅಲ್ಲದೆ ಡಿಸಿಬಿ ಕರ ಪರಿಸ್ಕರಣೆ ಆಗಬೇಕು. ಗ್ರಾಮ ಸ್ವರಾಜ ಯೋಜನೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ, ನಿರ್ಮಲ ಭಾರತ ಅಭಿಯಾನ ಇವೆಲ್ಲವು ನಿಗದಿತ ಸಮಯದೊಳಗೆ ಅನುಷ್ಠಾನಗೊಳಿಸಬೇಕೆಂದು ಸಿಇಒ ಅವರು ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಡಿ.ಎಸ್.ಒನ್ ಅಧಕಾರಿ ವಸಂತಕುಮಾರ ಕುಲಕರ್ಣಿ ಹಾಗೂ ಕೆಂಚಣ್ಣ, ವಿರೂಪಾಕ್ಷ, ತಾ.ಪಂ. ಅಧಿಕಾರಿ ಶರಣಪ್ಪ ನಂದಗಿರಿ, ಪಂಚಾಯತ್ ರಾಜ್ ಎಇಇ ಶರಣಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೇಗಲಮಡಿ, ಸಮಾಜ ಕಲ್ಯಾಣ ಅಧಿಕಾರಿ ಕುಲಕರ್ಣಿ ಮತ್ತಿತರು ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.