ADVERTISEMENT

`ಹಸಿರು ಕ್ರಾಂತಿಯ ಹರಿಕಾರ ಜಗಜೀವನರಾಂ'

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 10:17 IST
Last Updated 4 ಜೂನ್ 2013, 10:17 IST

ವಾಡಿ: ಆರ್ಥಿಕ ಸಂಕಷ್ಟದಲ್ಲಿ ಮುಳುಗಿದ್ದ ಭಾರತದ ಕೃಷಿಯಲ್ಲಿ ವೈಜ್ಞಾನಿಕ ಆಧುನಿಕ ಯಂತ್ರಗಳ ಬಳಕೆ ಮಾಡಿ, ಇಡೀ ದೇಶದ ಚಿತ್ರಣವನ್ನೇ ಬದಲಿಸಿದ ಕಿರ್ತಿ ಹಸಿರು ಕಾಂತ್ರಿಯ ಹರಿಕಾರ ಡಾ.ಬಾಬುಜಗಜೀವನರಾಂ ಅವರಿಗೆ ಸಲ್ಲುತ್ತದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಡಿ.ಬಿ ನಾಯಕ ಹೇಳಿದರು.

ಪಟ್ಟಣದ ಮಾದಿಗ ದಂಡೋರ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ `ಡಾ.ಬಾಬುಜಗಜೀವನರಾಂ ಅವರ 106ನೇ ಜಯಂತ್ಯುತ್ಸವ ಮತ್ತು ಮಾದಿಗ ದಂಡೋರ ಸಮಾವೇಶದ ಬಹಿರಂಗ ಸಭೆ' ಉದ್ಘಾಟಿಸಿ ಮಾತನಾಡಿದರು. `ಆಳುವ ವರ್ಗದವರೆ ದಲಿತರ ಮಧ್ಯೆ ಬಿರುಕು ಸೃಷ್ಟಿಸುತ್ತಿದ್ದಾರೆ. ಆದ್ದರಿಂದ ದಲಿತರೆಲ್ಲ ಒಂದಾಗಿ ಅಧಿಕಾರದ ಗದ್ದುಗೆ ಹಿಡಿಯಬೇಕು. ಅಂದಾಗ ಮಾತ್ರ ದಲಿತರು ಅಭಿವೃದ್ಧಿಯಾಗುವುದಕ್ಕೆ ಸಾಧ್ಯ' ಎಂದು ಜಿಲ್ಲಾ ಸರ್ಕಾರಿ ಮಹಾ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಪ್ರೋ. ಡಾ.ಶರಣಪ್ಪ ಎಸ್. ಮಾಳಗಿ ಎಂದರು.

ಎಸಿಸಿ ಸಿಮೆಂಟ್ ಕಂಪೆನಿ ಮುಖ್ಯಸ್ಥ ಎಸ್.ಬಿ.ಸಿಂಗ್, ಬಿ.ಡಿ ದಲೇರ್, ಕಾಂಗ್ರೆಸ್ ಮುಖಂಡ ಬಸೀರ್ ಖುರೇಷಿ ಮಾತನಾಡಿದರು.
ಪುರಸಭೆ ಸದಸ್ಯೆ ಮರೆಮ್ಮ ಸೈದಾಪುರ, ಶಾಮಸನ್, ರಾಜೇಶ ಕಾಂಬಳೆ, ರಾಮಚಂದ್ರ ಸಂದೇವಾಲ, ನೀಲಯ್ಯ ಸ್ವಾಮಿ, ರಾಮಚಂದ್ರ ರಡ್ಡಿ, ರವಿ.ಆರ್.ಬಿ ಚವ್ಹಾಣ, ಬಸವರಾಜ ಪಂಚಾಳ, ನಾಮದೇವ ಸಿಪ್ಪಿ, ಮಲ್ಲಿಕಾರ್ಜುನ ಹಿರೇನೂರ್, ಮಲ್ಲಿಕಾರ್ಜುನ ಸೈದಾಪುರ, ಸುಭಾಷ ಕಟ್ಟಿಮನಿ, ಅನೀಲ ದಾಸ ಇದ್ದರು. ದೇವಿಂದ್ರ ಕರದಳ್ಳಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.