ADVERTISEMENT

‘ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 9:53 IST
Last Updated 10 ಡಿಸೆಂಬರ್ 2013, 9:53 IST
ಯಾದಗಿರಿ ತಾಲ್ಲೂಕಿನ ಅಲ್ಲಿಪುರ ಗ್ರಾಮದ ವೆಂಕಟೇಶ ನಗರ ತಾಂಡಾದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಸೇವಾಲಾಲ ಮಹಾರಾಜ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಗೊಬ್ಬೂರ ಸೇವಾಲಾಲ ಆಶ್ರಮದ ಬಳಿರಾಮ ಮಹಾರಾಜ  ಮಾತನಾಡಿದರು
ಯಾದಗಿರಿ ತಾಲ್ಲೂಕಿನ ಅಲ್ಲಿಪುರ ಗ್ರಾಮದ ವೆಂಕಟೇಶ ನಗರ ತಾಂಡಾದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಸೇವಾಲಾಲ ಮಹಾರಾಜ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಗೊಬ್ಬೂರ ಸೇವಾಲಾಲ ಆಶ್ರಮದ ಬಳಿರಾಮ ಮಹಾರಾಜ ಮಾತನಾಡಿದರು   

ಯಾದಗಿರಿ: ಯುವಕರು ದುಶ್ಚಟಕ್ಕೆ ಬಲಿಯಾಗದೆ ಸುಶಿಕ್ಷಿತರಾಗಿ ಜೀವನ ಸಾಗಿಸಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಬಂಜಾರ ಸಮುದಾಯ ಸರ್ಕಾರದ ಸೌಲಭ್ಯಗಳನ್ನು ಉಪ­ಯೋಗಿ­ಸಿ­ಕೊಳ್ಳುವ ಮೂಲಕ ಸಮಾ­ಜದ ಮುಖ್ಯವಾಹಿನಿಗೆ ಬರಬೇಕು ಎಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಕರೆ ನೀಡಿದರು.

ತಾಲ್ಲೂಕಿನ ಅಲ್ಲಿಪುರ ಗ್ರಾಮದ ವೆಂಕಟೇಶ ನಗರ ತಾಂಡಾದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಸೇವಾಲಾಲ ಮಹಾರಾಜ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೇವಾಲಾಲ ಮಹಾರಾಜರ ತತ್ವ ಮತ್ತು ಸಿದ್ಧಾಂತಗಳು ಮನುಕುಲಕ್ಕೆ ದಾರಿ ದೀಪವಾಗಿವೆ. ಇಡೀ ಬಂಜಾರ ಸಮಾಜದ ಆರಾಧ್ಯ ದೈವ ಸೇವಾಲಾಲ ಅವರ ಮೂರ್ತಿಯನ್ನು ವೆಂಕಟೇಶ ನಗರದಲ್ಲಿ ಅತ್ಯಂತ ಸಂಭ್ರಮದಿಂದ ಪ್ರತಿಷ್ಠಾಪನೆ ಮಾಡು­ತ್ತಿ­ರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿ, ‘ಸರ್ಕಾರ ತಾಂಡಾಗಳ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಬಂಜಾರ ಸಮುದಾಯದ ಜನತೆ ಶಿಕ್ಷಣ ಪಡೆದುಕೊಳ್ಳಬೇಕು. ಸರ್ಕಾರದ ಉನ್ನತ ಹುದ್ದೆಗಳನ್ನು ಪಡೆದು­ಕೊಳ್ಳುವ ಮೂಲಕ ಎತ್ತರಕ್ಕೆ ಬೆಳೆಯಬೇಕು. ತಾಂಡಾಗಳಲ್ಲಿ ವಾಸಿಸು­ತ್ತಿರುವ ಬಂಜಾರ ಸಮು­ದಾಯದ ಜನತೆ ಶಿಕ್ಷಣ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಂಘಟನಾ ಮನೋಭಾವದಿಂದ ಸುಧಾರಿತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಗೊಬ್ಬೂರ ಸೇವಾಲಾಲ ಆಶ್ರಮದ ಬಳಿರಾಮ ಮಹಾರಾಜ ಕಾರ್ಯ­ಕ್ರಮದ ಸಾನ್ನಿಧ್ಯ ವಹಿಸಿದ್ದರು. ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಸುಭಾಸ್ ರಾಠೋಡ್, ಜಿಲ್ಲಾ ಘಟಕ ಅಧ್ಯಕ್ಷ ಮಾನಸಿಂಗ ಚೌಹಾಣ್‌, ತಾಲ್ಲೂಕು ಘಟಕ ಅಧ್ಯಕ್ಷ ಸುಭಾಸ್‌ ಜಿ.ರಾಠೋಡ್, ಜಿಲ್ಲಾ ಘಟಕ ಉಪಾಧ್ಯಕ್ಷ ಜನಾರ್ಧನ ರಾಠೋಡ್, ಸುರೇಶ ಬಸವಂತಪುರ, ಪ್ರೇಮಕುಮಾರ, ರಮೇಶ ಬದ್ದೇಪಲ್ಲಿ, ಹೀರಾಸಿಂಗ ಪವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.