ADVERTISEMENT

ಯಾದಗಿರಿ: ಕೋವಿಡ್‌ನಿಂದ 117 ಜನ ಗುಣಮುಖ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 16:59 IST
Last Updated 11 ಅಕ್ಟೋಬರ್ 2020, 16:59 IST

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಭಾನುವಾರ 117 ಜನರು ಸಂಪೂರ್ಣ ಗುಣಮುಖರಾಗಿದ್ದಾರೆ. ಹೊಸದಾಗಿ 100 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,498ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಇದುವರೆಗೆ 8,423 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್‌ನಿಂದ 56 ವರ್ಷದ ಪುರುಷ ಶನಿವಾರ ಮೃತಪಟ್ಟಿದ್ದು, ಒಟ್ಟಾರೆ ಸೋಂಕಿನಿಂದ 58 ಜನರು ಮೃತಪಟ್ಟಿದ್ದಾರೆ. 1,017 ಕೋವಿಡ್ ಸಕ್ರಿಯ ಪ್ರಕರಣಗಳಿವೆ.

***

ADVERTISEMENT

ವಿದ್ಯಾಗಮ: ಇಬ್ಬರು ಶಿಕ್ಷಕರಿಗೆ ಕೋವಿಡ್‌
ಯಾದಗಿರಿ:
ಜಿಲ್ಲೆಯ ಸುರಪುರ ತಾಲ್ಲೂಕಿನ ರತ್ತಾಳ ಗ್ರಾಮದ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರಿಗೆ ಕೋವಿಡ್‌–19 ದೃಢವಾಗಿದೆ.

ಗ್ರಾಮದ ಅಂಬಿಗರ ಚೌಡಯ್ಯ ಸಮುದಾಯ ಭವನ, ಕೃಷ್ಣ ಮಂದಿರ ವಠಾರ ಪಾಠಗಳಲ್ಲಿ ಶಿಕ್ಷಕರು ಪಾಠ ಮಾಡಿದ್ದರು. ಇದರಿಂದ ಈಗ ಪ್ರಾಥಮಿಕ ಸಂಪರ್ಕದಲ್ಲಿರುವ ಮಕ್ಕಳ ಪಾಲಕರಲ್ಲಿ ಆತಂಕ ಮನೆ ಮೂಡಿದೆ.

ಜಿಲ್ಲೆಯಲ್ಲಿ 42 ಶಿಕ್ಷಕರಿಗೆ ಕೋವಿಡ್‌: ‘ಜಿಲ್ಲೆಯಲ್ಲಿ ಇದುವರೆಗೆ 42 ಶಿಕ್ಷಕರಿಗೆ ಕೋವಿಡ್‌ ದೃಢವಾಗಿದ್ದು, ಇದರಲ್ಲಿ ಮೂವರು ಮೃತಪಟ್ಟಿದ್ದಾರೆ. 39 ಶಿಕ್ಷಕರು ಗುಣಮುಖರಾಗಿದ್ದಾರೆ’ ಎಂದು ಡಿಡಿಪಿಐ ಶ್ರೀನಿವಾಸರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ವಿವಿಧ ತಾಲ್ಲೂಕುಗಳಲ್ಲಿ 200ಕ್ಕೂ ಹೆಚ್ಚು ವಿದ್ಯಾಗಮ ವಠಾರ ಪಾಠ ನಡೆಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.