ADVERTISEMENT

12 ಗ್ರಾಮ ಪಂಚಾಯಿತಿಗಳಿಂದ ₹25.27 ಲಕ್ಷ ತೆರಿಗೆ ಸಂಗ್ರಹ: ಮಹಾದೇವ ಬಾಬಳಗಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 7:21 IST
Last Updated 17 ಆಗಸ್ಟ್ 2025, 7:21 IST
ಯಾದಗಿರಿಯಲ್ಲಿ ನಡೆದ ತೆರಿಗೆ ಸಂಗ್ರಹ ಅಭಿಯಾನದಲ್ಲಿ ವರ್ಕನಳ್ಳಿಯ ಸಿಬ್ಬಂದಿ ತೆರಿಗೆ ಸಂಗ್ರಹಿಸಿದರು
ಯಾದಗಿರಿಯಲ್ಲಿ ನಡೆದ ತೆರಿಗೆ ಸಂಗ್ರಹ ಅಭಿಯಾನದಲ್ಲಿ ವರ್ಕನಳ್ಳಿಯ ಸಿಬ್ಬಂದಿ ತೆರಿಗೆ ಸಂಗ್ರಹಿಸಿದರು   

ಯಾದಗಿರಿ: ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳ ಪೈಕಿ 12 ಗ್ರಾಮ ಪಂಚಾಯಿತಿಗಳು ಒಂದೇ ದಿನ ತಲಾ ₹ 1 ಲಕ್ಷಕ್ಕೂ ಅಧಿಕ ಕರ ವಸೂಲಿ ಮಾಡಿವೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಬಾಬಳಗಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕರವಸೂಲಾತಿಗೆ ಆಗಸ್ಟ್‌ 12ರಂದು ಒಂದೇ ದಿನದಲ್ಲಿ ಕೋಟಿ ಅಭಿಯಾನ ನಡೆಸಲಾಗಿತ್ತು. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ₹ 1 ಲಕ್ಷಕ್ಕೂ ಹೆಚ್ಚು ತೆರಿಗೆ ಸಂಗ್ರಹಿಸಿದ 12 ಗ್ರಾಮ ಪಂಚಾಯಿತಿಗಳಿಂದ ಒಟ್ಟು ₹ 25.27 ಲಕ್ಷ ತೆರಿಗೆ ಜಮೆಯಾಗಿದೆ ಎಂದು ಹೇಳಿದ್ದಾರೆ.

‌‌‌ಮುದ್ನಾಳ್ ಗ್ರಾ.ಪಂ ₹ 6.06 ಲಕ್ಷ, ಹತ್ತಿಕುಣಿ ₹ 5.08 ಲಕ್ಷ, ರಾಮಸಮುದ್ರ ₹ 2.15 ಲಕ್ಷ, ವರ್ಕನಳ್ಳಿ ₹ 2.12 ಲಕ್ಷ, ಬಂದಳ್ಳಿ ₹ 1.44 ಲಕ್ಷ, ಬಳಿಚಕ್ರ ₹ 1.39 ಲಕ್ಷ, ಮುಂಡರಗಿ ₹ 1.37 ಲಕ್ಷ, ಕಿಲ್ಲನಕೇರಾ ₹ 1.32 ಲಕ್ಷ, ಹೊನಗೇರಾ ₹ 1.13 ಲಕ್ಷ, ಸೈದಾಪುರ ₹ 1.08 ಲಕ್ಷ, ಮೋಟ್ನಳ್ಳಿ ₹ 1.06 ಲಕ್ಷ ಹಾಗೂ ಬಾಡಿಯಾಳ ₹ 1.01 ಲಕ್ಷ ತೆರಿಗೆ ಸಂಗ್ರಹ ಮಾಡಿವೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.