ADVERTISEMENT

ಕೃಷ್ಣಾ ನದಿಗೆ 4.74 ಲಕ್ಷ ಕ್ಯೂಸೆಕ್ ನೀರು

ಭೀಮಾ ನದಿಗೆ ಸನ್ನತಿ ಬ್ಯಾರೇಜ್‍ನಿಂದ 2.45 ಲಕ್ಷ ಕ್ಯೂಸೆಕ್ ನೀರು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 15:31 IST
Last Updated 9 ಆಗಸ್ಟ್ 2019, 15:31 IST
ಎಂ.ಕೂರ್ಮಾ ರಾವ್
ಎಂ.ಕೂರ್ಮಾ ರಾವ್   

ಯಾದಗಿರಿ: ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ಶುಕ್ರವಾರ ಸಂಜೆ7 ಗಂಟೆಗೆ 4.84 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಬಿಡಲಾಗಿದ್ದು, ಸನ್ನತಿ ಬ್ಯಾರೇಜ್‍ನಿಂದ 2.45 ಲಕ್ಷ ಕ್ಯುಸೆಕ್ ನೀರು ಭೀಮಾ ನದಿಗೆ ಬಿಡಲಾಗಿದೆ. ನದಿಪಾತ್ರದ ಜನರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್‌ ತಿಳಿಸಿದ್ದಾರೆ.

ಕಳೆದ 24 ಗಂಟೆಯಲ್ಲಿ ವಾಡಿಕೆ ಮಳೆ 5 ಮಿ.ಮೀ ಇತ್ತು. ಆಗಸ್ಟ್ 1 ರಿಂದ 8ರವರೆಗೆ ವಾಡಿಕೆ ಮಳೆ 38 ಮಿ.ಮೀ ಇದೆ. ಪ್ರವಾಹ ಪೀಡಿತ ಶೆಳ್ಳಗಿ ಗ್ರಾಮದ ಒಟ್ಟು 46 ಸಂತ್ರಸ್ಥರಿಗೆ ಸುರಪುರ ಎಪಿಎಂಸಿ ಪುನರ್ವಸತಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಚನ್ನೂರ (ಜೆ) ಗ್ರಾಮದ 31 ಸಂತ್ರಸ್ಥರಿಗೆ ವಡಗೇರಾ ಸರ್ಕಾರಿ ಪ್ರೌಢ ಶಾಲೆಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಶಿವನೂರ ಗ್ರಾಮದ 106 ಸಂತ್ರಸ್ಥರಿಗೆ ಬೆಂಡೆಬೆಂಬಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ವಡಗೇರಾ ಮತ್ತು ತಿಂಥಣಿಯಲ್ಲಿ ತುರ್ತು ಸೇವೆಗಾಗಿ ಚಾಲಕ ಸಹಿತ 3 ಬೋಟ್‍ಗಳ ವ್ಯವಸ್ಥೆ ಮಾಡಲಾಗಿದೆ. ವಡಗೇರಾದಲ್ಲಿ 1 ಓಬಿಎಂ ಬೋಟ್, ತಿಂಥಣಿ ದೇವಸ್ಥಾನದ ಹತ್ತಿರ 1 ಫೈಬರ್ ಹಾಗೂ 1 ಓಬಿಎಂ ಬೋಟ್‍ಗಳು ಕಾರ್ಯ ಸ್ಥಿತಿಯಲ್ಲಿವೆ. ಹೈದರಾಬಾದ್‌ನಿಂದ 2 ವಿಪತ್ತು ನಿರ್ವಹಣಾ ತಂಡಗಳು ಬಂದಿದ್ದು, 3 ಬೋಟ್‍ಗಳೊಂದಿಗೆ ಜನರ ರಕ್ಷಣೆಗೆ ಸಿದ್ಧರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರವಾಹದ ಕುರಿತು ದೂರುಗಳಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂ ಸಂಖ್ಯೆ:08473-253771, ಹೆಚ್ಚುವರಿ ಜಿಲ್ಲಾಧಿಕಾರಿ ಮೊ: 77602 65920, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮೊ:79756 03663 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.