
ಹುಣಸಗಿ: ‘ಪೌಷ್ಟಿಯ ಆಹಾರ ಸೇವೆನ ಕೊರತೆಯಿಂದ ಜನಿಸುವ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ’ ಎಂದು ಡಾ.ಪ್ರಕಾಶ ಚವ್ವಾಣ ಹೇಳಿದರು.
ಅಲಿಂಕೋ ಸಂಸ್ಥೆಯ ಸಹಯೋಗದಲ್ಲಿ ಪಟ್ಟಣದ ಯುಕೆಪಿ ಕ್ಯಾಂಕ್‌ನ ಶಾಸಕರ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಮನ್ವಯ ಶಿಕ್ಷಣದ ಅಡಿಯಲ್ಲಿ ಅಂಗವಿಕಲ ಮಕ್ಕಳಿಗಾಗಿ ಎರಡನೇ ಹಂತದ ವೈದ್ಯಕೀಯ ಮೌಲ್ಯಂಕನ ಶಿಬಿರದಲ್ಲಿ ಅವರು ಮಾತನಾಡಿದರು.
ಅಂಗವಿಕಲ ಮಕ್ಕಳ ಸಮಸ್ಯೆ ಹಾಗೂ ಅವರ ಮಾಹಿತಿ ಪಡೆದುಕೊಳ್ಳಲಾಯಿತು. ಮೌಲ್ಯಾಂಕನ ಶಿಬಿರದಲ್ಲಿ ತಾಲ್ಲೂಕಿನ ಒಟ್ಟು 71 ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ತಪಾಸಣೆ ಮಾಡಲಾಗಿದ್ದು ಬೌದ್ಧಿಕ ವಿಕಲತೆಗೆ ಸಂಬಂಧಿಸಿದಂತೆ 22 ವಿದ್ಯಾರ್ಥಿಗಳು, ಸೆಲಬ್ರಲ್ ಪಾಲಿಸಿ 4, ದೈಹಿಕ ನೂನ್ಯತೆ 21, ದೃಷ್ಟಿದೋಷ 1, ಶ್ರವಣ ದೋಷ 13 ಮಕ್ಕಳನ್ನು ಆಯ್ಕೆಮಾಡಲಾಯಿತು.
ಇವರಿಗೆ ಅಲಿಂಕೋ ಸಂಸ್ಥೆಯಿಂದ ಈ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಸಾಧನಾ ಸಲಕರಣೆಗಳನ್ನು ಒದಗಿಸಲಾಗುತ್ತದೆ.
ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ್ ನಿಂಬೂರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿಶ್ವಾಸ ಮಿಶ್ರಾ, ಡಾ.ಸುವರ್ಣದೇವಿ, ರಾಜಶೇಖರ್ ದೇಸಾಯಿ, ಮಲ್ಲಿಕಾರ್ಜುನ, ಸಿಆರ್.ಪಿಗಳಾದ ಸುರೇಶ ಹಾದಿಮನಿ, ಶಿವಾನಂದ ತೋಟದ, ಮಹಾಂತೇಶ, ಶ್ರೀಶೈಲ್ ತಳ್ಳಳ್ಳಿ, ಬಸನಗೌಡ ಚೌದ್ರಿ ಹಾಗೂ ಎಪಿಡಿ ಸಂಸ್ಥೆಯ ಸದಸ್ಯರು ಇದ್ದರು.
ಮಹಾದೇವಪ್ಪ ಗುತ್ತೇದಾರ ಪ್ರಾಸ್ತಾವಿಕ ಮಾತನಾಡಿದರು. ಕ್ಷೇತ್ರ ಸಮನ್ವಯ ಸಂಪನ್ಮೂಲ ಶಿಕ್ಷಕ ಓಂಪ್ರಕಾಶ ಸ್ವಾಗತಿಸಿದರು. ಬಸಪ್ಪ ಕಾಳಗಿ ನಿರೂಪಿಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.