ADVERTISEMENT

ಸೂರ್ಯನ ಸುತ್ತ ಮೂಡಿದ ಕಾಮನಬಿಲ್ಲು

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 15:45 IST
Last Updated 2 ಜೂನ್ 2020, 15:45 IST
ಕೆಂಭಾವಿ ಪಟ್ಟಣದಲ್ಲಿ ಮಂಗಳವಾರ ಸೂರ್ಯನ ಸುತ್ತ ಉಂಗುರಾಕೃತಿಯ ಕಾಮನಬಿಲ್ಲು ಮೂಡಿತ್ತು
ಕೆಂಭಾವಿ ಪಟ್ಟಣದಲ್ಲಿ ಮಂಗಳವಾರ ಸೂರ್ಯನ ಸುತ್ತ ಉಂಗುರಾಕೃತಿಯ ಕಾಮನಬಿಲ್ಲು ಮೂಡಿತ್ತು   

ಕೆಂಭಾವಿ: ಪಟ್ಟಣದಲ್ಲಿ ಮಂಗಳವಾರ 11 ಗಂಟೆಯಿಂದ ಸರಿಸುಮಾರು ಅರ್ಧತಾಸು ಸೂರ್ಯನ ಸುತ್ತ ಕಾಣಿಸಿಕೊಂಡ ಉಂಗುರಾಕಾರಾದ ಕಾಮನಬಿಲ್ಲು ನೋಡಿ ಸೂರ್ಯನತ್ತ ದೃಷ್ಟಿಸಿ ಜನರು ಫೋಟೊ ತಗೆದು ಸಂಭ್ರಮಿಸಿದ್ದಾರೆ.

ಆಕಾಶ ವೀಕ್ಷಣೆಯ ಹವ್ಯಾಸವುಳ್ಳವರಿಗೂ, ಫೋಟೊಗ್ರಾಫಿ ಆಸಕ್ತರಿಗೂ ಹಬ್ಬವೆಂಬಂತೆ ಈ ವಿಸ್ಮಯ ಕಂಡುಬಂತು.

ಮೋಡದ ಬಿನ್ನಾಣ: ಸೂರ್ಯನ ಸುತ್ತಲೂ ಆವರಿಸಿರುವ ಮೋಡದಲ್ಲಿ ಹುುಗಿರುವ ಮಂಜುಗಡ್ಡೆ ಕಣಗಳ ಮೇಲೆ ಬೆಳಕು ಹರಿದ ಪರಿಣಾಮ ಈ ಆಕರ್ಷಕ ವೃತ್ತ ಗೋಚರಿಸಿದೆ. ಕಾಮನಬಿಲ್ಲು ಸೃಷ್ಟಿಯಾದಂತೆ ನಡೆದ ವಿದ್ಯಮಾನ ಇದಾಗಿದ್ದು, ಬಣ್ಣಗಳಲ್ಲಿ ಮಾತ್ರ ವ್ಯತ್ಯಾಸ ಕಂಡು ಬಂದಿದೆ. ವಾತಾವರಣದಲ್ಲಿ ತೇವಾಂಶ ಹೆಚ್ಚು ಇರುವ ಮತ್ತು ಮಳೆ ಬರುವ ಮುನ್ಸೂಚನೆಯನ್ನು ಇದು ನೀಡುತ್ತದೆ ಎಂದು ವಿಜ್ಞಾನ ವಿಷಯದ ಶಿಕ್ಷಕರೊಬ್ಬರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.