ADVERTISEMENT

₹30 ಸಾವಿರ ಲಂಚ ಪಡೆಯುವಾಗ ಜಿಲ್ಲಾ ಲೆಕ್ಕ ಪರಿಶೋಧನಾ ಅಧಿಕಾರಿ ಎಸಿಬಿ ಬಲೆಗೆ

₹40 ಸಾವಿರಕ್ಕೆ ಬೇಡಿಕೆ: ₹30 ಸಾವಿರ ತೆಗೆದುಕೊಳ್ಳುವಾಗ ದಾಳಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 2:57 IST
Last Updated 24 ಸೆಪ್ಟೆಂಬರ್ 2020, 2:57 IST

ಯಾದಗಿರಿ: ಗ್ರಾಮ ಪಂಚಾಯಿತಿ ಪಿಡಿಒ ಬಳಿ ₹30 ಸಾವಿರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಜಿಲ್ಲಾ ಲೆಕ್ಕ ಪರಿಶೋಧನಾ ಅಧಿಕಾರಿ ರವಿಕುಮಾರ್‌ ಅವರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಜಿಲ್ಲಾಡಳಿತ ಭವನದಲ್ಲಿರುವ ಲೆಕ್ಕ ಪರಿಶೋಧನಾ ಇಲಾಖೆ ಕಚೇರಿಯಲ್ಲಿ ಗುರುಮಠಕಲ್ ತಾಲ್ಲೂಕಿನ ಪಸಪುಲ ಪಂಚಾಯಿತಿ ಪಿಡಿಒ ಮಲ್ಲಣ್ಣ ಬಳಿ ವಾರ್ಷಿಕ ಲೆಕ್ಕ ಪರಿಶೋಧನೆ ಮಾಡುವ ವಿಚಾರದಲ್ಲಿ ರವಿಕುಮಾರ್ ₹40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ₹30 ಸಾವಿರ ಪಡೆಯುವಾಗ ಬಂಧಿಸಲಾಯಿತು’ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.

ಕಲಬುರ್ಗಿ ಎಸಿಬಿ ಎಸ್‌ಪಿ ಮಹೇಶ್ ಮೇಘಣ್ಣನವರ ಮಾರ್ಗದರ್ಶನದಲ್ಲಿ ಯಾದಗಿರಿ ಎಸಿಬಿ ಡಿವೈಎಸ್ಪಿ ಬಷೀರ್ ಪಟೇಲ್‌ ನೇತೃತ್ವದಲ್ಲಿ ದಾಳಿ ನಡೆಸಲಾ ಗಿದೆ. ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಗುರುಪಾದಪ್ಪ ಬಿರಾದಾರ, ರಾಘ ವೇಂದ್ರ, ಸಿಬ್ಬಂದಿ ಅಮರನಾಥ್ ಗಾಯ ಕ್ವಾಡ್, ವಿಜಯಕುಮಾರ, ಗುತ್ತಪ್ಪಗೌಡ, ಮರೆಪ್ಪ ದಾಳಿ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.