ADVERTISEMENT

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 14:30 IST
Last Updated 15 ಆಗಸ್ಟ್ 2020, 14:30 IST
ಕೊವೀಡ್-19 ಸೋಂಕಿನಿಂದ ಗುಣಮುಖರಾದ ಡಿ.ಎಲ್.ಒ ಡಾ. ಭಗವಂತ ಅನವಾರ, ಡಾ. ರಾಧಿಕಾ, ಪಾರ್ವತಮ್ಮ, ಲಕ್ಷ್ಮಣ, ಮಹಾಂತೇಶ್ ಅವರನ್ನು ಸನ್ಮಾನಿಸಲಾಯಿತು
ಕೊವೀಡ್-19 ಸೋಂಕಿನಿಂದ ಗುಣಮುಖರಾದ ಡಿ.ಎಲ್.ಒ ಡಾ. ಭಗವಂತ ಅನವಾರ, ಡಾ. ರಾಧಿಕಾ, ಪಾರ್ವತಮ್ಮ, ಲಕ್ಷ್ಮಣ, ಮಹಾಂತೇಶ್ ಅವರನ್ನು ಸನ್ಮಾನಿಸಲಾಯಿತು   

ಯಾದಗಿರಿ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು ಸನ್ಮಾನಿಸಿ ಗೌರವಿಸಿದರು.

ಜಿಲ್ಲಾ ಮಟ್ಟದಲ್ಲಿ (ಕೊವೀಡ್ ವಾರಿಯರ್ಸ್) ಹಾಗೂ ಕೊವೀಡ್‍ದಿಂದ ಗುಣಮುಖರಾದವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಕೊವೀಡ್-19 ಸಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಶ್ರಮಿಸಿದ ಖಾಸಗಿ ವೈದ್ಯ ಡಾ.ವಿರೇಶ ಜಾಕಾ, ಡಾ. ಸುರೇಖಾ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ನೀಲಮ್ಮ, ಅರವಳಿಕೆ ತಜ್ಞ ಡಾ.ಸಂಜೀವಕುಮಾರ ರಾಯಚೂರಕರ, ವಿಧಿವಿಜ್ಞಾನ ತಜ್ಞ ಡಾ. ಪ್ರವೀಣ ಪಾಟೀಲ, ಡಾ. ಭಿಮನಗೌಡ, ಡಾ.ರಂಗಪ್ಪ ಮೇತ್ರಿ, ಡಾ. ಓಂ ಪ್ರಕಾಶ ಅಂಬೂರೆ, ಡಾ.ಲಕ್ಷ್ಮಿಕಾಂತ್ ಮೇತ್ರಿ, ಪ್ರಯೋಗಾಲಯ ತಜ್ಞರಾದ ಜಗನಾಥ ಅರಕೇರಾ, ಬಸಲಿಂಗಪ್ಪ, ನಾಗೇಶ ಹಾಗೂ ಬಸವರಾಜ್ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ:ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸುರಪುರ ತಾಲ್ಲೂಕಿನ ರಾಜಕೊಳ್ಳೂರು ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ದೀಪಾ ಶೇಖರಪ್ಪ 625ಕ್ಕೆ 615ಅಂಕ, ಯಾದಗಿರಿ ತಾಲ್ಲೂಕಿನ ಮೊಟ್ನಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ರೇಷ್ಮಿತಾ ತಡಿಬಿಡಿ 625ಕ್ಕೆ 615 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದ್ದು, ಇವರಿಗೆ ತಲಾ ₹10,000 ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಪಗಲಾಪುರ ಗ್ರಾಮದ ಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಮಹಿಳೆಯನ್ನು ರಕ್ಷಣೆ ಮಾಡಿದ್ದಕ್ಕಾಗಿ ಶಿವಪ್ಪ, ಭೀಮಪ್ಪ, ಕಿರಣ, ಭೀಮಪ್ಪ ತಾತಳಗೇರಾ, ಮರೇಪ್ಪ ಬಾವೂರು, ಜಂಬಣ್ಣ, ಮರಿಲಿಂಗಪ್ಪ ಹಾಗೂ ಅಶೋಕ ಅವರನ್ನು ಸನ್ಮಾನಿಸಲಾಯಿತು.

ಕೊವೀಡ್-19 ಸಾಂಕ್ರಮಿಕ ಸೋಂಕಿನಿಂದ ಗುಣಮುಖರಾದ ಡಿ.ಎಲ್.ಓ ಡಾ. ಭಗವಂತ ಅನವಾರ, ಡಾ. ರಾಧಿಕಾ, ಪಾರ್ವತಮ್ಮ, ಲಕ್ಷ್ಮಣ, ಮಹಾಂತೇಶ, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ವಿಜಯಸಿಂಗ್, ಪತ್ರಕರ್ತ ಅನೀಲ ದೇಶಪಾಂಡೆ, ನಾಗಪ್ಪ ಮಾಲಿಪಾಟೀಲ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಈವೇಳೆಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ, ಪ್ರೋಬೇಷನರಿ ಐಎಎಸ್ ಅಧಿಕಾರಿ ಅಶ್ವಿಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ ಸೋನವಣೆ,ಹೆಚ್ಚುವರಿಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.