ADVERTISEMENT

ಹೋಂ ಕ್ವಾರಂಟೈನ್‌ಗೆ ಸಲಹೆ

ಗ್ರಾಮಗಳತ್ತ ಮುಖ ಮಾಡಿದ ಜನ: ಆತಂಕದ ಛಾಯೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 5:44 IST
Last Updated 29 ಏಪ್ರಿಲ್ 2021, 5:44 IST
ಕೊಡೇಕಲ್ಲ ಕಾಲಜ್ಞಾನಿ ಬಸವಣ್ಣನವರ ಜಾತ್ರೆ ರದ್ದಾಗಿದ್ದು, ದೇವಸ್ಥಾನದ ಪ್ರವೇಶ ದ್ವಾರವನ್ನು ಬಂದ್ ಮಾಡಿ ಪೊಲೀಸ್ ಸಿಬ್ಬಂದಿ ಕಾವಲು ಕಾಯುತ್ತಿರುವುದು
ಕೊಡೇಕಲ್ಲ ಕಾಲಜ್ಞಾನಿ ಬಸವಣ್ಣನವರ ಜಾತ್ರೆ ರದ್ದಾಗಿದ್ದು, ದೇವಸ್ಥಾನದ ಪ್ರವೇಶ ದ್ವಾರವನ್ನು ಬಂದ್ ಮಾಡಿ ಪೊಲೀಸ್ ಸಿಬ್ಬಂದಿ ಕಾವಲು ಕಾಯುತ್ತಿರುವುದು   

ಹುಣಸಗಿ: ಸರ್ಕಾರ ಹದಿನಾಲ್ಕು ದಿನಗಳವರೆಗೆ ಲಾಕ್‌ಡೌನ್ ಘೋಷಣೆ ಮಾಡಿದ ಕಾರಣ ನಗರಗಳಿಗೆ ವಲಸೆ ಹೋಗಿದ್ದ ತಾಲ್ಲೂಕಿನ ಕೂಲಿಕಾರ್ಮಿಕರು ತಮ್ಮ ಸ್ವಗ್ರಾಮಗಳತ್ತ ಮುಖ ಮಾಡಿದ್ದಾರೆ. ಹಾಗಾಗಿ, ತಾಲ್ಲೂಕಿನ ಗ್ರಾಮಗಳಲ್ಲಿ ಮತ್ತೆ ಆತಂಕದ ಛಾಯೆ ಎದುರಾಗಿದೆ.

ಕಳೆದ ವರ್ಷ ನಗರಗಳಿಂದ ಸಾವಿರಾರು ಜನ ಆಗಮಿಸಿದ ಬಳಿಕವೇ ಗ್ರಾಮೀಣ ಭಾಗದಲ್ಲಿ ಕೋವಿಡ್ ಕಂಡುಬಂತು. ಎಚ್ಚರವಹಿಸದೇ ಇದ್ದಲ್ಲಿ ಮತ್ತೆ ತೊಂದರೆ ಹೆಚ್ಚಾಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಬುಧವಾರ ತಾಲ್ಲೂಕಿನ ನಾರಾಯಣಪುರ ಚೆಕ್‌ಪೋಸ್ಟ್ ಹಾಗೂ ಮಾಳನೂರ ಚೆಕ್‌ಪೋಸ್ಟ್‌ಗೆ ಹುಣಸಗಿ ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

‘ನಾರಾಯಣಪುರ ಚೆಕ್‌ಪೋಸ್ಟ್‌ ನಲ್ಲಿ 322 ಹಾಗೂ ಮಾಳನೂರ ಚೆಕ್‌ಪೋಸ್ಟ್‌ನಲ್ಲಿ 177 ಜನರಿಗೆ ಕೋವಿಡ್ ತಪಾಸಣೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಖಾಸಗಿ ಬಸ್, ಕಾರು, ಜೀಪ್‌ಗಳ ಮೂಲಕ ಕೂಲಿ ಕಾರ್ಮಿಕರು ಸ್ವ ಗ್ರಾಮಕ್ಕೆ ಹಿಂದಿರುಗಿದ್ದರಿಂದಾಗಿ ಚೆಕ್‌ ಪೋಸ್ಟ್‌ಗಳಲ್ಲಿ ವಾಹನಗಳನ್ನು ತಡೆದು ಎಲ್ಲಾ ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಬೆಂಗಳೂರು, ಉಡುಪಿ, ಮಂಗಳೂರು, ಮಹಾರಾಷ್ಟ್ರ ಸೇರಿದಂತೆ ಇತರ ನಗರಗಳಿಂದ ಜನ ಮರಳುತ್ತಿದ್ದಾರೆ’ ಎಂದರು.

‘ಪ್ರತಿಯೊಬ್ಬರೂ ಹೋಂ ಕ್ವಾರಂಟೈನ್ ಇರಲು ಸೂಚಿಸಲಾಗಿದೆ. ಮನೆಯ ಒಂದು ಕೋಣೆಯಲ್ಲಿ 15 ದಿನಗಳವರೆಗೆ ಇರಬೇಕು. ಈ ಸಮಯದಲ್ಲಿ ಮನೆಯ ಇತರ ಸದಸ್ಯರ ಜೊತೆ ಸಂಪರ್ಕಕ್ಕೆ ಬರಬಾರದು ಮತ್ತು ಮನೆ ಬಿಟ್ಟು ಹೊರಗೆ ಸಂಚರಿಸದಂತೆ ಸೂಚಿಸಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.