ADVERTISEMENT

ಚೌಡಯ್ಯನವರ ಆದರ್ಶ ಅಳವಡಿಸಿಕೊಳ್ಳಿ: ಡಾ. ಶರಣಭೂಪಾಲರೆಡ್ಡಿ ನಾಯ್ಕಲ್‌

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 11:23 IST
Last Updated 22 ಜನವರಿ 2020, 11:23 IST
ಯಾದಗಿರಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು
ಯಾದಗಿರಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು   

ಯಾದಗಿರಿ: ಅಂಬಿಗರ ಚೌಡಯ್ಯನವರ ವಚನಗಳಲ್ಲಿನ ಸಾರಗಳು ಅರ್ಥಪೂರ್ಣವಾಗಿದ್ದು, ಅವುಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ನಾಯ್ಕಲ್‌ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಮಾರ್ಲಾಪಣೆ ಮಾಡಿ ಮಾತನಾಡಿದರು.

ನಿಜಶರಣ ಅಂಬಿಗರ ಚೌಡಯ್ಯನವರ ವಚನ ಸಾಹಿತ್ಯವನ್ನು ಓದಿ ಪ್ರತಿಯೊಬ್ಬರೂ ಅರಿತುಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದರು.

ADVERTISEMENT

ಪಕ್ಷದ ಮುಖಂಡ ನಗರಸಭೆ ಸದಸ್ಯ ಲಲಿತಾ ಅನಪುರ, ಪಕ್ಷದ ನಗರ ಅಧ್ಯಕ್ಷ ಸುರೇಶ ಅಂಬಿಗೇರ, ನಗರಸಭೆ ಸದಸ್ಯ ಹಣಮಂತ ಇಟಗಿ, ವೆಂಕಟರಡ್ಡಿ ಅಬ್ಬೆತುಮಕೂರ, ವಿಲಾಸ ಪಾಟೀಲ, ಸ್ವಾಮಿದೇವ ದಾಸನಕೇರಿ, ಗೋಪಾಲ ದಾಸನಕೇರಿ, ಅಂಬಯ್ಯ ಶಾಹಾಬಾದಿ, ಚಂದ್ರಶೇಖರ ಕಡೇಚೂರ, ಆನಂದ ಗಡ್ಡಿಮನಿ, ಶರಣಗೌಡ ಅಲಿಪುರ, ರಾಜಶೇಖರ ಕಾಡಮನ್ನೂರ, ಎಸ್.ಪಿ.ನಾಡೇಕರ್, ಸುನೀತಾ ಚವಾಣ್ ಇದ್ದರು.

ಶುಭಮ ಪದವಿ ಮಹಾವಿದ್ಯಾಲಯ: ಸಮಾಜದಲ್ಲಿದ್ದ ಭೇದಭಾವ, ಜಾತಿ ವೈಷಮ್ಯ, ಮೂಢನಂಬಿಕೆ, ಕಂದಚಾರಗಳನ್ನು ವಚನಗಳ ಮೂಲಕ ಖಂಡಿಸಿ ಜಾಗೃತಿ ಮೂಡಿಸಿದ್ದ ಅಂಬಿಗರ ಚೌಡಯ್ಯ ಇತರೆ ಶರಣರಿಗಿಂತ ಭಿನ್ನ ಎಂದು ಶುಭಮ ಕಾಲೇಜಿನ ಪ್ರಾಂಶುಪಾಲ ಪ್ರೊ.‌ಎಸ್.ಬಿ.ರ್‍ಯಾಖಾ ಅಭಿಪ್ರಾಯ ಪಟ್ಟರು.

ನಗರದ ಸುಭಮ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಅವರು ಮಾತನಾಡಿದರು.

ಉಪನ್ಯಾಸಕ ಗುರು ಪ್ರಸಾದ್ ವೈದ್ಯ ಮಾತನಾಡಿ, ರಾಜ್ಯಕ್ಕೆ ಸೀಮಿತವಾಗಿದ್ದ ವಚನ ಸಾಹಿತ್ಯ ಚಳವಳಿಯನ್ನು ದಕ್ಷಿಣ ಭಾರತದೆಲ್ಲೆಡೆ ವಿಸ್ತರಿಸಿದ್ದು ವಚನಕಾರ ಅಂಬಿಗರ ಚೌಡಯ್ಯ ಎಂದು ಹೇಳಿದರು.

ಉಪನ್ಯಾಸಕ ವಿವೇಕ್ ಸಿಂದಗಿ, ಶರತ್ ಹಿರೇಮಠ, ರಾಜೇಶ್, ಶಹನಾಜ್, ರೇಖಾ ವಿದ್ಯಾರ್ಥಿಗಳು ಇದ್ದರು.

ಕರವೇ ಕಚೇರಿ:ಚೌಡಯ್ಯನವರನ್ನು ಕೇವಲ ಒಂದೇ ಜಾತಿಗೆ ಸೀಮಿತಿಗೊಳಿಸಬಾರದು ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಹೇಳಿದರು.

ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ ಅಂಬಿಗರ ಚೌಡಯ್ಯನವರ ಜಯಂತಿಯಲ್ಲಿ ಮಾತನಾಡಿದರು.

ತಾಲೂಕಾಧ್ಯಕ್ಷ ಮಲ್ಲು ಮಾಳಿಕೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ, ವಿಶ್ವರಾಧ್ಯ ದಿಮ್ಮೆ, ಅಮರೇಶ ಹತ್ತಿಮನಿ, ಯಮನಯ್ಯ ಗುತ್ತೇದಾರ, ಸಾಹೇಬಗೌಡ ನಾಯಕ, ದೀಪಕ್ ಒಡೆಯರ್, ನಾಗು ತಾಂಡೂರಕರ್, ವಿಜಯ ರಾಠೋಡ, ಅಬ್ದುಲ್ ಅಜೀಜ್, ದುರ್ಗಪ್ಪ ಭಜಂತ್ರಿ, ಭೀಮು ಕೂಯಿಲೂರ, ಶರಣು ಚಟ್ನಳ್ಳಿ, ಕಾಶಿ ನಾಯಕ, ವಿಶ್ವ, ಸುನೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.