ಯಾದಗಿರಿ: ಸಾಲ ಮರು ಪಾವತಿಸದಿರುವುದಕ್ಕೆ ಯುವಕನನ್ನು ಕೊಲೆ ಮಾಡಿರುವ ಘಟನೆ ನಗರದ ಲಾಡಿಸ್‌ಗಲ್ಲಿಯಲ್ಲಿ ನಡೆದಿದೆ.
ಖಾಸೀಂ ಅಲಿಯಾಸ್ ಬಿಲ್ಲಿ (28) ಮೃತ ವ್ಯಕ್ತಿ. ₹30 ಸಾವಿರ ಸಾಲ ಮರು ಪಾವತಿಸುವುದು ತಡವಾಗಿದಕ್ಕೆ ಖಾಸಿಂ ಮೇಲೆ ಯಾಸೀನ್ ಎಂಬಾತ ಹಲ್ಲೆ ಮಾಡಿದ್ದಾನೆ.
ಮೃತ ಖಾಸೀಂ ಯಾಸೀನ್ ಬಳಿ ₹30 ಸಾವಿರ ಸಾಲ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 19ರಂದು ಸಾಲ ಮರುಪಾವತಿಸುವಂತೆ ಖಾಸೀಂನನ್ನು ಯಾಸೀನ್ ಕೇಳಿದ್ದ. ಆದರೆ, ಸ್ವಲ್ಪ ದಿನ ಸಮಯ ನೀಡುವಂತೆ ವಿನಂತಿ ಮಾಡಿದ್ದನು. ಆದರೆ, ಖಾಸೀಂ ಮೇಲೆ ಯಾಸೀನ್ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬಳಿಕ ಖಾಸೀಂನನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ರವಾನಿಸಲಾಗಿತ್ತು. ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಖಾಸೀಂ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ‘ಯಾಸೀನ್ ಬಳಿ ಖಾಸೀಂ ₹30 ಸಾವಿರ ಸಾಲ ಪಡೆದಿದ್ದ. ಆದರೆ, ಹಿಂತಿರುಗಿಸಿಲ್ಲ. ಈ ಕಾರಣಕ್ಕೆ ಹಲ್ಲೆ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ನಾಲ್ಕು ದಿನಗಳ ನಂತರ ಖಾಸೀಂ ಸಾವನ್ನಪ್ಪಿದ್ದಾನೆ’ ಎಂದು ತಿಳಿಸಿದರು.
ಆರೋಪಿ ಯಾಸೀನ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.