ADVERTISEMENT

ನಿರಂತರ ವಿದ್ಯುತ್ ಪೂರೈಕೆ ಭರವಸೆ

ಹುಣಸಗಿ; ಇಇ ಭರವಸೆ ಬಳಿಕೆ ಧರಣಿ ವಾಪಸ್

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 6:38 IST
Last Updated 20 ಅಕ್ಟೋಬರ್ 2022, 6:38 IST
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ವಲಯದ ಹಳ್ಳಿಗಳಿಗೂ ನಿರಂತರ ಜ್ಯೋತಿ ವಿದ್ಯುತ್ ಸರಬರಾಜಿಗೆ ಒತ್ತಾಯಿಸಿ ಎರಡು ದಿನದಿಂದ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಮಂಗಳವಾರ ಜೆಸ್ಕಾಂ ಇಇ ರಾಘವೇಂದ್ರ ಭೇಟಿ ನೀಡಿ ಮನವಿ ಸ್ವೀಕರಿಸಿದರು
ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ವಲಯದ ಹಳ್ಳಿಗಳಿಗೂ ನಿರಂತರ ಜ್ಯೋತಿ ವಿದ್ಯುತ್ ಸರಬರಾಜಿಗೆ ಒತ್ತಾಯಿಸಿ ಎರಡು ದಿನದಿಂದ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಮಂಗಳವಾರ ಜೆಸ್ಕಾಂ ಇಇ ರಾಘವೇಂದ್ರ ಭೇಟಿ ನೀಡಿ ಮನವಿ ಸ್ವೀಕರಿಸಿದರು   

ಹುಣಸಗಿ: ಕೊಡೇಕಲ್ಲ ವಲಯದ 37 ಹಳ್ಳಿಗಳಿಗೂ ನಿರಂತರ ಜ್ಯೋತಿ ವಿದ್ಯುತ್ ಸರಬರಾಜು ಮತ್ತು ಕೊಡೇಕಲ್ಲ ಪಟ್ಟಣಕ್ಕೆ ಪ್ರತ್ಯೇಕ ಫಿಡರ್ ಅಳವಡಿಕೆ ಮಾಡುವಂತೆ ಒತ್ತಾಯಿಸಿ ಎರಡು ದಿನದಿಂದ ನಡೆದ ಧರಣಿ ಸ್ಥಳಕ್ಕೆ ಮಂಗಳವಾರ ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ಆಗಮಿಸಿ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕರವೇ (ಪ್ರವೀಣ್ ಶೆಟ್ಟಿ) ಬಣದ ತಾಲ್ಲೂಕು ಅಧ್ಯಕ್ಷ ರಮೇಶ ಬಿರಾದಾರ ಮಾತನಾಡಿ, ನಮ್ಮ ಬೇಡಿಕೆ ಬಗ್ಗೆ ಸಾಕಷ್ಟು ಸಲ ಮನವಿ ಮಾಡಿಕೊಂಡಿದ್ದೇವು, ಆದರೆ ಜೆಸ್ಕಾಂ ಅಧಿಕಾರಿಗಳು ಸ್ಪಂದಿಸಿಲ್ಲ ಆದ್ದರಿಂದ ಧರಣಿ ಹಮ್ಮಿಕೊಳ್ಳುವಂತಾಗಿತ್ತು ಎಂದರು.

ಇಇ ರಾಘವೇಂದ್ರ ಅವರು ಮಾತನಾಡಿ, 10 ದಿನದ ತಮ್ಮ ಸಮಸ್ಯೆ ಬಗೆ ಹರಿಸುವದಾಗಿ ಲಿಖಿತ ಭರವಸೆ ನೀಡಿದ್ದರಿಂದ ಧರಣಿ ಅಂತ್ಯಗೊಳಿಸಿದರು.
ತಾಲ್ಲೂಕು ಗೌರವಾಧ್ಯಕ್ಷ ಶಿವರಾಜ ಹೊಕ್ರಾಣಿ, ತಾಲ್ಲೂಕು ಉಪಾಧ್ಯಕ್ಷ ದೇವರಾಜ ಪಾಟೀಲ, ಕಾರ್ಯದರ್ಶಿ ಅಮರೇಶ ನೂಲಿ, ವಲಯಾಧ್ಯಕ್ಷ ರಮೇಶ ಪೂಜಾರಿ, ಪದಾಧಿಕಾರಿಗಳು
ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.