ADVERTISEMENT

ಸಿಡಿಲಿಗೆ 3 ಮೇಕೆ ಸಾವು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 12:53 IST
Last Updated 27 ಏಪ್ರಿಲ್ 2025, 12:53 IST

ಬದ್ದೇಪಲ್ಲಿ ತಾಂಡಾ (ಸೈದಾಪುರ): ಸಮೀಪದ ಬದ್ದೇಪಲ್ಲಿ ತಾಂಡದಲ್ಲಿ ಭಾನುವಾರ ಮಧ್ಯಾಹ್ನ ಸಿಡಿಲಿಗೆ ಗ್ರಾಮದ ಇಮ್ಲನಾಯಕ ಅವರ ಮೂರು ಮೇಕೆಗಳು ಮೃತಪಟ್ಟಿವೆ.

ಸುಮಾರು ₹40 ಸಾವಿರ ಮೌಲ್ಯದ ಮೇಕೆಗಳು ಮೃತಪಟ್ಟಿವೆ. ಸಂಕಷ್ಟದ ಸಮಯದಲ್ಲಿ ಜೀವನೋಪಾಯಕ್ಕೆ ಅನುಕೂಲವಾಗುವ ನಂಬಿಕೆಯಿಂದ ಸಾಕಿಕೊಂಡಿದ್ದ ಮೇಕೆಗಳು ನೈಸರ್ಗಿಕ ವಿಕೋಪಕ್ಕೆ ತುತ್ತಾಗಿವೆ. ಸರ್ಕಾರ ಸಹಾಯಧನ ಒದಗಿಸಿಕೊಡಬೇಕು ಎಂದು ರೈತ ಅವಲು ತೋಡಿಕೊಂಡರು.

ಮಧ್ಯಾಹ್ನ ಸುಮಾರು 2 ಗಂಟೆಗೆ ಪ್ರಾರಂಭವಾದ ಭಾರಿ ಮಳೆ, ಗಾಳಿ, ಗುಡುಗು-ಸಿಡಿಲಿಗೆ ಅಡವಿಯಲ್ಲಿ ಮೇಯಲು ಹೋದಾಗ ದುರ್ಘಟನೆ ಸಂಭವಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.