
ಕಕ್ಕೇರಾ: ‘ಪಟ್ಟಣದ ಸಮೀಪದ ಬಂಡೊಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ಅವರು ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಸಾಬಯ್ಯ ಗೋನಾಲ ಆರೋಪಿಸಿದ್ದಾರೆ.
‘ಸರ್ಕಾರಿ ಶಾಲೆ ಕಟ್ಟಡ ಶಿಥಿಲಗೊಂಡಿರುತ್ತದೆ. ಕಟ್ಟಡಕ್ಕೆ ಸುಣ್ಣ ಬಣ್ಣವಿಲ್ಲ, ಸಮರ್ಪಕ ಕಲಿಕೆಯಿಲ್ಲ, ಕಲಿಕಾ ಸಾಮಗ್ರಿ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಹೀಗೆ ಹಲವಾರು ವರ್ಷಗಳಿಂದ ಬಂದಂತಹ ಹಣದ ಖರ್ಚು ವೆಚ್ಚಗಳ ಮಾಹಿತಿಯಿಲ್ಲ’ ಎಂದು ದೂರಿದ್ದಾರೆ.
‘ವಿದ್ಯಾರ್ಥಿಗಳ ದಾಖಲಾತಿ 86 ಇದ್ದು, ಹಾಜರಾತಿ 35 ಮಾತ್ರ. ಉಳಿದ ಮಕ್ಕಳ ಪೌಷ್ಠಿಕ ಆಹಾರ ದುರ್ಬಳಕೆ ಮಾಡುತ್ತಿದ್ದು, ಇದರ ಸೂಕ್ತ ದಾಖಲಾತಿಗಳೊಂದಿಗೆ ಬಿಇಒ ಅವರಿಗೆ ಮನವಿ ಮಾಡಿ ವಾರ ಕಳೆದರೂ, ಪ್ರಯೋಜನವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಒಂದು ವಾರದೊಳಗೆ ಸೂಕ್ತ ದಾಖಲಾತಿಗಳನ್ನು ಅಧಿಕಾರಿಗಳು ಪರೀಶಿಲನೆ ಮಾಡಿ, ಮುಖ್ಯಶಿಕ್ಷಕಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ನಮ್ಮ ಶಾಲೆಯಲ್ಲಿ ಯಾವುದೇ ಹಣ ದುರ್ಬಳಕೆಯಾಗಿಲ್ಲ. ಪ್ರತಿಯೊಂದಕ್ಕೂ ದಾಖಲೆಯಿದೆ. ನಾನು ಯಾವುದೇ ತಪ್ಪು ಮಾಡಿಲ್ಲವಿಜಯಲಕ್ಷ್ಮಿ ಮುಖ್ಯಶಿಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.