ಸುರಪುರ: ‘ಬಸವ ಸಂಸ್ಕೃತಿ ಅಭಿಯಾನದ ಬಸವ ರಥ ಬಸವನಬಾಗೇವಾಡಿಯಿಂದ ಹೊರಟಿದ್ದು, 4ರಂದು ಯಾದಗಿರಿಗೆ ಆಗಮಿಸಲಿದೆ. ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು’ ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಸ್ಕೃತಿ ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಯಾದಗಿರಿಯ ಎಸ್.ಎನ್ ಪಾಟೀಲ ಕಲ್ಯಾಣ ಮಂಟಪದಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳೊಂದಿಗೆ ವಚನ ಸಂವಾದದಲ್ಲಿ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಹಾಗೂ ಹುಲಿಕಲ್ ನಟರಾಜ ಅವರಿಂದ ಅನುಭಾವ ನಡೆಯಲಿದೆ’ ಎಂದರು.
‘ಸಂಜೆ 4ಗಂಟೆಗೆ ಸುಭಾಷ್ ವೃತ್ತದಲ್ಲಿ ಬಸವರಥವನ್ನು ಸ್ವಾಗತಿಸಲಾಗುವುದು. ನಂತರ ಸಾಮರಸ್ಯ ನಡೆಗೆ ನಡೆಯಲಿದ್ದು, ಸಂಜೆ 6ಕ್ಕೆ ಕಲ್ಯಾಣ ಮಂಟಪದಲ್ಲಿ ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿಯವರಿಂದ ಉಪನ್ಯಾಸ ಏರ್ಪಡಿಸಿದೆ. ಬಳಿಕ ಉಪನ್ಯಾಸ ಹಾಗೂ ರಾತ್ರಿ ಜಂಗಮದೆಡೆಗೆ ನಾಟಕ ಪ್ರದರ್ಶನ ನಡೆಯಲಿದೆ’ ಎಂದು ತಿಳಿಸಿದರು.
‘ಭಾಲ್ಕಿಯ ಬಸಲಿಂಗ ಪಟ್ಟದ್ದೇವರು, ಗದಗದ ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ, ಇಲಕಲ್‌ನ ಗುರುಮಹಾಂತ ಅಪ್ಪ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಸಂಸದ ಜಿ. ಕುಮಾರನಾಯಕ, ಶಾಸಕರಾದ ಚೆನ್ನಾರಡ್ಡಿ ಪಾಟೀಲ, ಶರಣಗೌಡ ಕಂದಕೂರ, ರಾಜಾ ವೇಣುಗೋಪಾಲನಾಯಕ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.
ನಿಷ್ಠಿ ಕಡ್ಲೆಪ್ಪನವರ ಮಠದ ಪ್ರಭುಲಿಂಗ ಸ್ವಾಮೀಜಿ, ಕೊಡೇಕಲ್ ದುರುದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ, ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಸುರೇಶ ಸಜ್ಜನ್, ಎಚ್.ಸಿ. ಪಾಟೀಲ, ಸೂಗುರೇಶ ವಾರದ, ಚಂದ್ರಶೇಖರ ದಂಡಿನ್, ವಕೀಲ ಎಂ.ಎಸ್. ಹಿರೇಮಠ ಮಾತನಾಡಿದರು.
ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಗುಂಡಣ್ಣ ಕಲಬುರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ ಗುಳಬಾಳದ ಮರಿಹುಚ್ಚೇಶ್ವರ ಸ್ವಾಮೀಜಿ, ಬಲಶೆಟ್ಟಿಹಾಳದ ಸಿದ್ದಲಿಂಗ ದೇವರು, ದೇವಾಪುರದ ರವಿ ಮುತ್ಯಾ, ಬಸವರಾಜ ಜಮದ್ರಖಾನಿ, ರವೀಂದ್ರ ಅಂಗಡಿ, ಸಿದ್ದಯ್ಯಸ್ವಾಮಿ ಕಡ್ಲೆಪ್ಪನವರ ಮಠ, ವಿರೇಶ ದೇಶಮುಖ, ಮಲ್ಲಣ್ಣ ಸಾಹುಕಾರ ನರಸಿಂಗಪೇಟ, ಮಲ್ಲಿಕಾರ್ಜುನ ಸತ್ಯಂಪೇಟೆ, ಶರಣಪ್ಪ ಕಲಕೇರಿ, ಶಿವಶರಣಪ್ಪ ಹೆಡಗಿನಾಳ, ಸೋಮಶೇಖರ ಶಾಬಾದಿ, ನಿಂಗಣ್ಣ ರಾಯಚೂರಕರ್, ವಿಶ್ವನಾಥರಡ್ಡಿ ಗೊಂದಡೆಗಿ, ಸಿದ್ದನಗೌಡ ಪಾಟೀಲ, ಅರುಣಕುಮಾರ ಗೋಲಗೇರಿ, ಅಮರೇಶ ಕುಂಬಾರ, ಶಿವರುದ್ರ ಉಳ್ಳಿ, ಮಲ್ಲು ಬಾದ್ಯಾಪುರ ಉಪಸ್ಥಿತರಿದ್ದರು.
ಪ್ರಕಾಶ ಅಂಗಡಿ ನಿರೂಪಿಸಿದರು. ಶಿವರಾಜ ಕಲಕೇರಿ ಸ್ವಾಗತಿಸಿದರು. ಜಗದೀಶ ಪಾಟೀಲ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.