ADVERTISEMENT

ಬಯಲಾಟ ನಮ್ಮ ಸಂಸ್ಕೃತಿಯ ಪ್ರತೀಕ: ವಿಶ್ವಾರಾಧ್ಯ ಶಿವಾಚಾರ್ಯರು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 7:14 IST
Last Updated 12 ಫೆಬ್ರುವರಿ 2026, 7:14 IST
ಹುಣಸಗಿ ಪಟ್ಟಣದಲ್ಲಿ ಗ್ರಾಮ ದೇವತೆಯ ಜಾತ್ರೆ ಮಹೋತ್ಸವದ ನಿಮಿತ್ತ ಶ್ರೀದೇವಿ ಮಹಾತ್ಮೆ ಬಯಲಾಟ ಪ್ರದರ್ಶನ ನಡೆಯಿತು
ಹುಣಸಗಿ ಪಟ್ಟಣದಲ್ಲಿ ಗ್ರಾಮ ದೇವತೆಯ ಜಾತ್ರೆ ಮಹೋತ್ಸವದ ನಿಮಿತ್ತ ಶ್ರೀದೇವಿ ಮಹಾತ್ಮೆ ಬಯಲಾಟ ಪ್ರದರ್ಶನ ನಡೆಯಿತು   

ಹುಣಸಗಿ: ‘ಬಯಲಾಟ, ದೊಡ್ಡಾಟ ಮುಂತಾದ ಕಲಾ ಪ್ರಕಾರಗಳು ನಮ್ಮ ಸಂಸ್ಕೃತಿ, ಪರಂಪರೆ, ದೇವತಾ ಶಕ್ತಿಯನ್ನು ಜನರಿಗೆ ತಿಳಿಪಡಿಸುವ ಸಂಸ್ಕೃತಿಯ ಪ್ರತೀಕ’ ಎಂದು ಮಾಗಣಗೇರಿಯ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.

ಹುಣಸಗಿ ಪಟ್ಟಣದಲ್ಲಿ ಶ್ರೀದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಶ್ರೀದೇವಿ ಮಹಾತ್ಮೆ ಬಯಲಾಟ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ದೇವಿಯ ಮಹಾತ್ಮೆಯನ್ನು ತಿಳಿದುಕೊಂಡು ಎಲ್ಲರು ಒಳ್ಳೇಯ ಮಾರ್ಗದಲ್ಲಿ ನಡೆಯಿರಿ’ ಎಂದರು.

ADVERTISEMENT

ವಿರಘಟ್ಟದ ಅಡವಿಲಿಂಗ ಸ್ವಾಮೀಜಿ ಹಾಗೂ ಗುಳಬಾಳದ ಮರಿ ಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ, ‘ನಮ್ಮಲ್ಲಿರುವ ಅರಿಷಡ್ವರ್ಗಗಳೆಂಬ ಅಸೂರಿ ಗುಣಗಳನ್ನು ದೂರಮಾಡಿಕೊಳ್ಳಲು ಇಂತಹ ಕಥಾ ಪ್ರಸಂಗಗಳು ಹೆಚ್ಚು ಸಹಕಾರಿಯಾಗಿವೆ. ದುಷ್ಟರನ್ನು ಶ್ರೀದೇವಿ ಸಂಹರಿಸುವ ಮೂಲಕ ಶಿಷ್ಟರ ಪರಿಪಾಲನೆ ಮಾಡಿದ್ದಾಳೆ. ಅದರಂತೆ ನಮ್ಮಲ್ಲಿನ ತಾಮಸಿ ಗುಣಗಳನ್ನು ದೂರಮಾಡಿಕೊಳ್ಳುವ ಮೂಲಕ ಮನೆ ಹಾಗೂ ಸಮಾಜಕ್ಕೂ ಹಿತಕಾರಿಯಾಗಿ ಜೀವನ ನಡೆಸಬೇಕು’ ಎಂದರು.

ಮುದನೂರು ಕಂಠಿಮಠದ ಸಿದ್ಧ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಪ್ರತಿಯೊಬ್ಬರಲ್ಲಿರುವ ಅವಗುಣಗಳನ್ನು ದೂರಮಾಡುವಂತಾಗಲು ಹಾಗೂ ಒಳ್ಳೆಯ ಮಾರ್ಗದಲ್ಲಿ ನಡೆಯುವಂತಾಗಲು ದೊಡ್ಡಾಟ, ಬಯಲಾಟಗಳು ದಾರಿ ತೋರುತ್ತವೆ. ನಮ್ಮ ಭಾಗವು ಮಹಾನ್‌ ಶರಣರು, ಸಂತರು, ದಾಸರು ನಡೆದಾಡಿದ ಪುಣ್ಯಭೂಮಿಯಾಗಿದೆ. ಅವರ ದಾರಿಯನ್ನೇ ಅನುಸರಿಸಿಕೊಂಡು ನಡೆಯುವ ಮೂಲಕ ಒಳ್ಳೇಯ ಜೀವನ ನಡೆಸಬೇಕು’ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಪಟ್ಟಣ ಪಂಚಾಯಿತಿ ಸದಸ್ಯರಾದ ಸಿದ್ದು ಮುದಗಲ್ಲ, ಶರಣು ದಂಡಿನ್‌, ಹಿರಿಯರಾದ ಬಸವರಾಜ ಮಲಗಲದಿನ್ನಿ, ಅಮರಣ್ಣ ದೇಸಾಯಿ, ಆರ್‌.ಎಂ.ರೇವಡಿ, ಬಸಣ್ಣ ದೇಸಾಯಿ, ಮಹಾಂತೇಶ ಮಲಗಲದಿನ್ನಿ, ಬಸವರಾಜ ಸಜ್ಜನ, ಶಾಂತಪ್ಪ ಬಾಕಲಿ ಹಾಗೂ ನಾಗಯ್ಯಸ್ವಾಮಿ ದೇಸಾಯಿ, ಭೀಮನಗೌಡ ದೇಸಾಯಿ, ಮಲ್ಲು ಹೆಬ್ಬಾಳ, ಬಸವರಾಜ ಹಂಚಲಿ, ಮಲ್ಲನಗೌಡ ದೇವಪುರ, ಬಸನಗೌಡ ದೇವತಕಲ್ಲ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.