
ಯಾದಗಿರಿ: ಇಲ್ಲಿನ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಯಿಮ್ಸ್) ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಬಲಪಡಿಸಲು ಸುಮಾರು ₹ 5 ಕೊಟಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಒದಗಿಸಲಿದೆ.
ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್‌ಆರ್) ನಿಧಿಯಡಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ ತೀವ್ರ ನಿಗಾ ಘಟಕ (ಒಐಸಿಯು) ಮತ್ತು ನವಜಾತ ಶಿಶು ಆರೈಕೆ ಘಟಕಕ್ಕೆ (ಎನ್‌ಐಸಿಯು) ಅತ್ಯಾಧುನಿಕ ಉಪಕರಣಗಳನ್ನು ಕಲ್ಪಿಸಲು ಮುಂದೆ ಬಂದಿದೆ. ತಾನು ಒದಗಿಸಲಿರುವ ಉಪಕರಣಗಳ ಪಟ್ಟಿಯನ್ನು ‘ಯಿಮ್ಸ್’ಗೆ ನೀಡಿದೆ.
ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಾಗಿದ್ದ ದಶಕಗಳ ಹಿಂದಿನ ಹಳೇ ಕಟ್ಟಡವು ಈಗ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಪ್ರಸ್ತುತ, ₹ 1.50 ಕೋಟಿ ವೆಚ್ಚದಲ್ಲಿ ಕಟ್ಟಡದ ನವೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಇದರ ನಡುವೆ ಇನ್ನಷ್ಟು ವೈದ್ಯಕೀಯ ಉಪಕರಣಗಳು ಆಸ್ಪತ್ರೆಗೆ ಸೇರ್ಪಡೆಯಾಗಲಿವೆ.
ಹೆರಿಗೆ ಮತ್ತು ಮಕ್ಕಳ ತುರ್ತು ಚಿಕಿತ್ಸೆಯಂತಹ ಗಂಭೀರ ಸಮಸ್ಯೆ ಎದುರಾದ ಸಂದರ್ಭದಲ್ಲಿ ರೋಗಿಗಳು ನೆರೆಯ ರಾಯಚೂರಿನ ‘ರಿಮ್ಸ್’, ಕಲಬುರಗಿಯ ’ಜಿಮ್ಸ್’ಗೆ, ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದರು. ಸುಧಾರಿತ ಉಪಕರಣಗಳ ಲಭ್ಯತೆಯಿಂದ ಮುಂದಿನ ದಿನಗಳಲ್ಲಿ ರೋಗಿಗಳಿಗೆ ಮತ್ತಷ್ಟು ಅತ್ಯಾಧುನಿಕ ಆರೋಗ್ಯ ಸೇವೆಯು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದೊರೆಯಲಿದೆ ಎಂಬುದು ‘ಯಿಮ್ಸ್’ ಆಡಳಿತ ಮಂಡಳಿಯ ವಿಶ್ವಾಸ.
ಒಐಸಿಯುಗೆ ಯಾವೆಲ್ಲ ಉಪಕರಣಗಳು ಸೇರ್ಪಡೆ: ಏರ್ ಕಂಪೋಸರ್, ನೆಬ್ಯುಲೈಸರ್ ಸಹಿತ ಐಸಿಯು ವೆಂಟಿಲೇಟರ್ , 5 ಪ್ಯಾರಾ ಮಾನಿಟರ್ ಹಾಗೂ ಇನ್‌ಫ್ಯುಸನ್ ಪಂಪ್ ತಲಾ 10, ಸಿರಿಂಜ್ ಪಂಪ್ 20, 12 ಲೀಡ್ಸ್ ಇಸಿಜಿ ಮಷಿನ್, ಎಬಿಜಿ ಮಷಿನ್, ಪೋರಬಲ್ ಯುಎಸ್‌ಜಿ ಮಷಿನ್, ಪೋರಬಲ್ ಎಕ್ಸ್‌ರೆ ಮಷಿನ್, ಟ್ರಾನ್ಸ್‌ಪೋರ್ಟ್ ವೆಂಟಿಲೇಟರ್ (ಪೋರ್ಟಬಲ್), ವೆನ್ ವೀವರ್ ಹಾಗೂ ಮಾನಿಟರ್ ಸಹಿತ ವಿಡಿಯೊ ಲಾರಿಂಗೊಸ್ಕೋಪ್ ತಲಾ ಒಂದೊಂದು, ಫೋಟಲ್ ಡಾಪ್ಲರ್ 5 ಸೇರಿ ರೋಗಿಯ ತಪಾಸಣೆಯಲ್ಲಿ ನೆರವಾಗುವ ಲೈಟ್‌ನಂತಹ ವೈದ್ಯಕೀಯ ಉಪಕರಣಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ನೀಡಲಿದೆ.
ವೈದ್ಯಕೀಯ ಉಪಕರಣಗಳ ಜೊತೆಗೆ ಬೆಡ್ ಸಹಿತಿ 10 ಐಸಿಯು ಕಾಟ್, ನಾಲ್ಕು ಏರ್ ಬೆಡ್, ತಲಾ ಎರಡು ಐಸಿಯು ಟ್ರೋಲಿ, ಗಾಲಿ ಕುರ್ಚಿ, ಬ್ಲಡ್ ವಾರ್ಮರ್, ಹಾಟ್ ಏರ್ ಬ್ಲೊವರ್, ವಾಟರ್ ಬೆಡ್, 10 ಕಾರ್ಡಿಯಕ್ ಐಸಿಯು ಟೇಬಲ್ (ಚಲಿಸುವ), ರೆಫ್ರಿಜರೇಟರ್, ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್‌ಗಳನ್ನು ಸಿಎಸ್‌ಆರ್ ಅಡಿ ಕಲ್ಪಿಸಲಿದೆ.
ಬಿಇಎಲ್‌ನ ಆಡಳಿತ ಮಂಡಳಿಯು ಆಸ್ಪತ್ರೆಗೆ ಭೇಟಿ ನೀಡಿ ಉಪಕರಣಗಳ ಅಳವಡಿಕೆಗೆ ಪರಿಶೀಲನೆ ನಡೆಸಲಿದೆ. ಹೆಚ್ಚುವರಿ ಉಪಕರಣಗಳ ಲಭ್ಯತೆಯಿಂದ ಚಿಕಿತ್ಸೆಯ ಗುಣಮಟ್ಟ ಸುಧಾರಿಸಲಿದ್ದು ಗಂಭೀರ ಪ್ರಕರಣಗಳನ್ನು ನಿರ್ವಹಣೆ ಮಾಡಬಹುದುಡಾ.ಶಿವಕುಮಾರ 'ಯಿಮ್ಸ್’ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥ
ಎನ್‌ಐಸಿಯುಗೆ ಸುಧಾರಿತ ಇನ್‌ಕ್ಯುಬೇಟರ್ ಆಕ್ಸಿಮೀಟರ್ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಎನ್‌ಐಸಿಯುಗೆ ಸುಧಾರಿತ ನಿಯೊನಟಲ್ ಇನ್‌ಕ್ಯುಬೇಟರ್ (5) ಇನ್‌ಫ್ಯಾಂಟ್ ರೇಡಿಯಂಟ್ ಹೀಟ್ ವಾರ್ಮರ್ (15) ಮಸಿಮೊ ಪಲ್ಸಸ್ ಆಕ್ಸಿಮೀಟರ್ (15) ನಿಯೊನಟಲ್ ಎಚ್‌ಎಫ್‌ಒ ವೆಂಟಿಲೇಟರ್ (5) ಫೋಟೊ ಥೆರಪಿ ಯುನಿಟ್ಸ್ (10) ಮಲ್ಟಿಪ್ಯಾರಾ ಮಾನಿಟರ್ (15) ಇನ್‌ಫ್ಯುಸನ್ ಪಂಪ್ (20) ಸಿರಿಂಜ್ ಪಂಪ್ (20) ಆರೋಗ್ಯ ಸೇವೆಗಾಗಿ ಕೊಡುಗೆಯಾಗಿ ನೀಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.