ADVERTISEMENT

ತ್ರಿವಳಿ ಮಕ್ಕಳ ಹಾಲಿಗಾಗಿ ಹಸು ದಾನ: ಶ್ರಣೀಕಕುಮಾರ ದೋಖಾ ಅವರ ಮಾದರಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 2:39 IST
Last Updated 7 ಸೆಪ್ಟೆಂಬರ್ 2020, 2:39 IST
ಯಾದಗಿರಿ ತಾಲ್ಲೂಕಿನ ರಾಮಸಮುದ್ರಾ ಗ್ರಾಮದಲ್ಲಿ ತ್ರಿವಳಿ ಮಕ್ಕಳನ್ನು ಹೆತ್ತ ಪದ್ಮಮ್ಮ ನಾಗರಾಜ ಕುಟುಂಬಕ್ಕೆ ಜಿ.ಪಂ. ಮಾಜಿ ಉಪಾಧ್ಯಕ್ಷ ಶ್ರಣೀಕಕುಮಾರ ದೋಖಾ ಅವರು ನೀಡಿದ ಹಸು ಮತ್ತು ಕರುವನ್ನು ಪೂಜಿಸಲಾಯಿತು
ಯಾದಗಿರಿ ತಾಲ್ಲೂಕಿನ ರಾಮಸಮುದ್ರಾ ಗ್ರಾಮದಲ್ಲಿ ತ್ರಿವಳಿ ಮಕ್ಕಳನ್ನು ಹೆತ್ತ ಪದ್ಮಮ್ಮ ನಾಗರಾಜ ಕುಟುಂಬಕ್ಕೆ ಜಿ.ಪಂ. ಮಾಜಿ ಉಪಾಧ್ಯಕ್ಷ ಶ್ರಣೀಕಕುಮಾರ ದೋಖಾ ಅವರು ನೀಡಿದ ಹಸು ಮತ್ತು ಕರುವನ್ನು ಪೂಜಿಸಲಾಯಿತು   

ಯಾದಗಿರಿ: ನಗರದ ಜಿಲ್ಲಾಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಲ್ಲೂಕಿನ ರಾಮಸಮುದ್ರಾ ಗ್ರಾಮದ ಪದ್ಮಮ್ಮ ನಾಗರಾಜ ಅವರ ಕುಟುಂಬಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶ್ರಣೀಕಕುಮಾರ ದೋಖಾ ಅವರು ಹಸುವನ್ನು ದಾನವಾಗಿ ನೀಡಿದ್ದಾರೆ.

ಎದೆಹಾಲು ಮೂರೂ ಮಕ್ಕಳಿಗೆ ಸಾಲದಾಗಿವೆ ಎಂದು ಪದ್ಮಾ ಅವರು ಅಲವತ್ತುಕೊಂಡದ್ದನ್ನು ತಿಳಿದ ದೋಖಾ ಅವರು ಹತ್ತಿರದ ಕಣೇಕಲ್ ಗ್ರಾಮದಲ್ಲಿನ ಹಸು ಮತ್ತು ಕರುವನ್ನು ₹15,000 ಕ್ಕೆ ಖರೀದಿಸಿ ಕುಟುಂಬಕ್ಕೆ ಹಸ್ತಾಂತರಿಸಿದರು.

‘ಬಡ ಕುಟುಂಬಕ್ಕೆ ನೆರವು ನೀಡಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಅದರಂತೆ ತ್ರಿವಳಿ ಮಕ್ಕಳು ಆರೋಗ್ಯಯುತವಾಗಿ ಬೆಳೆಯಲಿ ಎಂಬ ಆಶಯದಿಂದ ಹಸುವನ್ನು ನೀಡಿದ್ದೇನೆ’ ಎಂದು ಶ್ರಣೀಕಕುಮಾರ ದೋಖಾ ತಿಳಿಸಿದರು.

ADVERTISEMENT

ಜನಸೇನಾ ಸಂಘಟನೆಯ ಮೈಲಾರಪ್ಪ ಜಾಗಿರದಾರ್, ಮಂಜು ನಾಥ ಬಡಿಗೇರ, ಶರೀಫ್ ಹಾಗೂ ಪದ್ಮಮ್ಮ ಕುಟುಂಬಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.