ADVERTISEMENT

ಭಾರತ ಇತಿಹಾಸದಲ್ಲಿ ಶಿವಾಜಿ ಚಿರಸ್ಥಾಯಿ: ಸಿದ್ದಣ್ಣಗೌಡ ಕಾಡಂನೋರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 5:47 IST
Last Updated 21 ಫೆಬ್ರುವರಿ 2026, 5:47 IST
ವಡಗೇರಾ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಸೇನೆ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಶಿವಾಜಿ ಭಾವಚಿತ್ರಕ್ಕೆ ಜಿಪಂ ಮಾಜಿ ಸದಸ್ಯ ಸಿದ್ದಣ್ಣಗೌಡ ಕಾಡಂನೋರ ಪೂಜೆ ಸಲ್ಲಿಸಿ ಮಾತನಾಡಿದರು
ವಡಗೇರಾ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಸೇನೆ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಶಿವಾಜಿ ಭಾವಚಿತ್ರಕ್ಕೆ ಜಿಪಂ ಮಾಜಿ ಸದಸ್ಯ ಸಿದ್ದಣ್ಣಗೌಡ ಕಾಡಂನೋರ ಪೂಜೆ ಸಲ್ಲಿಸಿ ಮಾತನಾಡಿದರು   

ವಡಗೇರಾ: ‘ಬಾಲ್ಯದಲ್ಲಿಯೆ ತನ್ನ ತಾಯಿಯಾದ ಜೀಜಾಬಾಯಿಯಿಂದ ಶಿವಾಜಿ ಮಹಾರಾಜರು ಧೈರ್ಯ, ದೇಶಪ್ರೇಮ ಸ್ವಾತಂತ್ರದ ಬಗ್ಗೆ ತಿಳಿದುಕೊಂಡು ಮುಂದೆ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ’ ಎಂದು ಜಿಪಂ ಮಾಜಿ ಸದಸ್ಯ ಸಿದ್ದಣ್ಣಗೌಡ ಕಾಡಂನೋರ ಹೇಳಿದರು.

ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಸೇನೆ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಭಾರತದ ಇತಿಹಾಸವನ್ನು ಅವಲೋಕನ ಮಾಡಿದಾಗ ಇತಿಹಾಸದಲ್ಲಿ ಅಪ್ರತಿಮ ವೀರ ಮತ್ತು ದಕ್ಷ ಆಡಳಿತಗಾರಾಗಿ ಚಿರಸ್ಥಾಯಿಯಾಗಿರುವ ಶಿವಾಜಿಯವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಸ್ವಾತಂತ್ರದ ಕನಸ್ಸನ್ನು ನನಸ್ಸು ಮಾಡಿ ಸಾವಿನ ನಂತರವೂ ಪ್ರಬಲ ಶಕ್ತಿ ಜನಪ್ರಿಯತೆಯನ್ನು ಉಳಿಸಿಕೊಂಡಿರುವವರ ಪಟ್ಟಿಯಲ್ಲಿ ಸೇರಿದ್ದಾರೆ’ ಎಂದರು.

ADVERTISEMENT

ಬಿಜೆಪಿಯ ಯುವ ಮುಖಂಡ ಬಸವರಾಜ ಸೊನ್ನದ ಮಾತನಾಡಿ, ‘ಭಾರತ ದೇಶವನ್ನು ಗುಲಾಮಗಿರಿಗೆ ಒಡ್ಡುವ ಸಂದರ್ಭದಲ್ಲಿ ಶಿವಾಜಿ ಮಹಾರಾಜರು ಪ್ರಬಲ ತಡೆಒಡ್ಡಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಮರು ಸ್ಥಾಪಿಸಿದವರು. ಇಂತವರ ಬದುಕು ಹಾಗೂ ದೇಶಪ್ರೇಮವನ್ನು ಪ್ರತಿಯೊಬ್ಬರು ಅನುಸರಿಸಬೇಕು ಹಾಗೆಯೆ ಅವರ ಆಡಳಿತ ಭಾರತದ ಜನರಿಗೆ ಸ್ಪೂರ್ತಿದಾಯಕವಾಗಿದೆ’ ಎಂದು ಹೇಳಿದರು

ಈ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಸಾಬಯ್ಯ ಗುತ್ತೇದಾರ, ಹಣಮಂತ್ರಾಯ ಜಡಿ, ಯಂಕಣ್ಣ ಬಸವಂತಪೂರ, ಶಂಕ್ರಣ್ಣ ಸಾಹು ಕರಣಿಗಿ, ಶರಣು ಕುರಿ, ಬಸ್ಸುಇಟಗಿ, ಹೊನ್ನಪ್ಪ ಕಡೇಚೂರ, ಮಲ್ಲು ಹೇರುಂಡಿ, ಹರ್ಷ ಪಾಟೀಲ್‌ ಕೊಂಕಲ್ ಸೇರಿದಂತೆ ಇನ್ನೀತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.