ADVERTISEMENT

ಬೈಕ್ ಕಳ್ಳತನ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಮೇ 2022, 5:06 IST
Last Updated 7 ಮೇ 2022, 5:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹುಣಸಗಿ: ತಾಲ್ಲೂಕಿನ ಮಾಳನೂರು ಗ್ರಾಮದ ಬಳಿ ಶುಕ್ರವಾರ ಬೆಳಿಗ್ಗೆ ಅನುಮಾನಾಸ್ಪದವಾಗಿ ಸಂಚರಿಸುತ್ತದ್ದ ವ್ಯಕ್ತಿಯನ್ನು ವಿಚಾರಿಸದಾಗ ಆತ ಆರೋಪಿ ಎಂದು ಗೊತ್ತಾಗಿ, ವಿಚಾರಣೆಗೆ ಒಳಪಡಿಸಿದಾಗ ಬೈಕ್ ಕಳ್ಳತನ ಮಾಡಿರುವುದು ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಶ್ರೀಶೈಲ ಹೊಸಮನಿ ಪತ್ತೆಪೂರ ತಾಲ್ಲೂಕು ತಾಳಿಕೋಟೆಯವನಾಗಿದ್ದಾನೆ. 2021ರ ನವೆಂಬರ್‌ 17ರಂದು ಕಾರಿನಲ್ಲಿ ಬಂದು ಸ್ನೇಹಿತರಾದ ಶಂಕ್ರಪ್ಪ, ಅವಿನಾಶ್ ಎಲ್ಲರೂ ಕೂಡಿಕೊಂಡು ಹುಣಸಗಿ ತಾಲ್ಲೂಕಿನ ಹಳ್ಳಿ ಶ್ರೀನಿವಾಸಪುರ ರಸ್ತೆಯಲ್ಲಿ ದ್ವಿ ಚಕ್ರವಾಹನ ಸವಾರನನ್ನು ತಡೆದು ಆತನ ಕಣ್ಣಿಗೆ ಕಾರದ ಪುಡಿ ಎರಚಿ ಆತನ ದ್ವಿ ಚಕ್ರವಾಹನ ಹಾಗೂ ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡಿದ್ದಾಗಿ ತಿಳಿದು ಬಂದಿದೆ.

ಈ ಕುರಿತು ಆರೋಪಿಗಳಾದ ಶ್ರೀಶೈಲ ಹೊಸಮನಿ, ಶಂಕ್ರಪ್ಪ ಹರಿಜನ ಹಾಗೂ ಅವಿನಾಶ ಇವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಯಾದಗಿರಿ ಎಸ್‌‍ಪಿ ಡಾ. ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ. ಇವರಿಂದ ದ್ವಿ ಚಕ್ರವಾಹನ ಹಾಗೂ ಮೊಬೈಲ್ ವಶ ಪಡಿಸಿಕೊಂಡಿದ್ದು, ಇನ್ನೊಬ್ಬ ಆರೋಪಿ ಪತ್ತೆ ಕಾರ್ಯ ನಡೆದಿದೆ.

ADVERTISEMENT

ಹುಣಸಗಿ ಸಿಪಿಐ ದೌಲತ್ ಎನ್.ಕೆ. ನೇತೃತ್ವದಲ್ಲಿ ಪಿಎಸ್‌ಐ ಚಿದಾನಂದ ಸೌದಿ ಹಾಗೂ ತಂಡದ ಎಎಸ್ಐ ಮೌನೇಶ, ಮಾಣಿಕರಡ್ಡಿ, ಶಿವರಾಜ, ಹಣಮಂತ್ರಾಯ, ವಿರೇಂದ್ರ, ಹಣಮಂತ್ರಾಯ, ನಿಂಗಪ್ಪ, ಬಸವರಾಜ, ರವಿಕುಮಾರ, ಲಿಂಗನಗೌಡ, ಅವರಿಗೆ ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.